ಕೆಟಿಎಂ ಆರೆಂಜ್ ಡೇ: ರೇಸಿಂಗ್ ಬೈಕ್ಗಳ ರೋಚಕ ಸಾಹಸ
Team Udayavani, Sep 10, 2017, 10:14 AM IST
ಕಲಬುರಗಿ: ರೇಸಿಂಗ್ ಬೈಕ್ಗಳ ಬ್ರಾಂಡ್ ಕೆಟಿಎಂ ಶನಿವಾರ ಸಂಜೆ ಕೆಟಿಎಂ ಬೈಕ್ ಮಾಲೀಕರಿಗಾಗಿಯೇ ರೋಮಾಂಚಕ ರೇಸಿಂಗ್ ಕಾರ್ಯಕ್ರಮ ಆಯೋಜಿಸಿತ್ತು.ಶಹಾಬಾದ ರಸ್ತೆಯಲ್ಲಿರುವ ಕಾರ್ನಿವಲ್ ಗೇಮ್ಸ್ ಆವರಣದಲ್ಲಿ ಈ ರಂಗೇರಿದ ಕಾರ್ಯಕ್ರಮ ನಡೆಯಿತು. ಉತ್ಸಾಹಿ ಚಾಲಕರು ರೇಸಿಂಗ್ನಲ್ಲಿ ತಮ್ಮ ಚಳಕ ತೋರಿದರು.
ಆರೆಂಜ್ ಡೇ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ ಕಲಬುರಗಿ ಮತ್ತು ಸುತ್ತಮುತ್ತಲ ಪ್ರದೇಶದ ಗ್ರಾಹಕರು ಕೆಟಿಎಂ ಬೈಕ್ಗಳೊಂದಿಗೆ ರೇಸ್ನಲ್ಲಿ ಪಾಲ್ಗೊಂಡಿದ್ದರಲ್ಲದೇ ತಜ್ಞ ಸವಾರರು ಮಾರ್ಗದರ್ಶನ ಮಾಡಿದರು. ಕೆಟಿಎಂ
200 ಡ್ನೂಕ್ ಮತ್ತು ಕೆಟಿಎಂ ಆರ್ಸಿ 200 ಬೆ„ಕ್ಗಳ ಮಾಲೀಕರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ರೇಸಿಂಗ್ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡಲಾಯಿತು. ಬೈಕ್ ಸರ್ವಿಸ್ ಕ್ಯಾಂಪ್, ಕೆಟಿಎಂ ಪವರ್ ಉಡುಪುಗಳು, ಬಿಡಿಭಾಗಗಳು ಲಭ್ಯವಿದ್ದವು. ಹಿನ್ನೆಲೆಯಲ್ಲಿದ್ದ ಸಂಗೀತ ಕಾರ್ಯಕ್ರಮಕ್ಕೆ ರಂಗು ತುಂಬಿತ್ತು. ಗ್ರಾಹಕರಿಗೆ ಕೆಟಿಎಂ ಬೈಕ್ಗಳ ನಿಕಟ ಮಾಹಿತಿ ಮತ್ತು ಸ್ವಾನುಭವ ಒದಗಿಸುವ ನಿಟ್ಟಿನಲ್ಲಿ ಕೆಟಿಎಂ ದೇಶಾದ್ಯಂತ ಆಯ್ದ ನಗರಗಳಲ್ಲಿ ಆರೆಂಜ್ ಡೇ ಆಯೋಜಿಸುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