ಶೇ.70.13 ಮತದಾನ: ಪಾಂಡ

Team Udayavani, Jun 9, 2018, 10:10 AM IST

ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಒಟ್ಟು ಶೇ. 70.13 ರಷ್ಟು ಮತದಾನವಾಗಿದೆ ಎಂದು ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಪಂಕಜಕುಮಾರ ಪಾಂಡೆ ತಿಳಿಸಿದ್ದಾರೆ.

ಬೀದರ ಜಿಲ್ಲೆಯಲ್ಲಿ ಶೇ. 67.50, ಕಲಬುರಗಿ ಶೇ. 57.64, ರಾಯಚೂರು ಶೇ. 67.19, ಯಾದಗಿರಿ ಶೇ. 72.46, ಕೊಪ್ಪಳ ಶೇ. 74.77, ಬಳ್ಳಾರಿ ಶೇ. 73.76 ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಶೇ. 77.56 ರಷ್ಟು ಮತದಾನ ದಾಖಲಾಗಿದೆ.

ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಪದವೀಧರರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ ನಗರದಲ್ಲಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಪರಿಶೀಲಿಸಿದರು.

ಬೀದರ: ಈಶಾನ್ಯ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ಶುಕ್ರವಾರ ನಡೆದಿದ್ದು, ಜಿಲ್ಲೆಯಲ್ಲಿ ಶೇ.67.50ರಷ್ಟು ಮತದಾನ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 23 ಮತಗಟ್ಟೆಗಳಿದ್ದು, 11,414 ಮತದಾರರು ಇದ್ದಾರೆ. ಈ ಪೈಕಿ 7,706 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 5,771 ಪುರುಷ ಹಾಗೂ 1,935 ಮಹಿಳಾ ಪದವೀಧರರು ಮತದಾನ ಮಾಡಿದ್ದಾರೆ. 

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನ ನಿಧಾನ ಗತಿಯಲ್ಲಿ ಸಾಗಿ ಮಧ್ಯಾಹ್ನದ 3 ಗಂಟೆ ಹೊತ್ತಿಗೆ ಶೇ.51.80 ಆಗಿತ್ತು. ಸಂಜೆ 5 ಗಂಟೆ ವರೆಗೂ ಶೇ. 67.50ರಷ್ಟು ಮತದಾನ ಆಗಿದೆ. ಈ ಪೈಕಿ ದಾಬಕಾ ಮತಗಟ್ಟೆ ಸಂಖ್ಯೆ 21ರಲ್ಲಿ ಶೇ. 91.67 ಅತಿ ಹೆಚ್ಚು ಮತದಾನ ಆಗಿದ್ದು, ಬೀದರ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 43ರಲ್ಲಿ ಶೇ.58.82ರಷ್ಟು ಮತದಾನ ನಡೆದಿದೆ.

ಔರಾದ ತಾಲೂಕಿನ 7 ಮತಗಟ್ಟೆಗಳಲ್ಲಿ ಶೇ. 81.14ರಷ್ಟು ಮತದಾನವಾಗಿದ್ದು, 753 ಜನರು ಮತ ಚಲಾಯಿಸಿದ್ದಾರೆ. ಭಾಲ್ಕಿ ತಾಲೂಕಿನ ಒಟ್ಟು 4 ಮತಗಟ್ಟೆಗಳಲ್ಲಿ ಶೇ. 72.31ರಷ್ಟು ಮತದಾನವಾಗಿದ್ದು, 906 ಜನರು ಹಕ್ಕು ಚಲಾಯಿಸಿದ್ದಾರೆ.

ಬಸವಕಲ್ಯಾಣ ತಾಲೂಕಿನ ಒಟ್ಟು 4 ಮತಗಟ್ಟೆಗಳಲ್ಲಿ ಶೇ.70.89ರಷ್ಟು ಮತದಾನ ನಡೆದಿದ್ದು, 1381 ಪದವೀಧರರು ಹಕ್ಕು ಚಲಾಯಿಸಿದ್ದಾರೆ. ಹುಮನಾಬಾದ ತಾಲೂಕಿನ 4 ಮತಗಟ್ಟೆಗಳಲ್ಲಿ ಶೇ. 67.62ರಷ್ಟು ಮತದಾನ ನಡೆದಿದ್ದು, 2,308 ಪದವೀಧರರು ಹಕ್ಕು ಚಲಾಯಿಸಿದ್ದಾರೆ. ಬೀದರನ ಒಟ್ಟು 5 ಮತಗಟ್ಟೆಗಳಲ್ಲಿ ಶೇ. 60.87ರಷ್ಟು ಮತದಾನವಾಗಿದ್ದು, 2,358 ಪದವೀಧರರು ಮತದಾನ ಹಕ್ಕು ಚಲಾಯಿಸಿದ್ದಾರೆ.

ಯಾದಗಿರಿ: ಈಶಾನ್ಯ ಪದವೀಧರರ ಚುನಾವಣೆಗೆ ಜಿಲ್ಲೆಯಲ್ಲಿ ಶೇ. 72.46 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 5,159 ಮತದಾರರಿದ್ದು, 13 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಮತದಾನಕ್ಕೆ ನಿರುತ್ಸಾಹ ವ್ಯಕ್ತವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ವಾತಾರಣ ತಿಳಿಗೊಂಡಿದ್ದರಿಂದ ಪದವೀಧರರು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