ಮಹಾದೇವಿ ಮಾತಾಜೀಆಗಿದ್ದು ಧಾರವಾಡದಲ್ಲಿ


Team Udayavani, Mar 15, 2019, 6:06 AM IST

gul-3.jpg

ಧಾರವಾಡ: ಅದು 1960ರ ದಶಕ. ಆಗೇನಿದ್ದರೂ ಗುರು ವಿರಕ್ತರ ಮಧ್ಯೆ ಅಷ್ಟೊಂದು ಕಂದಕಗಳು ಇರಲಿಲ್ಲ. 12ನೇ ಶತಮಾನದ ಶರಣ ಕ್ರಾಂತಿಯ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೂರಕ್ಕೂ ಹೆಚ್ಚು ಜನರು ಸಂಶೋಧನೆ ಮಾಡುವ ಸಂದರ್ಭವದು. ಅಂತಹ ವೇಳೆಯೇ ಶರಣ ಸಂಸ್ಕೃತಿ ಬೆನ್ನು ಬಿದ್ದ ಮಾತೆ ಮಹಾದೇವಿ ಅವರು ಅಕ್ಕಮಹಾದೇವಿಯನ್ನು ಆದರ್ಶವಾಗಿಟ್ಟುಕೊಂಡು ಸಾಮಾಜಿಕ ಹೋರಾಟಕ್ಕೆ ಧುಮುಕಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದ ನಂತರ ಮುಂದೇನು? ಎನ್ನುವ ಪ್ರಶ್ನೆ ಇವರನ್ನು ಕಾಡಿದ್ದೇ ಇಲ್ಲ. ಯಾಕೆಂದರೆ ತಮ್ಮ ಮುಂದಿನ ಗುರಿ ಏನು ಎಂಬುದನ್ನು ಸ್ಪಷ್ಟ ಮಾಡಿಕೊಂಡಿದ್ದರು. ಯಾವ ಶರಣರು ಮಹಿಳಾ ಸಮಾನತೆ ನೆಲೆಯನ್ನು 12ನೇ ಶತಮಾನದಲ್ಲಿಯೇ ಸಮಾಜಕ್ಕೆ ನೀಡಿ ಹೋಗಿದ್ದರೋ ಅದನ್ನು ಇಂದಿನ ಕಾಲಘಟ್ಟದಲ್ಲಿ ಜಾರಿಗೊಳಿಸಬೇಕು ಎನ್ನುವ ಬಲವಾದ ಇಚ್ಚೆಯೊಂದಿಗೆ ಮಹಿಳೆಯರನ್ನು ಶರಣ ಸಂಸ್ಕೃತಿ ಮತ್ತು ಬಸವಧರ್ಮದತ್ತ ಸೆಳೆಯಲು ಮುಂದಾದರು. 

1968ರಲ್ಲಿ ಧಾರವಾಡದಲ್ಲಿ ಲಿಂಗಾಯತ ಧರ್ಮ ಪ್ರಚಾರಕ್ಕಾಗಿ ಮತ್ತು ಮಹಿಳೆಯರಿಗೆ ಆಧ್ಯಾತ್ಮಿಕ ಸಮಾನತೆ ಸಿಗಬೇಕೆನ್ನುವ ಛಲದಿಂದ ಅಕ್ಕ ಮಹಾದೇವಿ ಆಶ್ರಮ ಸ್ಥಾಪಿಸಿ, ಅಲ್ಲಿಗೆ ಭಕ್ತರನ್ನು ಅದರಲ್ಲೂ ಮಹಿಳಾ ಭಕ್ತರನ್ನು ಸೇರಿಸಿ ಅವರಿಗೆ ಸಮಾಜದಲ್ಲಿನ ಸಮಾನತೆ, ಕಾಯಕ ನಿಷ್ಠೆ, ದಯೆ ಮತ್ತು ಧರ್ಮದ ಪಾಠ ಆರಂಭಿಸಿ ಸೈ ಎನಿಸಿಕೊಂಡರು. ಧಾರವಾಡದ ಸುತ್ತಲಿನ ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಸವ ತತ್ವಾಸಕ್ತರನ್ನು ಸೇರಿಸಿ ಸಭೆಗಳನ್ನು ಮಾಡಿ ಲಿಂಗಾಯತ ಧರ್ಮ ಪ್ರಚಾರ ಕೈಗೊಂಡಿದ್ದಲ್ಲದೇ, ಹಳ್ಳಿಗಳಲ್ಲಿನ ಮಹಿಳೆಯರಿಗೆ ಆರೋಗ್ಯ, ಸಂಸ್ಕೃತಿ,ಆಧ್ಯಾತ್ಮಿಕ ಚಿಂತನೆಗಳನ್ನು ರೂಢಿಸಿಕೊಳ್ಳಲು ಅಗತ್ಯವಾದ ಶಿಬಿರಗಳನ್ನು ಮಾಡಿದ್ದರು. ಪ್ರತಿ ರವಿವಾರ ಅಕ್ಕಮಹಾದೇವಿ ಆಶ್ರಮದಲ್ಲಿ ವಚನ ಗಾಯನ, ಭಜನೆ, ಧಾರ್ಮಿಕ ವಿಚಾರಗಳ ಚಿಂತನಾಗೋಷ್ಠಿ, ಮಹಿಳಾ ಸಮಾನತೆ ಬಗ್ಗೆ ಚರ್ಚೆ ಸಂವಾದಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದರು.

