ಹಾಲಷ್ಟೇ ಅಲ್ಲ, ಇನ್ಮುಂದೆ ಬರಲಿದೆ “ನಂದಿನಿ ನೀರು’ 

Team Udayavani, Oct 27, 2018, 6:00 AM IST

16.jpg

ಕಲಬುರಗಿ: ಗುಣಮಟ್ಟದ ಹಾಲು ಪೂರೈಕೆಯಲ್ಲಿ ಹೆಸರು ಮಾಡಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಹಾಲಿನ ಜತೆಗೆ ಇನ್ಮುಂದೆ ನಂದಿನಿ ಆಕ್ವಾ ಪ್ಯಾಕೇಜ್ಡ್ ಬಾಟಲ್‌ ನೀರು ಪೂರೈಕೆ ಮಾಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನಂದಿನಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಸ್ವೀಟ್‌ ಸೇರಿ ಇತರ ಉತ್ಪನ್ನಗಳಿವೆ. ಇದರ ಜತೆ ಇನ್ಮುಂದೆ ನಂದಿನಿ ಆಕ್ವಾ ಪ್ಯಾಕೇಜ್ಡ್ ಬಾಟಲ್‌ ನೀರು ದೊರೆಯಲಿದೆ. ನಂದಿನ ಉತ್ಪನ್ನಗಳ ಮಳಿಗೆಯಲ್ಲದೇ ಖಾಸಗಿಯಾಗಿ ಎಲ್ಲ ಅಂಗಡಿಗಳಲ್ಲೂ ಈ ನೀರು ದೊರೆಯಲಿದೆ. 

ಬಾಟಲ್‌ ನೀರಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿರುವುದನ್ನು ಮನಗಂಡ ಕೆಎಂಎಫ್‌ ಪ್ಯಾಕೇಜ್ಡ್ ಬಾಟಲ್‌ ನೀರು ಉತ್ಪಾದಿಸಿ ಪೂರೈಸಲು ಮುಂದಾಗಿದ್ದು, ಎರಡೂರು ದಿನದಲ್ಲಿ ರಾಜ್ಯಾದ್ಯಂತ ಮಾರು ಕಟ್ಟೆಗೆ ಬರಲಿದೆ. ಎರಡು ಲೀಟರ್‌, ಒಂದು ಲೀಟರ್‌, ಅರ್ಧ ಹಾಗೂ ಕಾಲು ಲೀಟರ್‌ ಬಾಟಲಿಗಳನ್ನು ಒಳಗೊಂಡ ನಂದಿನಿ ಆಕ್ವಾ ಗ್ರಾಹಕರ ಅಭಿಲಾಷೆ ಹಾಗೂ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ಬೆಂಗಳೂರಿನ ಕುಂಬಳಗೋಡು ಪ್ರದೇಶದಲ್ಲಿ ನೀರು ಉತ್ಪಾದನಾ ಘಟಕ ಹೊಂದಿದ್ದು, ಅಲ್ಲಿಂದ ರಾಜ್ಯಾದ್ಯಂತ ಮಾರುಕಟ್ಟೆಗೆ ಬಹು ಮುಖ್ಯವಾಗಿ ನಂದಿನಿ ಮಾರಾಟ ಮಳಿಗೆಗಳಿಗೆ ಬಿಡುಗಡೆಯಾಗಲಿದೆ. ಈಗಾಗಲೇ ಬಾಟಲ್‌ ನೀರು ಉತ್ಪಾದನೆ ಹಾಗೂ ಮಾರಾಟಕ್ಕೆ ಕೆಎಂಎಫ್‌ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ.

ಮಾರುಕಟ್ಟೆಯಲ್ಲಿ ಉಳಿದ ಕಂಪನಿಗಳ ನೀರಿನ ಬಾಟಲ್‌ಗಳ ದರ ಹಾಗೂ ಗುಣಮಟ್ಟ ಎದುರಿಸಲು ಜತೆಗೆ ಏಜೆಂಟ್‌ ಕಮಿಷನ್‌ ಅನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀಡುವುದು ಸೇರಿ ವಿವಿಧ ಕ್ರಮ ಕೈಗೊಂಡಿದೆ. ಮಾರುಕಟ್ಟೆಯಲ್ಲಿರುವ ಈಗಿನ ಬಾಟಲ್‌ ನೀರಿಗಿಂತ ಕನಿಷ್ಠ 1ರೂ. ಕಡಿಮೆಯಾಗಿ ನೀಡಲು ಮುಂದೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಂದಿನಿ ಆಕ್ವಾ ಬಾಟಲ್‌ ನೀರು ಮನೆ ಮಾತಾಗಲಿದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿಂದು ವಿವಿಧ ಬಗೆಯ ಹಾಲು ಬಂದಿದ್ದರೂ ಬಹುತೇಕ ಜನ ನಂದಿನಿ ಹಾಲನ್ನೇ ನೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ನಂದಿನಿ ಹಾಲಿನಲ್ಲಿ ಯಾವುದೇ ಮಿಶ್ರಿತ ಇಲ್ಲ ಎನ್ನುವ ನಂಬಿಕೆ ಹೊಂದಿರುವುದೇ ನಂದಿನಿ ಆಕ್ವಾ ಬಾಟಲ್‌ ನೀರು ಮಾರುಕಟ್ಟೆಗೂ ಸಹಕಾರಿಯಾಗಲಿದೆ.

