ರಾಯಚೂರಿಗೆ ನೀರು ಪೂರೈಸಲು ಅಡಚಣೆ

Team Udayavani, Oct 19, 2021, 1:16 PM IST

16

ರಾಯಚೂರು: ಶಕ್ತಿನಗರ ಸಮೀಪದ ಕೃಷ್ಣಾ ನದಿ ಬಳಿಯಿರುವ ಕುಡಿವ ನೀರು ಸರಬರಾಜು ಮಾಡುವ ಜಾಕ್‌ವೆಲ್‌ ಪಂಪ್‌ಹೌಸ್‌ನಲ್ಲಿ ಮೋಟರ್‌ ಕೆಟ್ಟು ಹೋಗಿದ್ದು, ದುರಸ್ತಿಗೆ ನಾಲ್ಕು ದಿನ ಹಿಡಿಯುವ ಕಾರಣ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಗರ ಶಾಸಕ ಡಾ|ಶಿವರಾಜ್‌ ಪಾಟೀಲ್‌ ಸೋಮವಾರ ಬೆಳಗ್ಗೆ ನಗರಸಭೆ ಅಧಿಕಾರಿಗಳೊಂದಿಗೆ ಜಾಕ್‌ವೆಲ್‌ ಪಂಪ್‌ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ದುರಸ್ತಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಳಿಕ ಮಾತನಾಡಿದ ಅವರು, ನಗರಕ್ಕೆ ನೀರು ಪೂರೈಸುವ ಮುಖ್ಯ ಪಂಪ್‌ಹೌಸ್‌ನಲ್ಲಿ ಮೋಟರ್‌ ಸುಟ್ಟು ಹೋಗಿದೆ. ದುರಸ್ತಿ ಮಾಡಲು ಮೂರು ನಾಲ್ಕು ದಿನಗಳು ಹಿಡಿಯಬಹುದು. ಇದರಿಂದ ನಗರಕ್ಕೆ ನೀರು ಪೂರೈಸಲು ಅಡಚಣೆ ಆಗಲಿದೆ ಎಂದು ತಿಳಿಸಿದರು.

ಕೂಡಲೇ ದುರಸ್ತಿಗೆ ಮುಂದಾಗುವಂತೆ ನಗರಸಭೆ ಪೌರಾಯುಕ್ತರು, ಎಇಇ ಅವರಿಗೆ ತಿಳಿಸಲಾಗಿದೆ. ಕೇವಲ ಒಂದು ಪಂಪ್‌ಹೌಸ್‌ ಇರುವ ಕಾರಣ ಅ ಕ ಒತ್ತಡ ಹಾಕಿದರೆ ಯಂತ್ರದ ಉಷ್ಣ ಹೆಚ್ಚಾಗಿ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನ ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು. ಆದಷ್ಟು ದುರಸ್ತಿ ಮಾಡಿ ನೀರು ಸರಬರಾಜಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್, ಪೌರಾಯುಕ್ತ ಮುನಿಸ್ವಾಮಿ, ಆರ್‌ಡಿಎ ಅಧ್ಯಕ್ಷ ಯಾಪಚೆಟ್ಟಿ ಗೋಪಾಲರೆಡ್ಡಿ, ಎಇಇ ವೆಂಕಟೇಶ, ನಗರಸಭೆ ಸದಸ್ಯರಾದ ಶಶಿರಾಜ್‌, ಎನ್‌.ಕೆ.ನಾಗರಾಜ್‌, ಶ್ರೀನಿವಾಸರೆಡ್ಡಿ, ಸತೀಶ ಸೇರಿದಂತೆ ಅನೇಕರಿದ್ದರು.

ಕೊಳವೆ ಬಾವಿ ಕೊರೆಸಿದ ಶಾಸಕ

ಈಚೆಗೆ ನಡೆದ ಶಾಸಕರ ನಡೆ ಜನ ಸಂಪರ್ಕದ ಕಡೆ ಕಾರ್ಯಕ್ರಮದಲ್ಲಿ ನೀಡಿದ್ದ ಮಾತಿನಂತೆ ಡಾ|ಶಿವರಾಜ್‌ ಪಾಟೀಲ್‌ ಬೋರವೆಲ್‌ ಕೊರೆಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ನಗರದ ಎಲ್‌ಬಿಎಸ್‌ ನಗರದಲ್ಲಿ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ದೂರಿದ್ದರು. ಇದಕ್ಕೆ ಪ್ರಕ್ರಿಯಿಸಿದ್ದ ಶಾಸಕರು, ಶೀಘ್ರದಲ್ಲೇ ನೀರಿನ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಅದರಂತೆ ಸೋಮವಾರ ಬೋರ್‌ವೆಲ್‌ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ಒಮಿಕ್ರಾನ್‌ ತೀವ್ರತೆ ಕಡಿಮೆ? ಅನೇಕ ಭಾರತೀಯರಲ್ಲಿ ಪ್ರತಿಕಾಯ

ಒಮಿಕ್ರಾನ್‌ ತೀವ್ರತೆ ಕಡಿಮೆ? ಅನೇಕ ಭಾರತೀಯರಲ್ಲಿ ಪ್ರತಿಕಾಯ

ಆಕ್ಸಿಜನ್‌ ಕೊರತೆ ಸಾವು ಪಂಜಾಬ್‌ನಲ್ಲಿ ಮಾತ್ರ!

ಆಕ್ಸಿಜನ್‌ ಕೊರತೆ ಸಾವು ಪಂಜಾಬ್‌ನಲ್ಲಿ ಮಾತ್ರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16crop

ಅಕಾಲಿಕ ಮಳೆಗೆ ಶೇ.80 ತೊಗರಿ ಹಾನಿ

15fish-market

ಮೀನು ವ್ಯಾಪಾರಕ್ಕೆ ರಸ್ತೆಯೇ ಮಾರುಕಟ್ಟೆ!

14minority

ಅಲ್ಪ ಸಂಖ್ಯಾತರ ಶೋಷಣೆಗೆ ಖಂಡನೆ

13protest

ಗೋವುಗಳ ಸಮೇತ ಗ್ರಾಪಂಗೆ ರೈತರ ಮುತ್ತಿಗೆ

12protest

ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಕಲಾರಾಧಕರ ನಾಡಿನಿಂದ ಸಾಹಿತ್ಯ ಕ್ಷೇತ್ರ ಅಜರಾಮರ: ಸಚಿವ ಡಾ| ಸುಧಾಕರ್‌

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶಿರಾಡಿ ಘಾಟಿ ಸುರಂಗ ಮಾರ್ಗ: ಭೂಸ್ವಾಧೀನವಾಗದಿರುವುದೇ ಅಡ್ಡಿ

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ಒಂದೇ ದಿನಕ್ಕೆ ಜಿಗಿದ ಲೋಕಸಭೆ ಕಲಾಪ ಉತ್ಪಾದಕತೆ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

ರಾಜ್ಯಪಾಲರಿಂದ ಉಡುಪಿ ಶ್ರೀಕೃಷ್ಣ , ಮೂಕಾಂಬಿಕೆ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.