ಸನ್ಯಾಸಿಯಾಗಿ ಪುರುಷರಂತೆ ಜಗದ್ಗುರುವಾದ ಮೊದಲ ಮಹಿಳೆ ಮಾತಾಜೀ 
2004ರಲ್ಲಿ ಕನ್ನಡ ನಾಡು ಪಕ್ಷದಿಂದ ಧಾರವಾಡ ಲೋಕಸಭೆಗೆ ಸ್ಪರ್ಧೆ; ಸೋಲು
ಶರಣರ ಇತಿಹಾಸ ಸಂಶೋಧನೆಗೆ ಧಾರವಾಡದ ಆಶ್ರಮದಲ್ಲಿಯೇ ಹೆಚ್ಚು ಕೆಲಸ
ಸ್ವತಂತ್ರ ಲಿಂಗಾಯತ ಧರ್ಮ ಹೋರಾಟಕ್ಕೆ ಧುಮುಕಿದ್ದು ಧಾರವಾಡದಿಂದಲೇ

ಮಾತೆ ಮಹಾದೇವಿ ಅವರು ಹಳ್ಳಿ ಹಳ್ಳಿಗಳಲ್ಲಿ ಶರಣರ ತತ್ವ ಬಿತ್ತಿದ್ದಷ್ಟೇ ಅಲ್ಲ, ಮಹಿಳೆಗೂ ಸಮಾನ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿ ಅದಕ್ಕಾಗಿ ಅಗತ್ಯ ಹೋರಾಟ್ನ ಮಾಡಿದ್ದರು. ಆಧ್ಯಾತ್ಮದಲ್ಲಿ ಮಹಿಳೆ ಪುರುಷರಿಗೆ ಸರಿಸಮಾನವಾಗಿ ನಿಲ್ಲಬೇಕೆನ್ನುವ ಅವರ ಕಾಳಜಿ ನಿಜಕ್ಕೂ ಹೆಮ್ಮೆ ತರಿಸುತ್ತದೆ.
  ಶರಣೆ ಗಂಗಾದೇವಿ, ಹಳಿಯಾಳ ನಿವಾಸಿ

ಐದು ದಶಕಗಳಿಂದ ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಮಾತೆ ಮಹಾದೇವಿ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತ ವರ್ಗಕ್ಕೆ ದೇವರು ನೀಡಲಿ. 
  ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತಿ

ಮಾತೃಸ್ವರೂಪಿಯಂತಿದ್ದ ಮಾತೆ ಮಹಾದೇವಿ ನಿಧನದಿಂದ ಬಸವತತ್ವ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದವರೊಬ್ಬರನ್ನು
ಕಳೆದುಕೊಂಡ ಭಕ್ತವೃಂದ ಬಡವಾಗಿದೆ. ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ.
  ಶಾಮನೂರು ಶಿವಶಂಕರಪ್ಪ, ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ

