Kalaburagi ವಚನ ದರ್ಶನ ಪುಸ್ತಕ ಬಿಡುಗಡೆಗೆ ಪ್ರತಿಭಟನೆಯ ಬಿಸಿ : ಹಲವರು ವಶಕ್ಕೆ
ಬಸವಣ್ಣನವರ ಭಾವಚಿತ್ರ ಋಷಿ ಮುನಿಯಂತೆ... ಕೊರಳಲ್ಲಿ ತುಳಸಿ ಮಾಲೆ...
Team Udayavani, Aug 3, 2024, 7:14 PM IST
ಕಲಬುರಗಿ: ವಚನ ದರ್ಶನ ಪುಸ್ತಕ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ ಹಾಗೂ ಬಿಡುಗಡೆ ಸಂದರ್ಭದಲ್ಲಿ ಪ್ರತಿಭಟನೆಯ ಬಿಸಿ ಎದುರಾಯಿತು.
ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಆಶ್ರಯದಲ್ಲಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶನಿವಾರ(ಆಗಸ್ಟ್ 3) ಸಂಜೆ 6 ಕ್ಕೆ ಆಯೋಜಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆರಂಭವಾಗುವ ವೇಳೆ ಸಭಾಂಗಣದೊಳಗೆ ನುಗ್ಗಲು ಯತ್ನಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ರವೀಂದ್ರ ಶಾಬಾದಿ, ಆರ್.ಜಿ. ಶೆಟಕಾರ, ಪ್ರಭುಲಿಂಗ ಮಹಾಗಾಂವಕರ, ಸುನಿಲ್ ಮಾನ್ಪಡೆ ಸೇರಿದಂತೆ ಹಲವರನ್ನು ತಡೆದ ಪೊಲೀಸರು ವಶಕ್ಕೆ ಪಡೆದರು.
ಬಸವಣ್ಣನವರ ಭಾವಚಿತ್ರ ಋಷಿ ಮುನಿಯಂತೆ ಮಾಡಿದ್ದು, ಕೊರಳಲ್ಲಿ ತುಳಸಿ ಮಾಲೆ ಹಾಕಿರುವುದು, ಬಿಲ್ಲು- ಬಾಣಗಳನ್ನು ತೋರಿಸಿರುವುದು ಬಸವಣ್ಣನವರಿಗೆ ಹಾಗೂ ಬಸವ ತತ್ವಕ್ಕೆ ಮಾಡಿದ ಅಪಚಾರ ಎಂದು ಪ್ರತಿಭಟಿಸಿ ಘೋಷಣೆ ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Film Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ನಾಳೆ ತೆರೆಗೆ
Rahul Gandhi ಆಕಸ್ಮಿಕವಾಗಿ ಸಿಕ್ಕಿದರೆ ಓಡಿಹೋಗಲು ಆಗುತ್ತದೆಯೇ: ಪರಂ
Film Release: ಸೆ.13ರಂದು ರಾಜ್ಯಾದ್ಯಂತ “ಕಲ್ಜಿಗ’ ಕನ್ನಡ ಚಲನಚಿತ್ರ ತೆರೆಗೆ
ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ
Kumta ಲಿಫ್ಟ್‌ನಲ್ಲಿ ಎದೆಯ ಭಾಗ ಸಿಲುಕಿ ಕಾರ್ಮಿಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.