Udayavni Special

20 ವರ್ಷದ ನಂತರ ಬೆಂಬಲ ಬೆಲೆಯಡಿ ಹತ್ತಿ ಖರೀದಿ

ಜಿಲ್ಲೆಯ 5,962 ಬೆಳೆಗಾರರಿಂದ ಒಟ್ಟು 88.04 ಕೋಟಿ ರೂ. ಮೌಲ್ಯದ ಹತ್ತಿ ಖರೀದಿ

Team Udayavani, Jul 4, 2020, 5:09 PM IST

04-July-22

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಲಬುರಗಿ: ಲಾಕ್‌ಡೌನ್‌ ಸಂಕಷ್ಟದ ನಡುವೆಯೂ ಜಿಲ್ಲೆಯ ಹತ್ತಿ ಬೆಳೆಗಾರರಲ್ಲಿ ಮೊಗದಲ್ಲಿ ಹರ್ಷದ ಹೊನಲು ಹರಿದಿದೆ. 20 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಬೆಳೆದ ರೈತರಿಂದ ಕೇಂದ್ರ ಸರ್ಕಾರದ ಅಧಿಧೀನ ಸಂಸ್ಥೆಯಾದ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹತ್ತಿ ಖರೀದಿಸಿದೆ.

2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 5,962 ಬೆಳೆಗಾರರಿಂದ ಒಟ್ಟು 88.04 ಕೋಟಿ ರೂ. ಮೌಲ್ಯದ ಹತ್ತಿಯನ್ನು ಸಿಸಿಐ ಖರೀದಿಸಿದೆ. ತಾಲೂಕಿನ ನಂದಿಕೂರನ ಗಜಾನನ ಮಹಾರಾಜ ಹತ್ತಿ ಮಿಲ್‌ ಹಾಗೂ ಜೇವರ್ಗಿ ತಾಲೂಕಿನ ಮಂಜೀತ್‌ ಕಾಟನ್‌ ಮಿಲ್‌ಗ‌ಳನ್ನು ಆಯ್ಕೆ ಮಾಡಿಕೊಂಡು ಹತ್ತಿ ಖರೀದಿಸಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೈಲಜಾ ಎಂ.ವಿ. ತಿಳಿಸಿದ್ದಾರೆ.

ನಂದಿಕೂರನಲ್ಲಿರುವ ಗಜಾನನ ಮಹಾರಾಜ ಹತ್ತಿ ಮಿಲ್‌ ಕಲಬುರಗಿ ಮತ್ತು ಸುತ್ತಮುತ್ತಲಿನ 1,250 ರೈತರಿಂದ 20.07 ಕೋಟಿ ರೂ. ಮೌಲ್ಯದ ಒಟ್ಟು 37,425 ಕ್ವಿಂಟಲ್‌ ಹತ್ತಿ ಖರೀದಿಸಿದೆ. ಅದೇ ರೀತಿ ಜೇವರ್ಗಿಯ ಮಂಜೀತ್‌ ಕಾಟನ್‌ ಮಿಲ್‌ 4,712 ರೈತರಿಂದ 67.97 ಕೋಟಿ ರೂ. ಮೌಲ್ಯದ 1,28,913 ಕ್ವಿಂಟಲ್‌ ಹತ್ತಿ ಖರೀದಿ ಮಾಡಿದೆ. ಹತ್ತಿ ಖರೀದಿ ಪ್ರಮಾಣದಲ್ಲಿ ಯಾವುದೇ ಮಿತಿ ನಿಗದಿಗೊಳಿಸದೆ ಗರಿಷ್ಠ ಪ್ರಮಾಣದಲ್ಲಿ ರೈತರಿಂದ ಹತ್ತಿಯನ್ನು ಖರೀದಿಸಿರುವುದು ಇದೇ ಮೊದಲಾಗಿದೆ. ಪ್ರತಿ ಕ್ವಿಂಟಲ್‌ಗೆ ಗುಣಮಟ್ಟಕ್ಕೆ ಅನುಸಾರವಾಗಿ ಕನಿಷ್ಠ 5,005ರೂ. ದಿಂದ ಗರಿಷ್ಠ 5,950ರೂ. ವರೆಗೆ ಹತ್ತಿ ಖರೀದಿಸಲಾಗಿದೆ. ರೈತರಿಂದ ನಿರಂತರವಾಗಿ ಹತ್ತಿ ಖರೀದಿ ಪ್ರಕ್ರಿಯೆ ಕೈಗೊಳ್ಳುವಲ್ಲಿ ಸಿಸಿಐಯ ಪ್ರಮೋದ, ಮಹೇಶ ಹಾಗೂ ಎಪಿಎಂಸಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎರಡು ಹತ್ತಿ ಕೇಂದ್ರಗಳ ಮೂಲಕ 5,962 ಬೆಳೆಗಾರರಿಂದ 88.04 ಕೋಟಿ ರೂ. ಮೌಲ್ಯದ ಹತ್ತಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಜೇವರ್ಗಿ ಮಿಲ್‌ ಘಟಕದಲ್ಲಿ ಗರಿಷ್ಠ ಪ್ರಮಾಣದ ಹತ್ತಿ ಹಾಗೂ ಹತ್ತಿ ಬೀಜ ಶೇಖರಣೆಯಾಗಿದೆ. ಆದ್ದರಿಂದ ಸಂಸ್ಕರಣೆ ಮತ್ತು ಟೆಂಡರ್‌ ಮೂಲಕ ವಿಲೇವಾರಿ ಮಾಡುವವರೆಗೂ ಜೇವರ್ಗಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಹತ್ತಿ ಖರೀದಿ ನಿಲ್ಲಿಸಲಾಗಿದೆ. ಸ್ಥಳಾವಕಾಶವಾದ ನಂತರ ಖರೀದಿ ಪ್ರಕ್ರಿಯೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಶೈಲಜಾ,
ಕಾರ್ಯದರ್ಶಿ, ಎಪಿಎಂಸಿ

