ದೇಶದಲ್ಲಿ 25ರಿಂದ 30 ರಷ್ಟು ಮಾತ್ರ ಬಿಜೆಪಿ ಶಾಸಕರ ಸಂಖ್ಯೆಯಿದೆ: ಮಲ್ಲಿಕಾರ್ಜುನ ಖರ್ಗೆ


Team Udayavani, Jul 11, 2022, 2:28 PM IST

ದೇಶದಲ್ಲಿ 25ರಿಂದ 30 ರಷ್ಟು ಮಾತ್ರ ಬಿಜೆಪಿ ಶಾಸಕರ ಸಂಖ್ಯೆಯಿದೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಸಂಸತ್ತಿನಲ್ಲಿ ಬಿಜೆಪಿ ಬಹುಮತ ಸದಸ್ಯರ ಸಂಖ್ಯೆ ಹೊಂದಿದೆ. ಆದರೆ ದೇಶದಲ್ಲಿ ಒಟ್ಟಾರೆ ಶಾಸಕರಲ್ಲಿ ಶೇ. 25ರಿಂದ 30ರಷ್ಟು ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೂ ಹಿಂಬಾಗಿಲಿನಿಂದ ಸರ್ಕಾರ ರಚಿಸಿ ಆಡಳಿತ ನಡೆಸಲಾಗುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಂಡಿಚೇರಿಯಿಂದ ಹಿಡಿದು ದಕ್ಷಿಣ ಭಾರತದವರೆಗಿನ ರಾಜ್ಯಗಳಲ್ಲಿ ಪಕ್ಷವಾರು ವಿವರ ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಿಹಾರ, ಕರ್ನಾಟಕ, ಆಂಧ್ರ ಪ್ರದೇಶ, ನವದೆಹಲಿ, ಪಂಜಾಬ್, ಮಹಾರಾಷ್ಟ್ರ,ತಮಿಳನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಬಿಜೆಪಿ ಶಾಸಕರು ಎಷ್ಟಿದ್ದಾರೆ ಎಂಬುದನ್ನು ಬಿಜೆಪಿಯವರೇ ಲೆಕ್ಕ ಮಾಡಲಿ ಎಂದು ಸವಾಲು ಹಾಕಿದರು.

ದೇಶದ ಒಟ್ಟಾರೆ ಶಾಸಕರ ಸಂಖ್ಯೆಯಲ್ಲಿ ಬಿಜೆಪಿ ಶೇ.‌25ರಿಂದ. 30 ರಷ್ಟು ಮಾತ್ರ ಶಾಸಕರನ್ನು ಬಿಜೆಪಿ ಹೊಂದಿದೆ.‌ ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಸರ್ಕಾರ ಹೇಗೆ ಮಾಡಿದರು ಎಂಬುದು ಎಲ್ಲರಿಗೆ ಗೊತ್ತಿದೆ. ಈಗ ಗೋವಾದಲ್ಲಿ ಮತ್ತೆ ಕಮಲ ಆಪರೇಷನ್ ಮಾಡಲು ಮುಂದಾಗಿರುವುದು ನಾಚಿಗೇಡಿತನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರಿಗೆ ಅಧಿಕಾರ ಪಡೆಯುವುದೇ ಮುಖ್ಯ ಧ್ಯೇಯವಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗುತ್ತಿಲ್ಲ. ರಕ್ಷಣಾ ಇಲಾಖೆಯಲ್ಲೇ ಎರಡು ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿ ಬದಲು ಅಗ್ನಿ ಪಥ ಎಂದು ಹೇಳಿ ತಾತ್ಕಾಲಿಕವಾಗಿ ಭರ್ತಿ ಮಾಡುವುದು ಪಲಾಯನ ವಾದವಾಗಿದೆ. ಅದೇ ರೀತಿ ಬಿಎಸ್ ಎನ್ಎಲ್, ರೈಲ್ವೇ, ಪೊಲೀಸ್, ಶಿಕ್ಷಣದಲ್ಲೂ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ‌ಮೊದಲು ಭರ್ತಿ ಮಾಡಿಕೊಳ್ಳಲಿ. ಉಜ್ವಲ ಎಂದು ಹೇಳಿ ಮೊದಲಿಗೆ ಒಂದರ ಜತೆ ಒಂದು ಉಚಿತ ಎಂದು ಹೇಳಿ ಸಿಲೆಂಡರ್ ನೀಡಿ ಈಗ ದರ ಮೂರು ಪಟ್ಟು ಹೆಚ್ಚಿಸಿರುವುದು ಅಭಿವೃದ್ಧಿಯೇ? ಯಾವುದಾದರೂ ಕೇಳಿದರೆ ಹಿಂದುತ್ವ ಹೇಳಿ ಅಭಿವೃದ್ಧಿ ವಿಷಯವನ್ನೇ ಮರೆ ಮಾಚಿಸಲಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಪ್ರಜಾಪ್ರಭುತ್ವ ಕ್ಕೆ ದೊಡ್ಡ ಹೊಡೆತ ಬೀಳುತ್ತಿದ್ದರೂ ಯುವಕರನ್ನೂ ಛೂ ಬಿಟ್ಟು ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗೆ ಬಲವಾದ ಪೆಟ್ಟು ನೀಡಲಾಗುತ್ತಿದೆ. ಈಗಲಾದರೂ ದೇಶದ ಜನ ಎಚ್ಚೆತ್ತುಕೊಳ್ಳುವುದು ಅವಶ್ಯಕವಿದೆ ಎಂದು ಡಾ. ಖರ್ಗೆ ಒತ್ತಿ ಹೇಳಿದರು.

