ಲಿಂಗಾಯತ ರ್ಯಾಲಿಗೆ ಜನಸಾಗರ

Team Udayavani, Sep 25, 2017, 10:36 AM IST

ಕಲಬುರಗಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಬಸವ ಸೇನಾದ ಅಧ್ಯಕ್ಷರಾಗಿ ಸಚಿವ ವಿನಯ ಕುಲಕರ್ಣಿ ಅವರು ಬಸವ ಧರ್ಮದ ಧ್ವಜ ಸ್ವೀಕರಿಸಿದರು.

ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ರವಿವಾರ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಸಲಾದ ಲಿಂಗಾಯತ ಮಹಾರ್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬಸವಾಭಿಮಾನಿಗಳು, ಮಠಾಧೀಶರು ಮತ್ತು ವಿವಿಧ ರಾಜಕೀಯ ಗಣ್ಯರ ಸಮ್ಮುಖದಲ್ಲಿ ಕುಲಕರ್ಣಿ ಧ್ವಜ ಸ್ವೀಕರಿಸಿದರು.

ನಗರದ ನೆಹರು ಗಂಜ್‌ದಿಂದ ಸಮಾವೇಶದ ಸ್ಥಳ ನೂತನ ವಿದ್ಯಾಲಯವರೆಗೂ ಬೃಹತ್‌ ರ್ಯಾಲಿ ನಡೆಯಿತು. ಲಾಹೋಟಿ ಕಲ್ಯಾಣ ಮಂಟಪದ ಎದುರು ಸಚಿವರಾದ ಎಂ.ಬಿ.ಪಾಟೀಲ, ಬಸವರಾಜ ರಾಯರಡ್ಡಿ, ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಶರಣಪ್ಪ ಮಟ್ಟೂರ ಮುಂತಾದವರು ಚಾಲನೆ ನೀಡಿ ರ್ಯಾಲಿ ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವೇದಿಕೆಯಲ್ಲಿ ನೂರಾರು ಸ್ವಾಮೀಜಿಗಳು, ರಾಜಕೀಯ ಗಣ್ಯರು, ಹಾರಾಡುತ್ತಿರುವ ಬಸವ ಧರ್ಮದ ಧ್ವಜ, ಸಹಸ್ರಾರು ಜನಸಾಗರದ ಸಮಾವೇಶದಲ್ಲಿ ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಸಮಾಜ ಸಂಘಟನೆ ನಿಟ್ಟಿನಲ್ಲಿ ಹೊಸತನ ಮೂಡಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