1 ಲಕ್ಷ ಲೀಟರ್‌ ಹಾಲು ಸಂಗ್ರಹ ಕೆಎಂಎಫ್‌ ಗುರಿ

Team Udayavani, Jul 27, 2022, 10:57 AM IST

4KMF

ಕಲಬುರಗಿ: ಕಲಬುರಗಿ-ಬೀದರ್‌ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ಮುಂಬರುವ ದಿನಗಳಲ್ಲಿ ಒಟ್ಟು ಒಂದು ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿದಿನ ಒಟ್ಟು 59,112 ಸಾವಿರ ಲೀಟರ್‌ದಷ್ಟು ಉತ್ಕೃಷ್ಟ ದರ್ಜೆಯ ನಂದಿನ ಹಾಲು ಮತ್ತು 7,595ಲೀಟರ್‌ನಷ್ಟು ಮೊಸರು ಮಾರಾಟವಾಗುತ್ತಿದೆ.

ಸದ್ಯ ಸಹಕಾರಿ ಹಾಲು ಉತ್ಪಾದಕರ ಸಂಘಗಳಿಂದ ಪ್ರತಿ ದಿನವೂ 62 ಸಾವಿರ ಲೀಟರ್‌ಗಿಂತಲೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಆದರೆ ವಾಸ್ತವದಲ್ಲಿ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ನಂದಿನಿ ಹಾಲಿನ ಮಾರಾಟ ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ಪ್ರ್ಯಾಂಚೈಸಿಗಳನ್ನು ತೆರೆಯುವ ಮೂಲಕ ಹಾಲಿನ ಮಾರಾಟ ವಿಸ್ತರಿಸಲಾಗುವುದು. ಡಿಸಿಸಿ ಬ್ಯಾಂಕ್‌ ಸೇರಿದಂತೆ ಇತರೆ ಹಾಲು ಉತ್ಪಾದಕರ ಜತೆಯಲ್ಲಿ ಮಾತುಕತೆ ನಡೆಯುತ್ತಿದೆ. ಶೀಘ್ರವೇ ಹಾಲಿನ ಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಂಎಫ್‌ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ.

ನಿತ್ಯ 59ಲೀಟರ್ಹಾಲು ಮಾರಾಟ: ಸದ್ಯ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಪ್ರತಿ ದಿನವೂ 59,112 ಲೀಟರ್‌ ಹಾಲು ಮಾರಾಟ ಆಗುತ್ತಿದೆ. ಕಳೆದ 2021-22ರಲ್ಲಿ 53,715 ಲೀಟರ್‌ ಮಾರಾಟ ಇತ್ತು. ಇದೇ ವೇಳೆ ಗ್ರಾಮೀಣ ಪ್ರದೇಶಕ್ಕೂ ಹಾಲಿನ ಮಾರಾಟ ವಿಸ್ತರಣೆ ಮಾಡುವುದರಿಂದ ನಮಗೆ ಹಾಲಿನ ಬೇಡಿಕೆ ಹೆಚ್ಚಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಸ್ತಾರಕ ಅಧಿಕಾರಿ ಚಂದ್ರಶೇಖರ ಪತ್ತಾರ್‌. ಈಗಾಗಲೇ ನಗರದ ಪ್ರದೇಶದಲ್ಲಿ ಪಾರ್ಲರ್‌ಗಳನ್ನು ಹೆಚ್ಚು ಮಾಡಿ ನಂದಿನಿ ಹಾಲು ಸೇರಿದಂತೆ ಇತರೆ ಉತ್ಪನ್ನಗಳ ಮಾರಾಟ ಹೆಚ್ಚು ಮಾಡಲು ಶ್ರಮಿಸಲಾಗುತ್ತಿದೆ. ಈಗ ನಗರದಲ್ಲಿ ಏಳು ಕಡೆಗಳಲ್ಲಿ ದೊಡ್ಡ ಪಾರ್ಲರ್‌ ಗಳಿವೆ. ಇನ್ನೂ ಮೂರು ಕಡೆಗಳಲ್ಲಿ ಮಾಡಲು ಯೋಜಿಸಲಾಗಿದೆ. ಅಲ್ಲದೇ ಶೀಘ್ರವೇ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಪಾರ್ಲರ್‌ ಗಳನ್ನು ತೆರೆಯುವ ಆಲೋಚನೆ ಹೊಂದಲಾಗಿದೆ. ಆದಷ್ಟು ಬೇಗ ಈ ಕಾರ್ಯ ನೆರವೇರಲಿದೆ.

