Udayavni Special

ಜಿಲ್ಲಾಡಳಿತ ನಿಯಂತ್ರಣದಲ್ಲಿ ಆಕ್ಸಿಜನ್‌ ಘಟಕ

Team Udayavani, Apr 30, 2021, 3:53 PM IST

ಹಹಹಹಹಜಗಹಜಕ

ಕಲಬುರಗಿ: ಜಿಲ್ಲೆಯಲ್ಲಿ ಹೊಸದೊಂದು ಖಾಸಗಿ ಆಕ್ಸಿಜನ್‌ ಉತ್ಪಾದನಾ ಘಟಕ ಆರಂಭವಾಗಿದ್ದು, ಕೊರೊನಾ ಸೋಂಕಿತರಿಗೆ ಆಕ್ಸಿಜನ್‌ ಅಭಾವ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ಆಕ್ಸಿಜನ್‌ ಉತ್ಪಾದಿಸಿ ಕೊಡಲು ಮುಂದಾಗಿದೆ. ಇದೇ ಘಟಕದಿಂದ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆಗಾಗಿ ಮುಂಬೈನಿಂದ 200 ಖಾಲಿ ಸಿಲಿಂಡರ್‌ಗಳನ್ನು ಜಿಲ್ಲಾಡಳಿತ ತರಿಸಿಕೊಳ್ಳುತ್ತಿದೆ.

ನಗರ ಹೊರವಲಯದ ನಂದೂರ (ಕೆ) ಕೈಗಾರಿಕಾ ಪ್ರದೇಶದಲ್ಲಿರುವ ಶಿವ ಇಂಡಸ್ಟ್ರೀಸ್‌ನವರು ಹೊಸ ಆಕ್ಸಿಜನ್‌ ಮತ್ತು ನೈಟ್ರೋಜನ್‌ ಉತ್ಪಾದನಾ ಘಟಕ ಪ್ರಾರಂಭಿಸಿದ್ದಾರೆ. ಆದರೆ, ಇವರಲ್ಲಿ ಆಕ್ಸಿಜನ್‌ ತುಂಬುವ ಖಾಲಿ ಸಿಲಿಂಡರ್‌ಗಳು ಲಭ್ಯ ಇಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ಆಕ್ಸಿಜನ್‌ ಉತ್ಪಾದಿಸಿ ಕೊಡುವುದಾಗಿ ಹೇಳಿದ್ದು, ಘಟಕವನ್ನು ಜಿಲ್ಲಾಡಳಿತ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಹೊಸ ಘಟಕ 400 ಸಿಲಿಂಡರ್‌ಗಳಷ್ಟು ಆಕ್ಸಿಜನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಲ್ಲಿ ಉತ್ಪಾದಿಸುವ ಆಕ್ಸಿಜನ್‌ ಜಿಲ್ಲಾಡಳಿತ ಸೂಚಿಸುವಲ್ಲಿಗೆ ಪೂರೈಕೆ ಆಗಲಿದೆ. ಆದ್ದರಿಂದ ಮುಂಬೈನಿಂದ ಈಗಾಗಲೇ 400 ಖಾಲಿ ಸಿಲಿಂಡರ್‌ ಗಳನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಎರಡೂ¾ರು ದಿನಗಳಲ್ಲಿ 200 ಸಿಲಿಂಡರ್‌ಗಳು ಜಿಲ್ಲೆಗೆ ಬರಲಿವೆ. ಉಳಿದ 200 ಖಾಲಿ ಸಿಲಿಂಡರ್‌ಗಳು ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ಯಾ “ಉದಯವಾಣಿ’ಗೆ ತಿಳಿಸಿದರು.

ಇಂಡೆಂಟ್‌ ಕಡ್ಡಾಯ: ಜಿಲ್ಲೆಯಲ್ಲಿ ಈಗಾಗಲೇ ಮೂರು ಖಾಸಗಿ ಆಕ್ಸಿಜನ್‌ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಂದ ಅನೇಕ ಕಡೆಗಳಲ್ಲಿ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತಿವೆ. ಹೀಗಾಗಿ ಇಂಡೆಂಟ್‌ ಕಡ್ಡಾಯ ಮಾಡಲಾಗಿದೆ. ಜತೆಗೆ ಇಲ್ಲಿನ ಆಕ್ಸಿಜನ್‌ ಎಲ್ಲಿಗೆ ಪೂರೈಕೆ ಆಗುತ್ತಿದೆ ಎನ್ನುವ ಕುರಿತು ಜಿಲ್ಲಾಡಳಿತ ನಿಗಾ ವಹಿಸುತ್ತಿದೆ. ಮೂರು ಘಟಕಗಳಿಂದ ಎಷ್ಟು ಸಿಲಿಂಡರ್‌ ಆಕ್ಸಿಜನ್‌ ಪೂರೈಕೆ ಆಗುತ್ತಿದೆ. ಅದು ಯಾವ ಸ್ಥಳ, ಯಾವ ಆಸ್ಪತ್ರೆಗೆ ಸರಬರಾಜು ಆಗುತ್ತಿದೆ ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇದಕ್ಕಾಗಿ ಪ್ರತಿ ಘಟಕದಲ್ಲಿ ಮೂರು ಪಾಳಿಯಲ್ಲಿ ನಮ್ಮ ಸಿಬ್ಬಂದಿ ನಿಯೋಜಿಸಲಾಗಿದೆ. ಆಯಾ ಘಟಕದಿಂದ ಹೊರ ಹೋದ ಆಕ್ಸಿಜನ್‌ ಸಿಲಿಂಡರ್‌ಗಳು ನಿಗದಿತ ಆಸ್ಪತ್ರೆಗೆ ತಲುಪಿದವೋ, ಇಲ್ಲವೋ ಎನ್ನುವ ಕುರಿತು ಖಾತ್ರಿ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ. ಇಎಸ್‌ಐನಲ್ಲಿ ಘಟಕಕ್ಕೆ ಯತ್ನ: ಇಡೀ ಜಿಲ್ಲೆಯಲ್ಲಿ ಜಿಮ್ಸ್‌ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಯಲ್ಲಿ ಮಾತ್ರವೇ ಆಕ್ಸಿಜನ್‌ ಸ್ಟೋರೆಜ್‌ ಘಟಕಗಳು ಇವೆ. ಜಿಮ್ಸ್‌ನಲ್ಲಿ 20 ಕೆಎಲ್‌ನಷ್ಟು ಮತ್ತು ಬಸವೇಶ್ವರ ಆಸ್ಪತ್ರೆಯಲ್ಲಿ 6 ಕೆಎಲ್‌ನಷ್ಟು ಆಕ್ಸಿಜನ್‌ ಸ್ಟೋರೇಜ್‌ ಆಗುತ್ತದೆ.