ರಾಯಭಾರಿ: ಕೆಎಂಎಫ್‌ ಉತ್ಪನ್ನಗಳಿಗೆ ಖ್ಯಾತ ಚಲನಚಿತ್ರ ತಾರೆ ಪುನೀತ್‌ ರಾಯಭಾರಿಯಾಗಿದ್ದು, ನಂದಿನಿ ಆಕ್ವಾ ಬಾಟಲ್‌ ನೀರಿಗೂ ಅವರನ್ನೇ ಇಲ್ಲವೇ ಬೇರೆಯೊಬ್ಬರನ್ನು ಹಾಕಿಕೊಂಡು ಜಾಹೀರಾತು ನಿರ್ಮಿಸಬೇಕೆಂಬುದರ ಕುರಿತು ಕೆಎಂಎಫ್‌ ಚಿಂತನೆ ನಡೆಸಿದೆ.  

ವರದಾನ: ಕರ್ನಾಟಕ ಹಾಲು ಮಹಾಮಂಡಳಿ ಆರ್ಥಿಕವಾಗಿ ಬಲವರ್ಧನೆ ಹೊಂದಲು ಈ ಬಾಟಲು ನೀರು ಉತ್ಪಾದನೆ ಹಾಗೂ ಮಾರಾಟ ಸಹಕಾರಿ ಯಾಗಲಿದೆ. ಅಲ್ಲದೇ ರಾಜ್ಯದಲ್ಲಿರುವ ಹಾಲು ಉತ್ಪಾದಕರ ಒಕ್ಕೂಟಗಳು ಬಹುತೇಕ ನಷ್ಟದಲ್ಲಿವೆ. ಕೆಲ ಒಕ್ಕೂಟಗಳು ಹೆಸರಿಗೆ ಎನ್ನುವಂತಿವೆ. ನೀರು ಉತ್ಪಾದನೆ ಹಾಗೂ ಮಾರಾಟ ಕಾರ್ಯ ಒಕ್ಕೂಟಗಳ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆ ನಂದಿನಿ ಹಾಲಿನಂತೆ ನಂದಿನಿ ಬಾಟಲ್‌ ನೀರು ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾದಲ್ಲಿ ಕೆಎಂಎಫ್‌ ನೀರು ರಾಜ್ಯಾದ್ಯಂತ ಮಾರುಕಟ್ಟೆ ಹಿಡಿಯಲಿದೆ.

ಕೆಎಂಎಫ್‌ನ ನಂದಿನಿ ಆಕ್ವಾ ಬಾಟಲ್‌ ನೀರು ಉತ್ಪಾದನೆ ಹಾಗೂ ಮಾರುಕಟ್ಟೆ ಪೂರೈಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2 ದಿನದೊಳಗೆ ರಾಜ್ಯಾದ್ಯಂತ ಪೂರೈಕೆ ಯಾಗಲಿದೆ. ಲೀಟರ್‌ ಬಾಟಲ್‌ ಸೇರಿ ಎಲ್ಲ ಬಾಟಲ್‌ಗ‌ಳಿಗೆ ದರ ಹಾಗೂ ಕಮಿಷನ್‌ ನಿಗದಿಗೊಳಿಸಿ ಎಲ್ಲ ಒಕ್ಕೂಟಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
● ಪ್ರಕಾಶಕುಮಾರ್ ಜಂಟಿ ನಿರ್ದೇಶಕರು (ವಾಣಿಜ್ಯ ವಿಭಾಗ), ಕೆಎಂಎಫ್‌

ಹನುಮಂತರಾವ ಬೈರಾಮಡಗಿ 

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.