ಮಾತೆ ಮಹಾದೇವಿ ಲಿಂಗೈಕ್ಯ ಆಗಿರುವುದು ತುಂಬಾ ನೋವುಂಟು ಮಾಡಿದೆ. ಅಮೆರಿಕದಲ್ಲೂ ಧರ್ಮಪ್ರಚಾರ ಮಾಡಿದ್ದರು. ನಾಡಿನಾದ್ಯಂತ ಅಪಾರ ಭಕ್ತ ವೃಂದ ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
  ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ 

ಸಾಮಾಜಿಕ ಚಳವಳಿಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ಮಾತೆ, ಬಸವ ತತ್ವ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟಿದ್ದರು. ಅವರ ನಿಧನದಿಂದ ಒಬ್ಬ ಆಧ್ಯಾತ್ಮಿಕ ನಾಯಕನನ್ನು ಕಳೆದುಕೊಂಡಂತಾಗಿದೆ.
   ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ
 
ಮಾತೆ ಮಹಾದೇವಿ ಅವರ ಜೀವನ ಚರಿತ್ರೆ ಎಲ್ಲರಿಗೂ ಪ್ರೇರಣೆ ನೀಡುವಂತದ್ದು. ಅವರು ಬಸವ ತತ್ವ ಅನುಷ್ಠಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ರಾಜ್ಯದ ದೊಡ್ಡ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
  ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಪುಸ್ತಕದಲ್ಲಿಯೇ ಉಳಿದಿದ್ದ ಬಸವಾದಿ ಶರಣರ ತತ್ವ ಆದರ್ಶ ಜನರಿಗೆ ತಲುಪಿಸಿದವರು ಮಾತೆ ಮಹಾದೇವಿ.
ಮಾತಾಜಿಯವರ ಆದರ್ಶವನ್ನು ಅವರ ಅನುಯಾಯಿಗಳು ಪಾಲಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ಇದೆ.
  ಎಂ.ಬಿ.ಪಾಟೀಲ್‌, ಗೃಹ ಸಚಿವ  

ಮಾತೆ ಮಹಾದೇವಿ ಬಸವ ಪೀಠದ ಮಹಾತಾಯಿ. ಎಲ್ಲ ಸಂದರ್ಭದಲ್ಲಿಯೂ ಧರ್ಮ, ಸಂಸ್ಕೃತಿ ಉಳಿಸಲು ಹೋರಾಟ ಮಾಡಿದ್ದರು. ಭಕ್ತರಿಗೆದುಖ ಭರಿಸುವ ಶಕ್ತಿ ದೇವರು ನೀಡಲಿ.
   ಡಿ.ಕೆ.ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ

ಮಾತೆ ಮಹಾದೇವಿ ದೇಶ ಕಂಡಂತಹ ಶ್ರೇಷ್ಠ ಆಧ್ಯಾತ್ಮವಾದಿ. ಮನೆ ಮನೆಗೆ ಬಸವ ತತ್ವವನ್ನು ತಲುಪಿಸುವಲ್ಲಿ ಶ್ರಮ ಪಟ್ಟವರು. ಬಸವ ತತ್ವಗಳನ್ನು ಮಹಿಳೆಯರಿಗೆ, ಸಾಮಾನ್ಯ ಜನರಿಗೆ ತಲುಪಿಸಿದ ಕೀರ್ತಿ ಮಾತೆ ಮಹಾದೇವಿ ಅವರಿಗೆ ಸಲ್ಲಲಿದೆ.
  ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ

ಮಾತೆ ಮಹಾದೇವಿ ನಮ್ಮನ್ನು ಅಗಲಿದ್ದು, ದುಖದ ಸಂಗತಿ. ಅವರು ಬಸವ ತತ್ವ ಪ್ರಚಾರಕ್ಕಾಗಿ ತಮ್ಮ ಬದುಕನ್ನೇ
ಮುಡುಪಾಗಿಟ್ಟಿದ್ದರು. ಕೂಡಲ ಸಂಗಮದಲ್ಲಿ ಶರಣ ಸಂಸ್ಕೃತಿ ಉತ್ಸವ ಮಾಡುವ ಮೂಲಕ ಜನರಲ್ಲಿ ಸ್ಪೂರ್ತಿ ತುಂಬಿದ್ದರು.
 ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ  

