Udayavni Special

ಕಟೀಲ್‌ ಹೇಳಿಕೆಗೆ ಶಾಸಕ ಪ್ರಿಯಾಂಕ್‌ ತಿರುಗೇಟು

ಅಭಿವೃದ್ಧಿ  ಯಾರು ಮಾಡಿದ್ದಾರೆಂದು ಕಣ್ತೆರೆದು ನೋಡಿ| ಒಂದು ರೈಲು ನಿಲ್ಲಿಸಲು ಆಗಲಿಲ್ಲ ನಿಮ್ಮಿಂದ

Team Udayavani, Apr 5, 2021, 6:15 PM IST

fyjftyjr

ಕಲಬುರಗಿ: ವಿಷಕಾರಿ ಆಗಿದ್ದರಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜನ ಸೋಲಿಸಿದ್ದಾರೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಅವರಿಗೆ ಖರ್ಗೆ ಅವರು ವಿಷಕಾರಿಯಾಗಿದ್ದರಿಂದಲೇ ನಮ್ಮ ಭಾಗಕ್ಕೆ 371ನೇ (ಜೆ) ಕಲಂ, ರೈಲ್ವೆ ಡಿವಿಜನ್‌, ಇಎಸ್‌ಐಸಿ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಗಿ ಕುಟುಕಿದ್ದಾರೆ.

ಟ್ವಿಟ್‌ ಮಾಡಿರುವ ಪ್ರಿಯಾಂಕ್‌ ಖರ್ಗೆ ವಿಷಕಾರಿಯಾಗಿ ದ್ದರಿಂದಲೇ, 371(ಜೆ), ರೈಲ್ವೆ ಡಿವಿಜನ್‌, ಇಎಸ್‌ ಐಸಿ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ನಿಮ್‌l, ವಿಮಾನ ನಿಲ್ದಾಣ, ಜವಳಿ ಪಾರ್ಕ್‌, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯಂತಹ ಪ್ರಮುಖ ಯೋಜನೆಗಳು ಈ ಭಾಗಕ್ಕೆ ಬಂದಿವೆ ಎಂದು ತಿರುಗೇಟು ನೀಡಿದ್ದಾರೆ.

ಪ್ರಸ್ತುತ ಸರ್ಕಾರದಲ್ಲಿ ಜಿಲ್ಲೆಯಿಂದ ಒಬ್ಬ ಶಾಸಕರೂ ಸಚಿವರನ್ನಾಗಿ ಮಾಡಲಿಲ್ಲ. ಮಕರಂದ ಸೂಸುವ ಬಿಜೆಪಿಯಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿಯಿಂದ ಅನುದಾನ ಹಾಗೂ ಪ್ರತ್ಯೇಕ ರೈಲ್ವೆ ವಿಭಾಗ ಬಿಡಿ, ಒಂದೂ ರೈಲನ್ನು ನಿಲ್ಲಿಸಲು ನಿಮ್ಮಿಂದ ಆಗಲಿಲ್ಲ. ಬಿಜೆಪಿಯವರ ಮಕರಂದದ ಸುವಾಸನೆಗೆ ಹಿಂದಿನ ಸರ್ಕಾರದ ಯೋಜನೆಗಳೆಲ್ಲ ರದ್ದಾಗಿವೆ. ಸಚಿವರಾದ ಕೆ.ಎಸ್‌. ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಲಾಗದಂತ ದುರ್ಬಲ ಅಧ್ಯಕ್ಷ ಎಂದು ಕಟೀಲ್‌ ಅವರನ್ನು ಪ್ರಿಯಾಂಕ್‌ ಟೀಕಿಸಿದ್ದಾರೆ.

ಕಾಂಗ್ರೆಸ್‌ ಟೀಕೆ:

