ಬಿಜೆಪಿ ಅಭಿವೃದಿ ಸಾಧನೆ ತೋರಿಸಲಿ


Team Udayavani, Jul 10, 2017, 9:57 AM IST

10-gub-1.jpg

ಚಿತ್ತಾಪುರ: ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ .ಎಸ್‌. ಯಡಿಯೂರಪ್ಪ ಅವರ ಕಾಲಾವಧಿ ಯಲ್ಲಿ ಮಾಡಿದ ಸಾಧನೆಗಳನ್ನು ತಾಲೂಕಿನ ಜನರಿಗೆ ತೋರಿಸಲಿ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಸ್ಥಳೀಯ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗೆದ್ದು ಬರೀ ನಾಲ್ಕು ವರ್ಷದ ಅವಧಿಯಲ್ಲಿ ಮಾಡಿದ 
ಸಾಧನೆಗಳನ್ನು ತಾಲೂಕಿನ ಜನರ ಮುಂದೇ ಇಡುತ್ತೇನೆ. ಆದರೆ ನೀವು ನರೇಂದ್ರ ಮೋದಿ ಅವರ ಮೂರುವರೇ ವರ್ಷ ಹಾಗೂ
ವಾಲ್ಮೀಕಿ ನಾಯಕ ಶಾಸಕರಾಗಿದ್ದ ಮೂರುವರೇ ವರ್ಷ ಸೇರಿ ಒಟ್ಟು 7 ವರ್ಷದ ಕಾಲಾವಧಿ ಯಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದೀರಿ? ಆ ಕೊಡುಗೆಗಳನ್ನು ಮಾತ್ರ ಜನರ ಮುಂದೇ ಇಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದರು. ಈ ಹಿಂದೆ 371ನೇ(ಜೆ) ಕಲಂ ಜಾರಿಗೆ ತರಲು ಕೇಂದ್ರ ಸರ್ಕಾರ ಒಪ್ಪಿಗೆ
ಸೂಚಿಸಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಿರೋಧ ನೀತಿ ತಾಳಿತ್ತು. ಬಿಜೆಪಿ ಕೇಂದ್ರದ ನಾಯಕ ಎಲ್‌.ಕೆ. ಅಡ್ವಾನಿ 371ನೇ (ಜೆ) ಕಲಂ ಜಾರಿಗೆ ತಂದರೆ ಸಾಮಾಜಿಕ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್‌ ಸರ್ಕಾರ ಹೈದ್ರಾಬಾದ್‌ ಕರ್ನಾಟಕ ಜನರ ಅಭಿವೃದ್ಧಿಗೋಸ್ಕರ 371ನೇ (ಜೆ) ಕಲಂ ಜಾರಿಗೆ ತಂದಿದೆ. ಅದು ಜಾರಿಗೆ ಬಂದಾಗಿನಿಂದಲೂ ಯಾವುದೇ ಸಾಮಾಜಿಕ ಕ್ರಾಂತಿಯಾಗಿಲ್ಲ ಎಂಬುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಜಿಎಸ್‌ಟಿಯಿಂದಾಗಿ ಸಾರ್ವಜನಿಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸದೇ ಕೇಂದ್ರ ಸರಕಾರ ಶೇ. 18ರಿಂದ 28ರಷ್ಟು ತೆರಿಗೆ ಏರಿಕೆ ಮಾಡಿದೆ. ಇದರಿಂದಾಗಿ ಜನರ ಮೇಲೆ ವಿಪರಿತ ಪರಿಣಾಮ ಬಿರುವ ಸಾಧ್ಯತೆಗಳಿವೆ ಎಂದರು.
ಸ್ಲಂ ಬೋರ್ಡ್‌ ವತಿಯಿಂದ 1000 ಮನೆಗಳ ನಿರ್ಮಾಣಕ್ಕೆ 55 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಜಿ+1 ನಿರ್ಮಿಸಲಾಗುವುದು. ದೇವರಾಜ ಆವಾಸ್‌ ಯೋಜನೆಯಲ್ಲಿ 236 ಮನೆಗಳಿಗೆ ಅನುಮೋದನೆ ಸಿಕ್ಕಿದೆ. ಅಲ್ಪಸಂಖ್ಯಾತರಿಗಾಗಿ ಮೌಲಾನ ಅಬ್ದುಲ್‌ ಕಲಂ ಆಜಾದ್‌ ಪ್ರಾಥಮಿಕ ಶಾಲೆ ಹಾಗೂ ಪಿಯು ಕಾಲೇಜು ಮತ್ತು ಸದಾºವನಾ ಮಂಟಪಕ್ಕೆ ಅನುಮೋದನೆ
ದೊರಕಿದೆ ಎಂದು ತಿಳಿಸಿದರು. 

