ಜೂನ್‌ ಕಳೆದರೂ ಧರೆಗಿಳಿಯದ ಮಳೆರಾಯ

•ಭೂಮಿ ಹದ ಮಾಡಿ ಬಿತ್ತನೆ ಬೀಜ ಸಂಗ್ರಹಿಸಿರುವ ರೈತ•ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಅನ್ನದಾತ

Team Udayavani, Jul 9, 2019, 7:55 AM IST

ಚಿತ್ತಾಪುರ: ಡೋಣಗಾಂವ ಹೊಲದಲ್ಲಿ ರೈತನೊಬ್ಬ ಬಿತ್ತನೆ ಮಾಡುತ್ತಿರುವುದು.

ಚಿತ್ತಾಪುರ: ಈ ಬಾರಿ ಮುಂಗಾರು ಮಳೆ ರೈತರ ಮೇಲೆ ಮುನಿಸಿಕೊಂಡಂತೆ ಕಂಡು ಬರುತ್ತಿದೆ. ಬೇಸಿಗೆಯಲ್ಲಿ ತಾಲೂಕಿನ ಹಳ್ಳಗಳು, ಬಾವಿಗಳು, ನದಿಗಳು ಬತ್ತಿ ಹೋಗಿ ನೀರಿನ ಕೊರತೆ ಉಂಟಾಗಿತ್ತು. ರೈತರು ಮತ್ತು ತಾಲೂಕಿನ ಜನರು ಈ ಬಾರಿಯಾದರೂ ಮುಂಗಾರು ಮಳೆ ಬಂದು ಆಸರೆ ಆಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಮುಂಗಾರು ಕಾಲಿಟ್ಟು ಒಂದು ತಿಂಗಳು ಕಳೆದರೂ ಹೇಳಿಕೊಳ್ಳುವಷ್ಟು ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ಐದು ಹೋಬಳಿಗಳು ಇವೆ. 1,43,000 ಸಾವಿರ ಹೆಕ್ಟೇರ್‌ ಪ್ರದೇಶ ಬಿತ್ತನೆಗೆ ಯೋಗ್ಯ ಪ್ರದೇಶವಾಗಿದೆ. 1,19,000 ಹೆಕ್ಟೇರ್‌ ಪ್ರದೇಶ ಖುಷ್ಕಿ (ಮಳೆಯಾದಾರಿತ), 1,435 ಹೆಕ್ಟೇರ್‌ ಪ್ರದೇಶ ನೀರಾವರಿ ಕೃಷಿ ಪ್ರದೇಶ ಹೊಂದಿದೆ.

ಪ್ರತಿ ವರ್ಷ ಕೃಷಿ ಇಲಾಖೆ ಮುಂಗಾರಿನ ನಿರ್ದಿಷ್ಟ ಪ್ರಮಾಣದ ಬಿತ್ತನೆ ಗುರಿ ಹಾಕಿಕೊಳ್ಳುತ್ತದೆ. ಹಾಗೆಯೇ ಅದರಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನ ಗುರಿಯನ್ನು ಜೂನ್‌ ತಿಂಗಳಲ್ಲಿ ಕಳೆದ ವರ್ಷದವರೆಗೂ ತಲುಪುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮುನಿಸಿಕೊಂಡ ಕಾರಣ ತಾಲೂಕಿನಲ್ಲಿ ಬಿತ್ತನೆ ಪ್ರಮಾಣ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ರೈತರು ಮಾತ್ರ ಭೂಮಿ ಹದಗೊಳಿಸಿ, ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಕೊಂಡು ಮುಗಿಲು ನೋಡುತ್ತ ಕುಳಿತಿದ್ದಾರೆ.

ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕಡಿಮೆ ಪ್ರಮಾಣದಲ್ಲಾಗಿದೆ. 2018ರ ಮುಂಗಾರು ಪೂರ್ವ ಮತ್ತು ಮುಂಗಾರಿನ ತಿಂಗಳುಗಳಾದ ಏಪ್ರಿಲ್, ಮೇ, ಜೂನ್‌ ತಿಂಗಳ ಅಂತ್ಯಕ್ಕೆ ತಾಲೂಕಿನಲ್ಲಿ ಸರಾಸರಿ 126ಮೀ.ಮೀ ಮಳೆಯಾಗಿತ್ತು. ಆದರೆ ಈ ವರ್ಷದ ಜೂನ್‌ ತಿಂಗಳ ಅಂತ್ಯದವರೆಗೆ 191 ಮಿ.ಮೀ ಮಳೆ ಬರಬೇಕಿತ್ತು. ಆದರೆ ಕೇವಲ 143 ಮಿ.ಮೀ ಮಳೆಯಾಗಿರುವುದು ರೈತರಲ್ಲಿ ಚಿಂತೆ ಹೆಚ್ಚು ಮಾಡಿದೆ.

