ಅನರ್ಹ ಶಾಸಕರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ: ಸಚಿವ ಸಿ.ಟಿ.ರವಿ

Team Udayavani, Nov 16, 2019, 5:38 PM IST

ಕಲಬುರಗಿ: ಅನರ್ಹ ಶಾಸಕರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವುದು ಹಾಗೂ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದು‌ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ‌ಮಾತನಾಡಿದ ಅವರು, ಈ ಹಿಂದೆ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗಿತ್ತು. ಅವರು ಗೆಲ್ಲದೆ ಇದ್ದಿದ್ದಕ್ಕೆ ನಮ್ಮ ಸರ್ಕಾರ ಬಂದಿರಲಿಲ್ಲ ಎಂದರು.‌

ಸಿದ್ದರಾಮಯ್ಯ ಕೂಡ ಜಮೀರ್ ಅಹ್ಮದ್ ಸೇರಿದಂತೆ ಅನೇಕರನ್ನು ಸೇರಿಸಿಕೊಂಡು ಜೆಡಿಎಸ್ ಒಡೆದರು. ಆವಾಗ ಅವರು ನೈತಿಕತೆ ರಾಜಕಾರಣ ಮಾಡಿದ್ರಾ? ನಾವು ಇದೀಗ ಮುಳ್ಳನ್ನು ಮುಳ್ಳಿನಿಂದ ತಗೆಯುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಸಚಿವರು ನಗರ ಮಿನಿವಿಧಾನ ಸೌಧದ ಆವರಣದಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳಿಗೆ ಕಾರುಗಳನ್ನು ವಿತರಿಸಿದರು. ಎಸ್ ಸಿಪಿ /ಟಿಎಸ್ ಪಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ 7 ಫಲಾನುಭಗಳಿಗೆ ಟ್ಯಾಕ್ಸಿ ವಿತರಿಸಿದರು.

ಪ್ರತಿ ಟ್ಯಾಕ್ಸಿ‌ 8 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು,ಪ್ರತಿ ಟ್ಯಾಕ್ಸಿ ಗೆ 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