ಪಟ್ಟಣದ ಪದವಿ ಕಾಲೇಜಿಗೆ ಹೆಚ್ಚುವರಿಯಾಗಿ 1.5 ಕೋಟಿ ರೂ. ವೆಚ್ಚದಲ್ಲಿ 6 ಕೋಣೆ ನಿರ್ಮಾಣ ಮಾಡಲಾಗುವುದು. ನಾಗಾವಿ ಮತ್ತು ಸನ್ನತಿಯಲ್ಲಿ ಮಾಸ್ಟರ್‌ ಪ್ಯಾನ್‌ ಮಾಡಲು ಅನುಮೋದನೆ ಸಿಕ್ಕಿದೆ. ನಾಗಾವಿಗೆ 8 ಕೋಟಿ, ಸನ್ನತಿಗೆ 7 ಕೋಟಿ ರೂ. ವೆಚ್ಚದಲ್ಲಿ ಖಾಸಾಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಕಳೆದ ಒಂದು ವಾರದಿಂದ ಅಕ್ರಮ ಮರಳು
ರಾಶಿ ಮೇಲೆ ಅಧಿಕಾರಿಗಳು ದಿನನಿತ್ಯ ದಾಳಿ ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ.

ಇದು ತಾಲೂಕಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಇದನ್ನು ಬಿಜೆಪಿ ಮಾಜಿ ಶಾಸಕ ಹಾಗೂ ಜಿಪಂ ಮಾಜಿ ಸದಸ್ಯ ಶ್ಲಾಘಿಸುವುದನ್ನು ಬಿಟ್ಟು ಪೊಲೀಸ್‌ ಕಚೇರಿಗೆ ಹೋಗಿ ಬಿಜೆಪಿ ಕಾರ್ಯಕರ್ತರ ವಾಹನಗಳು ಸಿಕ್ಕಿಬಿದ್ದಿವೆ ಎಂದು ಅವರ ರಕ್ಷಣೆಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಉಳ್ಳಾಲದಲ್ಲಿ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ..

ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..

ಚೆಕ್‌ ಬೌನ್ಸ್‌ ಪ್ರಕರಣ : 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ಸನ್ನಡತೆ: 96 ಕೈದಿಗಳ ಅವಧಿಪೂರ್ವ ಬಿಡುಗಡೆ

ರಾಜ್ಯದಲ್ಲಿ ಇಂದು 153 ಪಾಸಿಟಿವ್‌ ವರದಿ

ರಾಜ್ಯದಲ್ಲಿ ಇಂದು 153 ಪಾಸಿಟಿವ್‌ ವರದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17aam-admi

ಆಮ್‌ ಆದ್ಮಿಯಿಂದ ಮಾತ್ರ ಸರ್ವ ಕ್ಷೇತ್ರ ಬದಲು: ರೆಡ್ಡಿ

10constitution

ಸಂವಿಧಾನವೇ ಜೀವನದ ಸಿದ್ಧಾಂತವಾಗಲಿ: ಕೃಷ್ಣಾ ರೆಡ್ಡಿ

7hostel

ವಸತಿ ನಿಲಯ ನೌಕರರ ಬಾಕಿ ವೇತನ ನೀಡಿ

6protest

ಆಲ್‌ ಇಂಡಿಯಾ ಇಮಾಮ್‌ ಕೌನ್ಸಿಲ್‌ನಿಂದ ಪ್ರತಿಭಟನೆ

5DC

ಜಿಡಗಾದಲ್ಲಿ ನಾಳೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಉಳ್ಳಾಲದಲ್ಲಿ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ..

ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..

Untitled-1

ಡಿಕೆಶಿ  ಶೀಘ್ರ ಜೈಲಿಗೆ ಹೋಗುತ್ತಾರೆ : ಎಂ.ಜಿ. ಮಹೇಶ್‌

ಚೆಕ್‌ ಬೌನ್ಸ್‌ ಪ್ರಕರಣ : 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್‌ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.