ಈ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಬೆಳೆಯಬಹುದಾದ ಪ್ರದೇಶದ ಗುರಿ ಹಾಕಿಕೊಂಡಿದ್ದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 1.20 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ನಿರೀಕ್ಷೆಯಿಟ್ಟುಕೊಂಡಿತ್ತು. 89,300 ಹೆಕ್ಟೇರ್‌ ತೊಗರಿ, 13,000 ಹೆಕ್ಟೇರ್‌ ಹೆಸರು, 7,000 ಹೆಕ್ಟೇರ್‌ ಉದ್ದು, 3,000 ಹೆಕ್ಟೇರ್‌ ಹತ್ತಿ, 1,900 ಹೆಕ್ಟೇರ್‌ ಸಜ್ಜೆ, 85 ಹೆಕ್ಟೇರ್‌ ಭತ್ತ, 1,500 ಹೆಕ್ಟೇರ್‌ ಸೂರ್ಯಕಾಂತಿ, 15 ಹೆಕ್ಟೇರ್‌ ಔಡಲ ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. 1,800 ಹೆಕ್ಟೇರ್‌ನಷ್ಟು ಸೋಯಾಬೀನ್‌, 1,000 ಹೆಕ್ಟೇರ್‌ ಎಳ್ಳು ಬಿತ್ತನೆಯ ಗುರಿ ಹೊಂದಲಾಗಿತ್ತು.

54,380 ಸಾವಿರ ಹೆಕ್ಟೇರ್‌ ಮಾತ್ರ ಬಿತ್ತನೆ: ತಾಲೂಕಿನಲ್ಲಿ ಒಟ್ಟು ಐದು ಹೋಬಳಿ ವ್ಯಾಪ್ತಿಯಲ್ಲಿ 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಆದರೆ ವಿಪರ್ಯಾಸ ಎನ್ನುವಂತೆ ಜೂನ್‌ ತಿಂಗಳ ಅಂತ್ಯದವರೆಗೆ ಕೇವಲ 54,380 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಹೀಗಾಗಿ ಪ್ರತಿ ವರ್ಷವೂ ರೈತರು ಮಳೆಯನ್ನೆ ಅವಲಂಬಿಸಿದ್ದು ಆಳುವ ಸರ್ಕಾರಗಳು ರೈತರ ನೆರವಿಗೆ ಬರಬೇಕಿದೆ.

ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನಾವು ಹಾಕಿಕೊಂಡಿರುವ 1.20 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ ಜುಲೈ 3ರ ತನಕ ಅಂದಾಜು 54,380 ಸಾವಿರ ಹೆಕ್ಟೇರ್‌ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.•ಎಸ್‌.ಎಚ್. ಗಡಗಿಮನಿ, ಸಹಾಯಕ ಕೃಷಿ ನಿರ್ದೇಶಕ

ಕಳೆದ ನಾಲ್ಕೈದು ವರ್ಷಗಳ ಹಿಂದೆ ಜೂನ್‌ ಮುಗಿಯುವ ಹಂತದಲ್ಲಿ ಹೆಚ್ಚಾಗಿ ಮಳೆಯಾಗುತ್ತಿತ್ತು. ಹೀಗಾಗಿ ಜೂನ್‌ ಮೊದಲ ವಾರದಲ್ಲಿಯೇ ಬಿತ್ತನೆಗೆ ತಯಾರಿ ಮಾಡಿಕೊಂಡು ಬಿತ್ತನೆ ಶುರು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇದೀಗ ಬಿತ್ತನೆಗಿಂತ ಮುಂಚೆಯೆ ಮಳೆರಾಯನಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.•ಶರಣು ಡೋಣಗಾಂವ, ಗ್ರಾಮಸ್ಥ

 

•ಎಂ.ಡಿ. ಮಶಾಖ


ಈ ವಿಭಾಗದಿಂದ ಇನ್ನಷ್ಟು

  • ಅಫಜಲಪುರ: ತಾಲೂಕಿನ 5 ಮರಳು ಸಾಗಟ ಕೇಂದ್ರಗಳಿಂದ ಅಕ್ರಮ ಮರಳು ಸಾಗಾಟ ತಡೆಗಾಗಿ ಮರಳು ಸಮಿತಿ ರಚನೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಹೇಳಿದರು. ಪಟ್ಟಣದ...

  • ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದ ಬಾಲಕಿ ಹಾಗೂ ಹೈದ್ರಾಬಾದನ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರರಕಣಗಳನ್ನು ಖಂಡಿಸಿ ನಗರದಲ್ಲಿ...

  • „ಮಡಿವಾಳಪ್ಪಹೇರೂರ ವಾಡಿ: ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಐತಿಹಾಸಿಕ ಬೌದ್ಧ ತಾಣ ಸನ್ನತಿಯಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. 2009ರಲ್ಲಿ...

  • ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದಾರುಣ ಘಟನೆಯನ್ನು ವಿವಿಧ ಸಂಘಟನೆಗಳು ತೀವ್ರವಾಗಿ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 6 ಜಿಲ್ಲೆಗಳ 33 ತಾಲೂಕು ಕೇಂದ್ರಗಳಲ್ಲಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯ ನೇಮಕಾತಿಗೆ ಪೂರ್ವಭಾವಿಯಾಗಿ...

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...