ಏಳು ಸಾವಿರ ಲೀಟರ್ಮೊಸರು ಮಾರಾಟ

ತೆರಿಗೆ ಹೆಚ್ಚಳ ವಿಚಾರ ಹಿನ್ನೆಲೆಯಲ್ಲಿ ಕೆಎಂಎಫ್‌ ನಂದಿನಿ ಮೊಸರಿನ ಬೆಲೆ ಹೆಚ್ಚಳವಾಗಿದೆ ಎನ್ನುವ ಸದ್ದು ಗದ್ದಲದ ಮಧ್ಯೆಯೂ ಮೊಸರಿನ ಮಾರಾಟದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ನಂದಿನಿ ಮೊಸರು ತುಂಬಾ ಉತ್ಕೃಷ್ಟವಾಗಿದ್ದು, ಜನರು ಹೆಚ್ಚು ಇಷ್ಟ ಪಡುತ್ತಾರೆ. ಮಾರುಕಟ್ಟೆಯಲ್ಲಿ ಖಾಸಗಿ ಬ್ರ್ಯಾಂಡಿನ ಹಾಲು-ಮೊಸರಿನ ಮಧ್ಯೆಯೂ ಕೆಎಂಎಫ್‌ನ ನಂದಿನಿ ಬ್ರ್ಯಾಂಡಿನ ಹಾಲು-ಮೊಸರು ಸೇರಿದಂತೆ ಇತರೆ ಉತ್ಪನ್ನದ ಮಾರಾಟ ನಿರಂತರವಾಗಿ ಏರುತ್ತಲೇ ಇದೆ. ಪ್ರತಿನಿತ್ಯ 7596 ಲೀಟರ್‌ ಮೊಸರಿನ ಮಾರಾಟ ಆಗುತ್ತಿದೆ. ಕಳೆದ ಸಾಲಿನಲ್ಲಿ(2021-22) 4,767 ಲೀಟರ್‌ ಮಾರಾಟವಾಗುತ್ತಿತ್ತು. ಒಂದು ವರ್ಷದಲ್ಲಿ ಅಂದಾಜು 3ಸಾವಿರ ಲೀಟರ್‌ದಷ್ಟು ಮೊಸರಿನ ಮಾರಾಟ ಹೆಚ್ಚಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕಲಬೆರಕೆ ಭಯದಿಂದ ಮತ್ತು ತಯಾರು ಮಾಡುವ ಪ್ರೊಸೆಸ್‌ ಬಗ್ಗೆ ಜನರಿಗೆ ಭಯ ಹುಟ್ಟಿದೆ. ಇದರಿಂದಾಗಿ ಕೆಎಂಎಫ್‌ನ ನಂದಿನಿ ಮೊಸರಿನ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ ಮೊಸರಿನ ಗುಣಮಟ್ಟ ಮತ್ತು ರುಚಿ ಎನ್ನುವುದು ಕೆಎಂಎಫ್‌ ಅಧಿಕಾರಿಗಳ ಮಾತು.

ನಮ್ಮ ಕೆಎಂಎಫ್‌ ಹಾಲು ಮತ್ತು ಮೊಸರು ಹಾಗೂ ಇತರೆ ಉತ್ಪನ್ನಗಳನ್ನು ನಾವು ತುಂಬಾ ಜಾಗರೂಕವಾಗಿ ಸಂಸ್ಕೃರಣೆ ಮಾಡುತ್ತೇವೆ. ಮೊಸರು ತುಂಬಾ ಹೈಜನಿಕ್‌ ಆಗಿ ಸಿದ್ಧವಾಗುತ್ತದೆ. ಇದರಿಂದಾಗಿ ಜನರಿಗೆ ನಮ್ಮ ನಂದಿನಿ ಬ್ರ್ಯಾಂಡ್‌ ಮೇಲೆ ಭರವಸೆ ಇದೆ. ಶೀಘ್ರವೇ ನಾವು 1ಲಕ್ಷ ಲೀಟರ್‌ ಹಾಲಿನ ಸಂಗ್ರಹ ಮಾಡುತ್ತೇವೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ನಮ್ಮ ಅಧ್ಯಕ್ಷ ಅರ್‌.ಕೆ.ಪಾಟೀಲ ಅವರ ಬೆಂಬಲ ಮತ್ತು ಸಿಬ್ಬಂದಿಗಳ ಸಹಕಾರವೂ ಇದೆ. ಬಿ.ಎಸ್‌.ಸಿದ್ದೇಗೌಡ ಎಂಡಿ, ಕೆಎಂಎಫ್‌, ಕಲಬುರಗಿ

-ಸೂರ್ಯಕಾಂತ ಜಮಾದಾರ

ಟಾಪ್ ನ್ಯೂಸ್

11

ಕುಷ್ಟಗಿ ಪೊಲೀಸರ ಕಾರ್ಯಾಚರಣೆ; ನಂಬರ್ ಪ್ಲೆಟ್ ಇಲ್ಲದ 100 ಕ್ಕೂ ಅಧಿಕ ವಾಹನ ಹೊತ್ತೋಯ್ದು ಪೋಲಿಸರು

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Ruturaj Gaikwad smashed seven sixes in an over

ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ

ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

10

ಬಜ್ಪೆ: ಪತಿಯಿಂದ ಪತ್ನಿಯ ಕೊಲೆ; ಪತಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ. 2ರಂದು ನಟ ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ಡಿ. 2ರಂದು ನಟ ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಅವಶ್ಯ: ರೇವಣಸಿದ್ಧಯ್ಯ

ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಅವಶ್ಯ: ರೇವಣಸಿದ್ಧಯ್ಯ

ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ; ರೈತರಿಗೆ 24 ಗಂಟೆ ಉಚಿತ ವಿದ್ಯುತ್

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ; ರೈತರಿಗೆ 24 ಗಂಟೆ ಉಚಿತ ವಿದ್ಯುತ್

ಹಳ್ಳಿಗಳಿಗೆ ಮೂಲ ಸೌಕರ್ಯಕ್ಕಾಗಿ ರಸ್ತೆ ತಡೆ

ಹಳ್ಳಿಗಳಿಗೆ ಮೂಲ ಸೌಕರ್ಯಕ್ಕಾಗಿ ರಸ್ತೆ ತಡೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

11

ಕುಷ್ಟಗಿ ಪೊಲೀಸರ ಕಾರ್ಯಾಚರಣೆ; ನಂಬರ್ ಪ್ಲೆಟ್ ಇಲ್ಲದ 100 ಕ್ಕೂ ಅಧಿಕ ವಾಹನ ಹೊತ್ತೋಯ್ದು ಪೋಲಿಸರು

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Ruturaj Gaikwad smashed seven sixes in an over

ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.