17ರಂದು ಸಭೆ:  ಚುನಾವಣೆ ಅಂಗವಾಗಿ 17 ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಹಲವರು ತಮ್ಮೊಂದಿಗೆ ಬರಲು ಹೇಳಿದ್ದಾದರೂ ಇನ್ನೂ ಕೆಲವರು ತಟಸ್ಥ ನಿಲುವು ಹೊಂದಿದ್ದಾರೆ.‌ ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಜ್ಯದಲ್ಲಿ ಸಚಿವರ ಮೌಲ್ಯ ಅಭಿವೃದ್ಧಿ ನಿಟ್ಟಿನಲ್ಲಿ ಆಗಲಿ. ಈ  ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಅನಿರೀಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿ ಸಚಿವರ ಮೌಲ್ಯಮಾಪನ ನಡೆಸಿದ್ದರು.‌ ಮುಖ್ಯಮಂತ್ರಿಗಳು ಸಚಿವರ ಮೌಲ್ಯ ಮಾಪನ ನಡೆಸುವುದು ಒಂದು ಪ್ರಕ್ರಿಯೆ ಕಾರ್ಯವಾಗಿದೆ. ‌ಅದನ್ನು ಮಾಧ್ಯಮಗಳಿಗೆ ಹೇಳಿ ಮಾಡುವಂತದ್ದಲ್ಲ ಎಂದರು.

ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ (ಸಿಯುಕೆ) ವಿಶ್ವವಿದ್ಯಾಲಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರುಗಳು ಕೇಳಿ ಬಂದವು. ‌ಇದಾಗಬಾರದು. ಶಿಕ್ಷಣವೊಂದೇ ನಡೆಯಬೇಕು.‌ ಬೇಕಿದ್ದರೆ ಹೊರಗಡೆ ಏಲ್ಲಾದರೂ ಆರ್ ಎಸ್ಎಸ್ ತನ್ನ ಚಟುವಟಿಕೆಗಳನ್ನು ನಡೆಸಲಿ‌ ಎಂದು ಖರ್ಗೆ ಹೇಳಿದರು.

‌ಮಾಜಿ‌ ಸಚಿವ  ಡಾ.‌ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣು ಮೋದಿ ಸೇರಿದಂತೆ ಮುಂತಾದವರಿದ್ದರು.

ಟಾಪ್ ನ್ಯೂಸ್

1-wadasdsad

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ: ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ

ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾದರಿ: ಯತ್ನಾಳ

ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ: ಯತ್ನಾಳ

ಕಾಶ್ಮೀರದಲ್ಲಿ ಎಂಟು ಪತ್ರಕರ್ತರಿಗೆ ಆನ್​ಲೈನ್​ನಲ್ಲಿ ಉಗ್ರರ ಬೆದರಿಕೆ: ಸಚಿವ ನಿತ್ಯಾನಂದ ರೈ

ಕಾಶ್ಮೀರದಲ್ಲಿ ಎಂಟು ಪತ್ರಕರ್ತರಿಗೆ ಆನ್​ಲೈನ್​ನಲ್ಲಿ ಉಗ್ರರ ಬೆದರಿಕೆ: ಸಚಿವ ನಿತ್ಯಾನಂದ ರೈ

1–dadsadsad

ಅಮೃತ ಕಾಲದಲ್ಲಿ ಜಗತ್ತಿಗೆ ನಿರ್ದೇಶನ ನೀಡುವಲ್ಲಿ ಭಾರತ ಪ್ರಮುಖ ಪಾತ್ರ: ಪ್ರಧಾನಿ ಮೋದಿ

1-adadasd

ಕ್ಯಾಚ್‌ ಹಿಡಿಯಲು ಯತ್ನ : ಹೆಬ್ಬೆರಳಿಗೆ ಗಾಯವಾಗಿ ರೋಹಿತ್‌ ಶರ್ಮಾ ಆಸ್ಪತ್ರೆಗೆ

rawat ss

ಗಡಿ ವಿವಾದ ; ದೆಹಲಿಯ ಬೆಂಬಲವಿಲ್ಲದೆ ಅಹಿತಕರ ಘಟನೆಗಳು ನಡೆಯಲ್ಲ: ರಾವತ್

cm-bommai

ಬಿಜೆಪಿ ರಾಷ್ಟ್ರೀಯ ಪಕ್ಷ,ಚುನಾವಣಾ ಟಿಕೆಟ್‌ಗಾಗಿ ಪೈಪೋಟಿ ಸಹಜ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಬುರಗಿ: ನಿಂತಿದ್ದ ಕಂಟೇನರ್ ಗೆ ಕಾರು ಢಿಕ್ಕಿ; ಸಿಪಿಐ ದಂಪತಿ ಸಾವು

ಕಲಬುರಗಿ: ನಿಂತಿದ್ದ ಕಂಟೇನರ್ ಗೆ ಕಾರು ಢಿಕ್ಕಿ; ಸಿಪಿಐ ದಂಪತಿ ಸಾವು

ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ- ಅಜ್ಜಿಯರ ದಿನಾಚರಣೆ

ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ- ಅಜ್ಜಿಯರ ದಿನಾಚರಣೆ

1-wadasdad

ಮಣಿಕಂಠ, ಪೊಲೀಸ್ ಆಯುಕ್ತರ ಪತ್ನಿ ವಿರುದ್ಧ ಪ್ರಕರಣಕ್ಕೆ ಕಾಂಗ್ರೆಸ್ ಆಗ್ರಹ

1-asasdsa

ಪಬ್ಬಜ್ಜ ಕಾರ್ಯಕ್ರಮ: ವಾಡಿಯ ಬೌದ್ಧ ತಾಣದಲ್ಲಿ ಪೊರಕೆ ಹಿಡಿದ ಭಂತೇಜಿಗಳು

ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಬೆಳೆಸಿದ ಹನುಮ ಮಾಲಾಧಾರಿಗಳು

ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಬೆಳೆಸಿದ ಹನುಮ ಮಾಲಾಧಾರಿಗಳು

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

1-wadasdsad

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ: ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ

ಕೋಟ: ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ; ಸಾಹಿತ್ಯ ಹೂದೋಟದಲ್ಲಿ ಯುವ ಪುಷ್ಪಗಳು…

ಕೋಟ: ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ; ಸಾಹಿತ್ಯ ಹೂದೋಟದಲ್ಲಿ ಯುವ ಪುಷ್ಪಗಳು…

ಜೀವನ ಮೌಲ್ಯ ಅಳವಡಿಸಿಕೊಳ್ಳಿ; ಶಾಸಕ ಉಮಾನಾಥ ಕೋಟ್ಯಾನ್‌

ಜೀವನ ಮೌಲ್ಯ ಅಳವಡಿಸಿಕೊಳ್ಳಿ; ಶಾಸಕ ಉಮಾನಾಥ ಕೋಟ್ಯಾನ್‌

ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾದರಿ: ಯತ್ನಾಳ

ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ: ಯತ್ನಾಳ

ಕಾಶ್ಮೀರದಲ್ಲಿ ಎಂಟು ಪತ್ರಕರ್ತರಿಗೆ ಆನ್​ಲೈನ್​ನಲ್ಲಿ ಉಗ್ರರ ಬೆದರಿಕೆ: ಸಚಿವ ನಿತ್ಯಾನಂದ ರೈ

ಕಾಶ್ಮೀರದಲ್ಲಿ ಎಂಟು ಪತ್ರಕರ್ತರಿಗೆ ಆನ್​ಲೈನ್​ನಲ್ಲಿ ಉಗ್ರರ ಬೆದರಿಕೆ: ಸಚಿವ ನಿತ್ಯಾನಂದ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.