ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ
Team Udayavani, Feb 25, 2021, 3:45 PM IST
ಕಲಬುರಗಿ: ಲಾರಿಯ ಟೈಯರ್ ಸ್ಫೋಟವಾಗಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ವಾಡಿ ಸಮೀಪದ ರೇವೂರ್ ಗ್ರಾಮದ ಬಳಿ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿ ಬಸ್ ನಲ್ಲಿದ್ದ ಏಳು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸಾವು, ಏಳು ಜನರಿಗೆ ಗಾಯ
ನಗರ ಸಾರಿಗೆ ಬಸ್ ಜೇವರ್ಗಿಯಿಂದ ಚಿತ್ತಾಪುರ ಕಡೆಗೆ ಹೊರಟ್ಟಿತ್ತು. 25 ರಿಂದ 30 ಜನ ಬಸ್ ನಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಎದುರುಗಡೆಯಿಂದ ಲಾರಿಯ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಗೆ ನೇರವಾಗಿ ಗುದ್ದಿದೆ.
ಲಾರಿ ಗುದ್ದಿದ ರಭಸಕ್ಕೆ ಬಸ್ ನ ಚಾಲಕ, ನಿರ್ವಾಹಕ ಹಾಗೂ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಹಿರೇನಾಗವಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್
ಎದುರುಬದುರಾಗಿ ಢಿಕ್ಕಿ ಹೊಡೆದ ಲಾರಿ ಮತ್ತು ಬಸ್ ನ ಮುಂಭಾಗ ಸಂಪೂರ್ಣವಾಗಿ ಖಜಂಗೊಂಡಿದೆ. ಲಾರಿಯು ಪರಿಸಿ ಕಲ್ಲುಗಳನ್ನು ತುಂಬಿಕೊಂಡು ಸಾಗಿಸುತ್ತಿತ್ತು. ಈ ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?
‘ಪೆಪೆ’ಗೆ ಕಾಜಲ್ ಹೀರೋಯಿನ್!: ಫಸ್ಟ್ಲುಕ್ನಲ್ಲಿ ಗಮನ ಸೆಳೆದ ವಿಆರ್ಕೆ ಹೊಸಚಿತ್ರ
ವಾಟ್ಸಾಪ್ ಪಿಂಕ್ ಹೆಸರಿನಲ್ಲಿ ದಾಳಿಯಿಟ್ಟ ಹ್ಯಾಕರ್ಸ್: ನೀವು ಲಿಂಕ್ ಕ್ಲಿಕ್ ಮಾಡಿದ್ದೀರಾ ?
ನಿಮ್ಮ ಇಂದಿನ ಗ್ರಹಬಲ: ಹಿರಿಯರ ಉಪದೇಶಗಳಿಗೆ ಅಸಡ್ಡೆ ತೋರಿಸದೆ ಸ್ಪಂದಿಸಿರಿ
ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: ಬಿಳಿಯ ಅಧಿಕಾರಿ ಡೆರಿಕ್ ಚೌವೀನ್ ತಪ್ಪಿತಸ್ಥ ಎಂದ ಕೋರ್ಟ್!