ಮನು ಸಾಮ್ರಾಜ್ಯ ಸ್ಥಾಪನೆಗೆ ಸಂಚು

Team Udayavani, Jan 27, 2018, 10:39 AM IST

ಆಳಂದ: ಎಲ್ಲರಿಗೂ ಏಕರೂಪದ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಗಣರಾಜ್ಯ ಕೊಟ್ಟಿರುವ ದೇಶದ ಸಂವಿಧಾನದ ತಿದ್ದುಪಡಿ ಕುರಿತು ಹೇಳಿಕೆ ನೀಡುತ್ತಿರುವ ಮನುವಾದಿಗಳು ಮತ್ತೆ ತಮ್ಮ ಮನು ಸಾಮ್ರಾಜ್ಯ ಸ್ಥಾಪಿಸಿ ಭಯೋತ್ಪಾದನೆ ಮೂಲಕ ದೇಶ ಒಡೆಯುವ ಸಂಚುರೂಪಿಸಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಉಪಸಭಾಪತಿ, ಶಾಸಕ
ಬಿ.ಆರ್‌. ಪಾಟೀಲ ಹೇಳಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಶುಕ್ರವಾರ ತಾಲೂಕು ಆಡಳಿತ 69ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಸಂವಿಧಾನ ರಕ್ಷಣೆ ಜವಾಬ್ದಾರಿ ಎಲ್ಲ ಭಾರತೀಯರ ಮೇಲಿದೆ. ವಿವಿಧತೆಯಲ್ಲಿ ಏಕತೆ ಮೆರೆದ ದೇಶದಲ್ಲಿ ಎಲ್ಲರೂ ಜಾತಿ, ಧರ್ಮ ಮರೆತು ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು. ದೇಶದ ಎಲ್ಲರಂಗದಲ್ಲೂ ಅಭಿವೃದ್ಧಿಗೆ ಗಮನ ಕೊಡಬೇಕು. ಸಂವಿಧಾನ ತಿದ್ದುಪಡಿ ಹೇಳಿಕೆ ಭಯೋತ್ಪಾದನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ, ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಬಾಬುರಾವ್‌ ಸರಡಗಿ ಸಂವಿಧಾನ ಕುರಿತು ಉಪನ್ಯಾಸ ನೀಡಿದರು.

ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರ ಅಲಿ ಹಲ್ದಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ವೈಹೀದ್‌ ಜರ್ದಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಡಿವೈಎಸ್‌ಪಿ ಪಿ.ಕೆ.ಚೌಧರಿ, ಗ್ರೇಡ್‌- ತಹಶೀಲ್ದಾರ್‌ ಬಿ.ಜಿ. ಕುದರಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಭರತರಾಜ ಸಾವಳಗಿ, ಗ್ರಾಮೀಣ ನೀರುರಬರಾಜು ಇಲಾಖೆ ಎಇಇ ಅಬ್ದುಲ ಸಲಾಂ, ಕೈಗಾರಿಕೆ ಅಧಿಕಾರಿ ಜಾಫರ್‌ ಅನ್ಸಾರಿ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಮೇಶ ಮಾಡಿಯಾಳ, ಪಿಎಸ್‌ಐ ಸುರೇಶ ಬಾಬು ಹಾಜರಿದ್ದರು.

ಸಿಪಿಐ ಹಣಮಂತ ಸಣ್ಣಮನಿ, ಪಟ್ಟಣದ ನರೇಂದ್ರ ಬುಲಬುಲೆ ಗೀತೆ ಹಾಡಿದರು. ಬಸವರಾಜ ದೊಡ್ಡಮನಿ ನಿರೂಪಿಸಿದರು. ನಂತರ ವಿವಿಧ ಶಾಲೆ ಮಕ್ಕಳಿಂದ ಬಿಆರ್‌ಪಿ ಶರಣಪ್ಪ ಮುನಗುಳಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