ಉಳಿದಂತೆ ಇಎಸ್‌ಐ ಸೇರಿ ಯಾವ ಆಸ್ಪತ್ರೆಯಲ್ಲೂ ಸ್ಟೋರೆಜ್‌ ಘಟಕಗಳಿಲ್ಲ. ಎಲ್ಲೆಡೆ ಸಿಲಿಂಡರ್‌ಗಳ ಮೂಲಕವೇ ಪೂರೈಕೆ ಮಾಡಲಾಗುತ್ತಿದೆ. ಇಎಸ್‌ಐ ಆಸ್ಪತ್ರೆಯೂ ಜಂಬೂ ಸಿಲಿಂಡರ್‌ಗಳ ಮೇಲೆ ಅವ ಲಂಬನೆ ಆಗಿದೆ. ಮೇಲಾಗಿ ಇಲ್ಲಿ 500 ಬೆಡ್‌ಗಳನ್ನು ಕೋವಿಡ್‌ಗೆ ಮೀಸಲಿಟ್ಟರೂ, ಗರಿಷ್ಠ 200 ಬೆಡ್‌ ಗಳಿಗೆ ಮಾತ್ರ ಆಕ್ಸಿಜನ್‌ ವ್ಯವಸ್ಥೆ ಆಗುತ್ತದೆ. ಆದರೂ, ಇಲ್ಲಿ 13ಕೆಎಲ್‌ ಆಕ್ಸಿಜನ್‌ ಸ್ಟೋರೆಜ್‌ ಸ್ಥಾಪನೆಗೆ ಯತ್ನಿಸಲಾಗುತ್ತಿದೆ. ಇದಕ್ಕೆ ಅಜೀಂ ಪ್ರೇಮ್‌ಜಿ ಫೌಂಡೇ ಷನ್‌ ಸಹಕಾರ ನೀಡಲು ಮುಂದೆ ಬಂದಿದೆ ಎಂದು ಜಿಲ್ಲಾಧಿಕಾರಿ ಜ್ಯೋತ್ಸಾ ° ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

auto

ವಾಹನ ತಪಾಸಣೆ ವೇಳೆ ಕಾನ್ಸ್‌ಟೇಬಲ್‌ ಸಮೇತ ಆಟೋ ಚಾಲಕ ಎಸ್ಕೇಪ್‌

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಕೋವಿಡ್ ಪಾಸಿಟಿವ್

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಕೋವಿಡ್ ಪಾಸಿಟಿವ್

ದಕ್ಷಿಣ ಕನ್ನಡದಲ್ಲಿ ಸಾವಿನ ಸಂಖ್ಯೆ ಮತ್ತೆ ಏರಿಕೆ, ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆ

ದಕ್ಷಿಣ ಕನ್ನಡದಲ್ಲಿ ಸಾವಿನ ಸಂಖ್ಯೆ ಮತ್ತೆ ಏರಿಕೆ, ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-8

ಕಾಂಗ್ರೆಸ್‌ನಿಂದ ಉಚಿತ ಆಂಬ್ಯುಲೆನ್ಸ್‌ ಸೇವೆ

9-7

ಜಿಲ್ಲೆಗೆ 250 ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಮಂಜೂರು

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕಲಬುರಗಿ ಜಿಲ್ಲೆಗೆ ಬೋಯಿಂಗ್ ಇಂಡಿಯಾ ಸಂಸ್ಥೆಯ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಮಂಜೂರು

ಬೋಯಿಂಗ್ ಇಂಡಿಯಾ ಸಂಸ್ಥೆಯಿಂದ ಕಲಬುರಗಿಯಲ್ಲಿ 250 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ನಿರ್ಮಾಣ

ಹಳ್ಳಿ-ತಾಂಡಾಗಳಿಗೆ ಮುಂಬೈ ವಲಸಿಗರ ದಂಡು

ಹಳ್ಳಿ-ತಾಂಡಾಗಳಿಗೆ ಮುಂಬೈ ವಲಸಿಗರ ದಂಡು

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

10-19

ಕೊರೊನಾ ಕಡಿವಾಣಕ್ಕೆ ಇಂದಿನಿಂದ ಕಠಿಣ ಕರ್ಫ್ಯೂ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.