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಳಲ್ಲಿ ಮಾತೆ ಮಹಾದೇವಿ ಹಾಗೂ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀ,
ಇಳಕಲ್ಲ ಮಹಾಂತ ಶ್ರೀಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಅಗಲಿಕೆ ಬಸವತತ್ವ ನಿಷ್ಠರಿಗೆ ತುಂಬಲಾರದ ಹಾನಿಯಾಗಿದೆ. 
 ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ

ಮಾತೆ ಅಕಾಲಿಕ ಮರಣದಿಂದ ಬಸವ ತತ್ವ ಪ್ರಸಾರದ ಕೊಂಡಿ ಕಳಚಿದೆ. ಲಾಭದಾಯಕ ವಿದ್ಯಾ ಸಂಸ್ಥೆ ತೆರೆಯದೆ ಬಸವ ತತ್ವ ಪ್ರಚಾರ ಮಾಡುವುದಕ್ಕೆ ಇಡೀ ಬದುಕನ್ನು ಸಮರ್ಪಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. 
 ಡಾ| ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠ

ಲಿಂಗಾಯತ ಧರ್ಮದ ಮಹಾ ಮಾತಾಜಿ ಅವರನ್ನು ಕಳೆದುಕೊಂಡು ಇಡೀ ಸಮಾಜ ಅನಾಥವಾಗಿದೆ. ಲಿಂಗಾಯತರನ್ನು ಧಾರ್ಮಿಕವಾಗಿ ಸ್ವತಂತ್ರಗೊಳಿಸುವ ಮೂಲಸ್ಫೂರ್ತಿ ಮಾತಾಜಿಯಾಗಿದ್ದರು.  ಬಸವಜಯ ಮೃತ್ಯುಂಜಯ ಸ್ವಾಮೀಜಿ,
ಜಗದ್ಗುರು ಪಂಚಮಸಾಲಿ ಪೀಠ, ಕೂಡಲಸಂಗಮ  

ಬಸವಾದಿ ಶರಣರ, ವಚನಕಾರರ ನಿಜ ತತ್ವ ಅನುಷ್ಠಾನಕ್ಕೆ ತಂದವರು ಮಾತಾಜಿ. ಪ್ರತ್ಯೇಕ ಧರ್ಮ ಚಳವಳಿಯಲ್ಲಿ
ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದ ಅವರು ಲಿಂಗೈಕ್ಯರಾದದ್ದು ತುಂಬಲಾರದ ಹಾನಿ. 
  ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘಾಮಠ, ಧಾರವಾಡ

ಮಾತೆಯವರ ಪೂರ್ವಾಶ್ರಮ ಮತ್ತು ಸನ್ಯಾಸ ದೀಕ್ಷೆ ನಂತರ ವಿರೋಧವನ್ನು ಲೆಕ್ಕಿಸದೆ ಕಂಚಿನ ಕಂಠದಿಂದ ಬಸವ ತತ್ವ
ಪ್ರತಿಪಾದಿಸಿದ್ದರು. ನೇರ, ನಿಷ್ಠುರತೆ ಹೊಂದಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟ.
 ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಭೋವಿ ಗುರುಪೀಠ 

ಇದು ಆಘಾತಕಾರಿ ವರ್ಷ. ಇಳಕಲ್‌ ಮಹಾಂತ ಶ್ರೀ, ತೋಂಟದಾರ್ಯ ಶ್ರೀ, ಶಿವಕುಮಾ ಶ್ರೀ ಕಳೆದುಕೊಂಡು
ಸಮಾಜ ಬಡವಾಗಿದೆ. ಈಗ ಮಾತಾಜಿ ಲಿಂಗೈಕ್ಯರಾಗಿರುವುದು ಆಘಾತ ತಂದಿದೆ. 
 ಜಿ.ಬಿ. ಪಾಟೀಲ್‌, ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

10lake

ಯಡ್ರಾಮಿ ಸ್ವಚ್ಛತೆಗೆ ಅನುದಾನ ಕೊರತೆಯಂತೆ!

9power

ನಿರಂತರ ವಿದ್ಯುತ್‌ ನೀಡಲು ಮನವಿ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.