Udayavni Special

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್?


Team Udayavani, Jul 12, 2020, 6:11 PM IST

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್? ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಕಲಬುರಗಿ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರವನ್ನು ಒಂದು ವಾರದ ಮಟ್ಟಿಗೆ ಲಾಕ್‌ಡೌನ್  ಮಾಡಲು ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಜಿಲ್ಲೆಯಲ್ಲಿ ಒಟ್ಟು 528 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ ಶೇ.50ರಷ್ಟು (269) ಪ್ರಕರಣಗಳು ಕಲಬುರಗಿ ನ‌ಗರದಲ್ಲೇ ಇದೆ. ಮಾ.3ರಿಂದ ಜು.9ರವರೆಗೆ 23 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಅಲ್ಲದೇ, ನಗರ ವ್ಯಾಪ್ತಿಯ ಆರು ಪೊಲೀಸ್‌ ಠಾಣೆಯ ಸಿಬ್ಬಂದಿಗೆ ಸೋಂಕು ಕಂಡು ಬಂದಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಂಡಳಿ ಸೇರಿ ಕೆಲ ಸರ್ಕಾರಿ ಕಚೇರಿಗಳು ಸಹ ಸೀಲ್‌ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. “ಉದಯವಾಣಿ’ಗೆ ತಿಳಿಸಿದರು.

ಆದರೆ, ಲಾಕ್‌ ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಕರೆದಿದ್ದಾರೆ. ಅಲ್ಲಿ ನ‌ಮ್ಮಿಂದ ಮಾಹಿತಿ ಸಂಗ್ರಹಿಸಿ, ಲಾಕ್‌ಡೌನ್  ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.

ಲಾಕ್‌ ಡೌನ್ ಗೆ ಉತ್ತಮ ಸ್ಪಂದನೆ: ಇನ್ನು, ರವಿವಾರದ ಲಾಕ್‌ಡೌನ್ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಲಾಕ್‌ಡೌನ್ ಕಾರಣ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್‌ ಆಗಿತ್ತು. ವಾಹನ‌, ಜನ ಸಂಚಾರ ಸ್ತಬ್ಧಗೊಂಡಿತ್ತು.

ಲಾಕ್‌ಡೌನ್ ಕಟ್ಟುನಿಟ್ಟಿನ‌ ಅನ‌ುಷ್ಠಾನ‌ಕ್ಕಾಗಿ ಬೆಳಿಗ್ಗೆಯೇ ಪೊಲೀಸರು ವಾಹನ‌ಗಳ ಸೈರನ್ ಹಾಕಿಕೊಂಡು ಪಹರೆ ನ‌ಡೆಸಿದರು. ಇದರ ಮಧ್ಯೆಯೂ ಬೈಕ್‌, ಕಾರುಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಡೆದು ನಿಖರ ಕಾರಣ ಕೊಟ್ಟವರರಿಗೆ ಮಾತ್ರ ಮುಂದೆ ಹೋಗಲು ಬಿಟ್ಟರು. ಅಗತ್ಯವಾಗಿ ರಸ್ತೆಗೆ ಬಂದಿದ್ದವರಿಗೆ ಲಾಠಿ ಏಟು ನೀಡಿದರು.

ಅಲ್ಲದೇ, ಮಹಾನ‌ಗರ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ 500 ರೂ. ಮತ್ತು ಮಾರ್ಸ್‌ ಧರಿಸದೆ ಓಡಾಡುತ್ತಿದ್ದರಿಗೆ 100 ರೂ. ದಂಡ ವಿಧಿಸಿ ಬುದ್ಧಿ ಕಲಿಸಿದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

disha salian

ದಿಶಾ ಸಾಲ್ಯಾನ್ ಸಾವಿಗೂ ಮುನ್ನ ನಡೆಸಿದ್ದ ಪಾರ್ಟಿ ವಿಡಿಯೋ ಈಗ ವೈರಲ್!

ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ! ಚಿಕ್ಕಮಗಳೂರನಲ್ಲಿ ಮಳೆಗೆ ಐದನೇ ಬಲಿ

ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ! ಚಿಕ್ಕಮಗಳೂರನಲ್ಲಿ ಮಳೆಗೆ ಐದನೇ ಬಲಿ

india-total-covid

ಕೋವಿಡ್ ಅಂಕಿಅಂಶ: ಒಂದೇ ದಿನ ದಾಖಲೆಯ 64,399 ಹೊಸ ಪ್ರಕರಣ, 861 ಸಾವು

rajanath-sing

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ, 101 ವಸ್ತುಗಳು ದೇಶದಲ್ಲೇ ಉತ್ಪಾದನೆ: ರಾಜನಾಥ್ ಸಿಂಗ್

ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

ಇಂಗ್ಲೆಂಡ್ ಗೆ ನೆರವಾದ ಬಟ್ಲರ್- ವೋಕ್ಸ್: ಪಾಕ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ರೂಟ್ ಪಡೆ

covid-care

ವಿಜಯವಾಡ: ಕೋವಿಡ್ ಕೇರ್ ಸೆಂಟರ್ ಹೊಟೇಲ್ ನಲ್ಲಿ ಬೆಂಕಿ ಅವಘಢ: 7 ಮಂದಿ ದುರ್ಮರಣ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

india-total-covid

ಕೋವಿಡ್ ಅಂಕಿಅಂಶ: ಒಂದೇ ದಿನ ದಾಖಲೆಯ 64,399 ಹೊಸ ಪ್ರಕರಣ, 861 ಸಾವು

covid-care

ವಿಜಯವಾಡ: ಕೋವಿಡ್ ಕೇರ್ ಸೆಂಟರ್ ಹೊಟೇಲ್ ನಲ್ಲಿ ಬೆಂಕಿ ಅವಘಢ: 7 ಮಂದಿ ದುರ್ಮರಣ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

ಲಸಿಕೆ ಪ್ರಯೋಗ ಇನ್ನಷ್ಟು ಚುರುಕು ; ವಿತರಣೆಗೆ ಕಾರ್ಯಪಡೆ ರಚಿಸಿದ ಕೇಂದ್ರ

ಧಾರವಾಡ ಕೋವಿಡ್ 5770 ಕ್ಕೇರಿದ ಪ್ರಕರಣಗಳು : 3150 ಜನ ಗುಣಮುಖ ಬಿಡುಗಡೆ

ಧಾರವಾಡ ಕೋವಿಡ್ 5770 ಕ್ಕೇರಿದ ಪ್ರಕರಣಗಳು : 3150 ಜನ ಗುಣಮುಖ ಬಿಡುಗಡೆ

MUST WATCH

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani



ಹೊಸ ಸೇರ್ಪಡೆ

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

ದೇಶದಲ್ಲಿ ಕೋವಿಡ್ ಸೋಂಕಿಗೆ 196 ವೈದ್ಯರ ಸಾವು! ಐಎಂಎಯಿಂದಲೇ ಮಾಹಿತಿ

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಸಾಲೂರು ಮಠದ ಪ್ರಗತಿಗೆ ಆದ್ಯತೆ ನೀಡಿ

ಸಾಲೂರು ಮಠದ ಪ್ರಗತಿಗೆ ಆದ್ಯತೆ ನೀಡಿ

disha salian

ದಿಶಾ ಸಾಲ್ಯಾನ್ ಸಾವಿಗೂ ಮುನ್ನ ನಡೆಸಿದ್ದ ಪಾರ್ಟಿ ವಿಡಿಯೋ ಈಗ ವೈರಲ್!

ಕಲ್ಲು ಗಣಿಗಾರಿಕೆ ನಿಷೇಧಕ್ಕಾಗಿ ಪಾದಯಾತ್ರೆ

ಕಲ್ಲು ಗಣಿಗಾರಿಕೆ ನಿಷೇಧಕ್ಕಾಗಿ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.