ಟಾಪ್ ನ್ಯೂಸ್

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುವಕನ ಮೇಲೆ ಹಲ್ಲೆ : ಮುಧೋಳ ಪಿಐ ಅಮಾನತು; ಕಾವೇರಿದ ಕಾಂಗ್ರೆಸ್ – ಬಿಜೆಪಿ ಪ್ರತಿಭಟನೆ

ಯುವಕನ ಮೇಲೆ ಹಲ್ಲೆ: ಮುಧೋಳ ಪಿಐ ಅಮಾನತು; ಕಾವೇರಿದ ಕಾಂಗ್ರೆಸ್ – ಬಿಜೆಪಿ ಪ್ರತಿಭಟನೆ

19

ಬಾಲಕಿಯ ಪ್ರಾಣ ಬಲಿ ಪಡೆಯಿತು ದಸರಾ ಘಟ ವಿಸರ್ಜನೆ ಘಟನೆ!

ಭೂಕಂಪನ ಭಯಗ್ರಸ್ತ ಹೊಸಳ್ಳಿ-ಹೆಚ್ ನಲ್ಲಿ ಡಿಸಿ ವಿ.ವಿ. ಜ್ಯೋತ್ಸ್ನಾ ಗ್ರಾಮವಾಸ್ತವ್ಯ

ಭೂಕಂಪನ ಭಯಗ್ರಸ್ತ ಹೊಸಳ್ಳಿ-ಹೆಚ್ ನಲ್ಲಿ ಕಲಬುರಗಿ ಡಿಸಿ ವಿ.ವಿ. ಜ್ಯೋತ್ಸ್ನಾ ಗ್ರಾಮವಾಸ್ತವ್ಯ

5

ಜನರಲ್ಲಿ ಸಾತ್ವಿಕ ಶಕ್ತಿ ಬೆಳೆಸಿ: ಬಬಲಾದ ಶ್ರೀ ಶಿವಮೂರ್ತಿ ಶಿವಾಚಾರ್ಯರು

4

ಭಕ್ತಿ-ಭಾವದ ಮಧ್ಯೆ ಸಡಗರದ ದಸರಾ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

“ಪಂಚಾಯತ್‌ನ ಅಭಿವೃದ್ಧಿ ಕಾರ್ಯ ಶ್ಲಾಘನೀಯ ’

“ಪಂಚಾಯತ್‌ನ ಅಭಿವೃದ್ಧಿ ಕಾರ್ಯ ಶ್ಲಾಘನೀಯ ’

ಚೈತನ್ಯ “ಇನ್ಫಿನಿಟಿ ಲರ್ನ್”ಗೆ ರೋಹಿತ್‌ ಶರ್ಮಾ ರಾಯಭಾರಿ

ಚೈತನ್ಯ “ಇನ್ಫಿನಿಟಿ ಲರ್ನ್”ಗೆ ರೋಹಿತ್‌ ಶರ್ಮಾ ರಾಯಭಾರಿ

ಮಾಜಿ ಸಿಎಂ ದಿ| ಜಯಲಲಿತಾ ದತ್ತು ಪುತ್ರ ಸುಧಾಕರನ್‌ ಬಿಡುಗಡೆ

ಮಾಜಿ ಸಿಎಂ ದಿ| ಜಯಲಲಿತಾ ದತ್ತು ಪುತ್ರ ಸುಧಾಕರನ್‌ ಬಿಡುಗಡೆ

ಧರ್ಮಸ್ಥಳಕ್ಕೆ ಇಂಧನ ಸಚಿವ ಸುನಿಲ್‌ ಕುಮಾರ್‌ ಭೇಟಿ

ಧರ್ಮಸ್ಥಳಕ್ಕೆ ಇಂಧನ ಸಚಿವ ಸುನಿಲ್‌ ಕುಮಾರ್‌ ಭೇಟಿ

ವ್ಯಾಟಿಕನ್‌: ಸಿನೋಡ್‌ ಸಭೆಯಲ್ಲಿ ಜೆಸ್ವಿಟಾ

ವ್ಯಾಟಿಕನ್‌: ಸಿನೋಡ್‌ ಸಭೆಯಲ್ಲಿ ಜೆಸ್ವಿಟಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.