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಕಾರಿ ಎನ್ನುವ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್‌ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ತೀವ್ರವಾಗಿ ಖಂಡಿಸಿದೆ. ಖರ್ಗೆ ಅವರು ವಿಷಕಾರಿಯಾಗಿದ್ದರೆ ಈ ಭಾಗದಲ್ಲಿ 11 ಬಾರಿ ಚುನಾವಣೆಯಲ್ಲಿ ಗೆಲುವು ಕಾಣುತ್ತಿರಲಿಲ್ಲ. ಅದೇ ರೀತಿ ಖರ್ಗೆ ಈ ಭಾಗಕ್ಕೆ ಇಎಸ್‌ಐ ಆಸ್ಪತ್ರೆ, ಕೇಂದ್ರಿಯ ವಿಶ್ವವಿದ್ಯಾಲಯ, ಕಲಂ 371 (ಜೆ), ವಿಮಾನ ನಿಲ್ದಾಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಪೊಲೀಸ್‌ ತರಬೇತಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಮೇಲಾಗಿ ರೈಲ್ವೆ ಸಚಿವರಾಗಿರುವ ಸಂದರ್ಭದಲ್ಲಿ ಜಿಲ್ಲೆಯಿಂದ ರಾಜ್ಯ ಕೇಂದ್ರ ಸ್ಥಾನಕ್ಕೆ ಬೀದರ-ಯಶವಂತಪುರ, ಕಲಬುರಗಿ ಮಾರ್ಗವಾಗಿ ಸೊಲ್ಲಾಪುರ-ಯಶವಂತಪುರ, ಸಿಕಿಂದ್ರಾಬಾದ-ಹುಬ್ಬಳ್ಳಿ ಮತ್ತು ಅನೇಕ ಹೊಸ ರೈಲುಗಳ ಓಡಾಟ ಹಾಗೂ ಕಲಬುರಗಿ ಹಾಗೂ ಇತರೆ ಭಾಗದ ರೈಲ್ವೆ ನಿಲ್ದಾಣಗಳ ನವೀಕರಣ, ಯಾದಗಿರಿ ಜಿಲ್ಲೆಯ ಕಡೇಚೂರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಮತ್ತು ಬೆಂಗಳೂರಿನಿಂದ ವಾರಣಾಸಿಗೆ ರೈಲ್ವೆ ಹೀಗೆ ಇನ್ನೂ ಅನೇಕ ಕೆಲಸಗಳು ಆಗುತ್ತಿದ್ದವೇ? ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಪ್ರಶ್ನಿಸಿದ್ದಾರೆ.

ಈ ಭಾಗಕ್ಕೆ ಮಂಜೂರಿ ಮಾಡಿಸಿದಂತಹ ಅನೇಕ ಯೋಜನೆಗಳು ಮತ್ತು ಕಚೇರಿಗಳು ಈಗ ಬಿಜೆಪಿ ಸರಕಾರ ರದ್ದುಗೊಳಿಸುವುದು, ಬೇರೆ ಕಡೆ ಸ್ಥಳಾಂತಗೊಳಿಸುವದನ್ನು ಮಾಡಿದೆ. ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಡುತ್ತಿರುವ ತಾರತಮ್ಯ ಧೋರಣೆ ಮತ್ತು ವಿಷಕಾರಿ ಕೆಲಸವನ್ನು ಎತ್ತಿ ತೋರಿಸುತ್ತಿದೆ. ಮುಖ್ಯವಾಗಿ ಕಟೀಲು ಅವರಿಗೆ ರಾಜಕೀಯ ಅನುಭವ ಹಾಗೂ ತಿಳಿವಳಿಕೆ ಕಡಿಮೆ ಇದೆ ಎಂದು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಟಾಪ್ ನ್ಯೂಸ್

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

oxygen-container-came-from-isrel-to-yadagiri-report

ಯಾದಗಿರಿಗೆ ಇಸ್ರೇಲ್‌ ನಿಂದ ಬಂತು ಆಕ್ಸಿಜನ್ ಉತ್ಪಾದಿಸುವ ಘಟಕದ ಬೃಹತ್ ಕಂಟೇನರ್

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ ಶೇ.80ರಷ್ಟು ರಕ್ಷಣೆ : ಪಬ್ಲಿಕ್‌ ಹೆಲ್ತ್‌ ವರದಿ

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ವರದಿ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

Smalla Scale Industry – Jagadeesh Shettar

ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕದ ಪರಿಷ್ಕರಣೆಗೆ ನೂತನ ಸೂತ್ರ ಸಿದ್ಧ: ಶೆಟ್ಟರ್‌

ರಾಜ್ಯದಲ್ಲಿಂದು 39,510 ಹೊಸ ಕೋವಿಡ್ ಪ್ರಕರಣ ಪತ್ತೆ: 480 ಜನರ ಸಾವು, 22,584 ಮಂದಿ ಗುಣಮುಖ

ರಾಜ್ಯದಲ್ಲಿಂದು 39,510 ಹೊಸ ಕೋವಿಡ್ ಪ್ರಕರಣ ಪತ್ತೆ: 480 ಜನರ ಸಾವು, 22,584 ಮಂದಿ ಗುಣಮುಖ

ರೆಮ್‌ಡಿಸಿವಿರ್ ಅಕ್ರಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ರೆಮ್‌ಡಿಸಿವಿರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಏ ನಾಲಾಯಕ್ ಫೋನ್ ಇಡು…. : ಮೃತಪಟ್ಟ ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಆಡಿಯೋ ವೈರಲ್

ಏ ನಾಲಾಯಕ್ ಫೋನ್ ಇಡು… : ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಸಂಭಾಷಣೆಯ ಆಡಿಯೋ ವೈರಲ್

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

11-21

ಸೋಂಕಿತರ ಸಂಬಂಧಿಗಳಿಗೆ ಉಚಿತ ದಾಸೋಹ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

11-20

ಪೊಲೀಸರಿಂದ ಪಾಠ; ಕೆಲವರ ಪೇಚಾಟ!

11-19

ಕೊರೊನಾಕ್ಕೆ ಹೆದರಿ ನಿವೃತ್ತ ಉಪ ತಹಶೀಲ್ದಾರ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.