ಶಿಕ್ಷಣ ಖಾತೆ ಸಚಿವ ಸರಾ ಮಹೇಶ-ಬೀದರ ಸಂಸದ ಭಗತ್‌ಸಿಂಗ್‌ ಖೂಬಾ!

Team Udayavani, Sep 15, 2018, 9:49 AM IST

ಮಾದನ ಹಿಪ್ಪರಗಿ: ರಾಜ್ಯದ ಶಿಕ್ಷಣ ಖಾತೆ ಸಚಿವ ಸ.ರಾ. ಮಹೇಶ ಮತ್ತು ಬೀದರ ಸಂಸದ ಭಗತ್‌ಸಿಂಗ್‌ ಖೂಬಾ!
ಹೌದು, ಮಾದನ ಹಿಪ್ಪರಗಿ ಹೊಸಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದಲ್ಲಿರುವ ಫಲಕದಲ್ಲಿರುವ ಮಾಹಿತಿ ಇದು.

ಮಕ್ಕಳ ಜ್ಞಾನಕ್ಕಾಗಿ ಶಾಲೆ ಕೋಣೆಯೊಂದರ ಫಲಕದಲ್ಲಿ ಜನಪ್ರತಿನಿಧಿಗಳು ಮತ್ತು ಅವರ ಹುದ್ದೆ ಬರೆಸಲಾಗಿದೆ.
ಆದರೆ ಅದರಲ್ಲಿ ಎರಡೂಮೂರು ತಪ್ಪುಗಳು ಇದ್ದರು ಸಹ ಶಿಕ್ಷಕರು ಗಮನಿಸಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ಪ್ರಧಾಮಂತ್ರಿಗಳು ನರೇಂದ್ರ ಮೋದಿ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಮಾನವ ಸಂಪನ್ಮೂಲ ಮಂತ್ರಿಗಳು ಎಂದು ಬರೆಯಲಾಗಿದೆ. ಆದರೆ ಸಚಿವರ ಹೆಸರನ್ನು ಮಾತ್ರ ಬರೆಯದೆ ಖಾಲಿ ಬಿಡಲಾಗಿದೆ. ರಾಜ್ಯಪಾಲರ ಎಂಬಲ್ಲಿ ವಿ.ಆರ್‌. ವಾಲಾ, ಮುಖ್ಯಮಂತ್ರಿಗಳು ಎಂಬಲ್ಲಿ ಕುಮಾರಸ್ವಾಮಿ, ಶಿಕ್ಷಣ ಸಚಿವರು ಎಂಬಲ್ಲಿ ಸ.ರಾ. ಮಹೇಶ ಮತ್ತು ಲೋಕಸಭಾ ಸದಸ್ಯರು ಎಂಬಲ್ಲಿ ಭಗತ್‌ಸಿಂಗ್‌ ಖೂಬಾ ಎಂದು ಬರೆಯಲಾಗಿದೆ.

ಶಾಸಕರ ಹೆಸರನ್ನು ಸುಭಾಷ ಗುತ್ತೇದಾರ ಮತ್ತು ಜಿಪಂ ಸದಸ್ಯರ ಹೆಸರನ್ನು ಗುರುಶಾಂತ ಪಾಟೀಲ ಎಂದು ಸರಿಯಾಗಿಯೇ ಬರೆಯಲಾಗಿದೆ. ಇನ್ನು ಜಿಪಂ ಅಧ್ಯಕ್ಷರ ಹೆಸರನ್ನು ಸುವರ್ಣಾ ಮಾಲಾಜಿ ಎಂದು ಬರೆಯುವ ಬದಲು ಸೂವರ್ಣಾ ಮಾಲಾಜಿ ಎಂದು ಬರೆಯಲಾಗಿದೆ.

ರಾಜ್ಯದ ಶಿಕ್ಷಣ ಖಾತೆ ಸಚಿವರ ಹೆಸರು ಎನ್‌. ಮಹೇಶ ಮತ್ತು ಬೀದರ ಲೋಕಸಭಾ ಸದಸ್ಯರ ಹೆಸರು ಭಗವಂತ ಖೂಬಾ ಬರೆಯಬೇಕಾಗಿತ್ತು. ಆದರೆ ನೂರಾರು ಮಕ್ಕಳ ಮನಸ್ಸಿನಲ್ಲಿ ಸ.ರಾ. ಮಹೇಶ ಮತ್ತು ಭಗತ್‌ಸಿಂಗ್‌ ಖೂಬಾ ಎಂದೇ ಅಚ್ಚೊತ್ತಿದಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಾಡಿ: ಗ್ರಾಮಸ್ಥರ ವಿವಿಧ ಕುಂದು ಕೊರತೆಗಳನ್ನು ಕೇಳಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ನಡೆಸಲಾಗುವ ಅಧಿಕಾರಿಗಳ ಜನಸ್ಪಂದನೆ ಸಭೆ, ಗದ್ದಲದ ಗೂಡಾಗಿ...

  • ಕಲಬುರಗಿ: ಕನ್ನಡ ಮತ್ತು ಕನ್ನಡ ಪರ ಕೆಲಸ ಮಾಡಲು ಸರ್ಕಾರದ ಆದೇಶವೇ ಬೇಕೆ? ಹಣದ ನೀಡಿದರೆ ಮಾತ್ರ ಕನ್ನಡದ ಕೆಲಸ ಮಾಡುತೀ¤ರಾ? ಎಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ...

  • ಜೇವರ್ಗಿ: ಪಟ್ಟಣದ ಶಾಸ್ತ್ರೀಚೌಕ್‌ ಬಡಾವಣೆಯ ಸಿಂಡಿಕೇಟ್‌ ಬ್ಯಾಂಕ್‌ ಹತ್ತಿರದ ಹಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಳು ಬಿದ್ದು ಕಸದ ತೊಟ್ಟಿ ಹಾಗೂ...

  • ಯಡ್ರಾಮಿ: ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 416 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಇವರಿಗೆ ಕಲಿಸಲು ನಾಲ್ವರು ಶಿಕ್ಷಕರು ಇದ್ದು, ಇದರಲ್ಲೊಬ್ಬರು...

  • ಕಲಬುರಗಿ: ತತ್ವಪದಗಳು ಕನ್ನಡ ಸಾಹಿತ್ಯದಲ್ಲಿ ಆಳ ಹಾಗೂ ಅಗಲವಾಗಿರುವಷ್ಟು ಬೇರ್ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಸ್ತಾರವಾಗಿ ವ್ಯಾಪಿಸಿಕೊಂಡಿಲ್ಲ ಎಂದು ಚಿಂತಕ...

ಹೊಸ ಸೇರ್ಪಡೆ