ಸಾವಯವದಲ್ಲೂ ಕಲ್ಲಂಗಡಿ ಬೆಳೆದ ರೈತ

ಗೋಮೂತ್ರ-ಜೀವಾಮೃತ, ತಿಪ್ಪೆ ಗೊಬ್ಬರ ಹಾಕಿದ್ದರಿಂದ ಉತ್ತಮ ಫಸಲು

Team Udayavani, May 21, 2020, 3:55 PM IST

21-May-18

ಸಾಂದರ್ಭಿಕ ಚಿತ್ರ

ಕಲಬುರಗಿ: ಕಲ್ಲಂಗಡಿ ಕೇವಲ ರಾಸಾಯನಿಕವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಅಲ್ಲಗಳೆದ ರೈತನೊಬ್ಬ, ಗೋಮೂತ್ರ ಹಾಗೂ ಜೀವಾಮೃತ ಬಳಸಿ ಉತ್ತಮ ಫಸಲು ಪಡೆಯಬಹುದು ಎಂಬುದನ್ನು ಸಾಬೀತು ಪಡೆಸಿದ್ದಾನೆ.

ನಾಲ್ಕು ದಿನಕ್ಕೊಮ್ಮೆ 200 ಲೀಟರ್‌ ನೀರಿಗೆ 20 ಲೀಟರ್‌ ಗೋಮೂತ್ರ ಮಿಶ್ರಣ ಮಾಡಿ ಕಲ್ಲಂಗಡಿ ಬಳ್ಳಿಗೆ ಹಾಕಲಾಗಿದೆ. ಅದೇ ರೀತಿ ಜೀವಾಮೃತ ಸಹ ಬಳಸಿ ಕಲ್ಲಂಗಡಿ ಬೆಳೆಯಲಾಗಿದೆ. ಅಫ‌ಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಪ್ರಗತಿಪರ ರೈತ ಶರಣಗೌಡ ಎಸ್‌. ಪಾಟೀಲ್‌ ಅವರೇ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬರೀ ತಿಪ್ಪೆ ಗೊಬ್ಬರ ಬಳಸಲಾಗಿದೆ. ಕಲ್ಲಂಗಡಿ ಹಣ್ಣು ದಪ್ಪವಾಗಲು ಔಷಧಿ ಸಿಂಪಡಿಸಿಲ್ಲ. ಜತೆಗೆ ಹಣ್ಣು ಕೆಂಪಾಗಿಸಲು ಸಹ ಯಾವುದೇ ಔಷಧ ಬಳಸಿಲ್ಲ. ಬರೀ ಗೋಮೂತ್ರ ಹಾಗೂ ಜೀವಾಮೃತದೊಂದಿಗೆ ರುಚಿಯಾದ ಕಲ್ಲಂಗಡಿ ಬೆಳೆಯಲಾಗಿದೆ. ರೈತ ಶರಣಗೌಡ ಸಾವಯವವಾಗಿ ಬೆಳೆಯಲಾದ ಕಲ್ಲಂಗಡಿಯನ್ನು ವ್ಯಾಪಾರಸ್ಥರಿಗೆ (ದಲ್ಲಾಳಿಗಳು) ಒಟ್ಟಿಗೆ ಮಾರಾಟ ಮಾಡದೇ ರೈತರು ಹಾಗೂ ಸ್ನೇಹಿತರು ಮತ್ತು ಇತರರು ತಿನ್ನಲಿ ಎಂದು ಮುಕ್ತವಾಗಿ ಆಹ್ವಾನ ನೀಡುತ್ತಿದ್ದಾರೆ. ಜತೆಗೆ ಸಾವಯವಾಗಿ ಕಲ್ಲಂಗಡಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಸಮಗ್ರ ಕೃಷಿಯೇ ಸಾವಯವ: ತೊಗರಿ-ಜೋಳ ಸೇರಿದಂತೆ ಇತರೆ ಬೆಳೆಗಳನ್ನು ರಾಸಾಯನಿಕ ಬಳಸದೇ, ಕೀಟನಾಶಕ ಸಿಂಪಡಿಸದೇ ಬೆಳೆಯುತ್ತಿದ್ದಾರೆ. ಕೆಲ ರೈತರು ಸಹ ಇದನ್ನು ಅನುರಿಸುತ್ತಿದ್ದಾರೆ. ಒಟ್ಟಾರೆ ಖರ್ಚು ಕಡಿಮೆ ಜತೆಗೆ ಸಾವಯವವಾಗಿ ಬೆಳೆಯುವ ಸಮಗ್ರ ಕೃಷಿ ಪದ್ಧತಿ ಮಾದರಿಯಾಗಿದೆ. ಇದನ್ನು ಇತರ ರೈತರು ಅನುಕರಿಸಿದರೆ ಕಡಿಮೆ ಖರ್ಚಿನ ಜತೆಗೆ ಆರೋಗ್ಯಕ್ಕೆ ಉತ್ತಮವಾದ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದಾಗಿದೆ. ಆಸಕ್ತ ರೈತರು ಶರಣಗೌಡ ಪಾಟೀಲ್‌ ಅವರನ್ನು ಮೊ. 9483364333 ಸಂಪರ್ಕಿಸಬಹುದು.

ಕೃಷಿಯಲ್ಲಿಂದು ಸಾರಾಯನಿಕ ಗೊಬ್ಬರ ಹಾಗೂ ಇತರೆ ಕ್ರಿಮಿನಾಶಕಗಳ ಬಳಕೆ ಮೀತಿ ಮೀರುತ್ತಿದೆ. ಎಲ್ಲದಕ್ಕೂ ಔಷಧ ಸಿಂಪಡಿಸುವ ಪರಿಸ್ಥಿತಿ ನಿರ್ಮಾಣವನ್ನು ನಾವು ಮಾಡಿಕೊಂಡಿದ್ದೇವೆ. ವ್ಯಾಪಾರ ದೃಷ್ಟಿಗಿಂತ ಆರೋಗ್ಯದ ಕಡೆ ಒಲವು ತೋರುವುದು ಅಗತ್ಯವಾಗಿದೆ. ನಾವು ಮತ್ತೆ ಶೂನ್ಯ ಬಂಡವಾಳ ಕೃಷಿಯತ್ತ ಹೆಜ್ಜೆ ಹಾಕುವುದೇ ಅನಿವಾರ್ಯವಾಗುತ್ತದೆ.
ಶರಣಗೌಡ ಪಾಟೀಲ್‌,
ಪ್ರಗತಿಪರ ರೈತ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.