Udayavni Special

31ರವರೆಗೆ ಲಾಕ್‌ಡೌನ್‌ ಓಪನ್‌ ಆಗಲ್ಲ

ಜಿಲ್ಲಾಡಳಿತ ಮನವಿಗೆ ತಲೆದೂಗಿದ ವರ್ತಕರು ನಿರ್ಬಂಧ ಮುಂದುವರಿದರೆ ಬದುಕು ದುಸ್ತರ

Team Udayavani, May 22, 2020, 10:38 AM IST

22-May-01

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲಾಕ್‌ಡೌನ್‌ ಸಡಿಲಿಕೆ ಕುರಿತು ಡಿಸಿ ಶರತ್‌ ಬಿ. ನೇತೃತ್ವದಲ್ಲಿ ಸಭೆ ನಡೆಯಿತು.

ಕಲಬುರಗಿ: ರಾಜ್ಯಾದ್ಯಂತ ಲಾಕ್‌ಡೌನ್‌ ಸಡಿಲಿಕೆ ಮಾಡಿ, ಹಲವು ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಲಾಗಿದ್ದರೂ ಜಿಲ್ಲೆಯಲ್ಲಿ ಮೇ 31ರವರೆಗೆ ಲಾಕ್‌ ಓಪನ್‌ ಆಗುವುದಿಲ್ಲ!.

ಲಾಕ್‌ಡೌನ್‌ ಸಡಿಲಿಕೆ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ನೇತೃತ್ವದಲ್ಲಿ ವರ್ತಕರ ಸಭೆ ನಡೆಯಿತು. ದೇಶ ಮತ್ತು ರಾಜ್ಯದಲ್ಲಿ ಹಲವು ರೀತಿ ಸಡಿಲಿಕೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲೂ ಬಟ್ಟೆ, ಚಪ್ಪಲಿ ಮಳಿಗೆ, ಹೋಟೆಲ್‌ ತೆರೆಯುವುದು ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕೆಂದು ವರ್ತಕರು ಮನವಿ ಮಾಡಿದರು. ಆದರೆ, ಸದ್ಯಕ್ಕೆ ಅದು ಆಗುವುದಿಲ್ಲ. ಮೇ 31ರವರೆಗೆ ಲಾಕ್ ಡೌನ್‌ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಸ್ಪಷ್ಟವಾಗಿ ಹೇಳಿದರು.

ಈಗ ಅವಕಾಶ ಕೊಟ್ಟಲ್ಲಿ ವರ್ತಕರು ಸಾಮಾಜಿಕ ಅಂತರ ಪಾಲನೆ ಮಾಡುವುದಿಲ್ಲ. ನಿತ್ಯವೂ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಹೊರ ರಾಜ್ಯಗಳ ವಲಸಿಗರು ಜಿಲ್ಲೆಗೆ ಬರುತ್ತಿದ್ದಾರೆ. ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ರ್‍ಯಾಂಡಮ್‌ ಟೆಸ್ಟಿಂಗ್‌ ನಡೆಸಲಾಗುತ್ತಿದೆ. ಆದ್ದರಿಂದ ವರ್ತರು ಸಹಕರಿಸಬೇಕೆಂದು ಕೋರಿದರು. ಇದರಿಂದ ನಿರಾಸೆಗೊಂಡ ವರ್ತಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿದರು. ಈಗಾಗಲೇ ತುಂಬಾ ಸಹಕಾರ ನೀಡಿದ್ದೇವೆ. ಸುಮಾರು 60 ದಿನಗಳಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತೆ ಆಗಿದೆ. 31ರ ನಂತರವೂ ಲಾಕ್‌ ಡೌನ್‌ ಎಂದರೆ ನಾವು ಬದುಕುವುದೇ ಕಷ್ಟ ಎಂದು ವರ್ತಕರು ತಮ್ಮ ಸಂಕಟ ಹೊರ ಹಾಕಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿಸಿಪಿ ಕಿಶೋರ್‌ ಬಾಬು, ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್‌, ಚಂದ್ರಶೇಖರ್‌ ತಳ್ಳಳ್ಳಿ, ವಿಕ್ರಂ ನಾಗೇಶ ಸೇರಿದಂತೆ 37 ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸರ್ಕಾರವೇ ಬಸ್‌, ರೈಲು ಸಂಚಾರ ಆರಂಭಿಸಿದೆ. ಈಗಾಗಲೇ ವರ್ತಕರು ಸಾಕಷ್ಟು ತೊಂದರೆಗೆ ಸಿಲುಕಿದ್ದು, 35ರಿಂದ 45 ಸಾವಿರ ಕಾರ್ಮಿಕರಿಗೆ ಏಪ್ರಿಲ್‌-ಮೇ ತಿಂಗಳ ಸಂಬಳ ಪಾವತಿಸಬೇಕಿದೆ. ಆದರೂ, ಜಿಲ್ಲಾಡಳಿತ ವಾಣಿಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದೇ ಇರುವುದು ನಿಜಕ್ಕೂ ಬೇಸರ ತರಿಸಿದೆ. ಅಮರನಾಥ ಪಾಟೀಲ,
ಅಧ್ಯಕ್ಷ, ಎಚ್‌ಕೆಸಿಸಿಐ

ಜಿಲ್ಲಾಡಳಿತ ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡುವುದಾಗಿ ಹೇಳುತ್ತದೆ. ಆದರೆ, ಈ ಹಿಂದೆ ಪಾರ್ಸೆಲ್‌ ವ್ಯವಸ್ಥೆಯಿಂದ ನಷ್ಟ ಅನುಭವಿಸಿದ್ದೇವೆ. ಹೀಗಾಗಿ ಹೋಟೆಲ್‌ನಲ್ಲಿ ಸರ್ವೀಸ್‌ಗೆ ಅವಕಾಶ ಮಾಡಿಕೊಡಬೇಕು. ಅಲ್ಲಿವರೆಗೂ ಹೋಟೆಲ್‌ ಆರಂಭಿಸದಿರುವ ನಿರ್ಧಾರಕ್ಕೆ ಬರಲಾಗಿದೆ.
ನರಸಿಂಹ ಮೆಂಡನ್‌,
ಅಧ್ಯಕ್ಷ, ಹೋಟೆಲ್‌ ಮಾಲೀಕರ ಸಂಘ

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

surjwewala

ಬೊಮ್ಮಾಯಿ‌ ಸರ್ಕಾರ ಕಾಲಿನಿಂದ ಮುಡಿಯವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ: ಸುರ್ಜೇವಾಲಾ

16

ರಾಯಚೂರಿಗೆ ನೀರು ಪೂರೈಸಲು ಅಡಚಣೆ

15

ರಸ್ತೆಯಲ್ಲಿ ಬೃಹತ್‌ ಗುಂಡಿ; ಪ್ರಯಾಣಿಕರಿಗೆ ನಿತ್ಯ ನರಕ

14

ದೈಹಿಕ-ಮಾನಸಿಕ ಆರೋಗ್ಯ ಮುಖ್ಯ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.