10 ರೂ. ಡಾಕ್ಟರ್‌ ಖ್ಯಾತಿಯ ಮಲ್ಹಾರ್‌ ರಾವ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ


Team Udayavani, Jul 25, 2022, 9:47 AM IST

1docter

ಕಲಬುರಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಡಾ|ಮಲ್ಹಾರ್‌ ರಾವ್‌ ಮಲ್ಲೆ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಭಾರತ ಕೋವಿಡ್‌ ವಿರುದ್ಧ ನಡೆಸಿದ 200 ಕೋಟಿ ಲಸಿಕೆ ಅಭಿಯಾನದಲ್ಲಿ ತಾವು ಕ್ರಮಿಸಿರುವ ದೂರ ಮತ್ತು ಹಾಕಿರುವ ಲಸಿಕೆ ಮುಂದಿನ ಪೀಳಿಗೆ ಭವಿಷ್ಯದೊಂದಿಗೆ ಬಲಿಷ್ಠ ಭಾರತ ಕಟ್ಟುವಲ್ಲಿ ಸಹಕಾರಿ ಎಂದು ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜು.17ರಂದು ದೇಶದ 200 ಕೋಟಿ ಜನರಿಗೆ ಕೋವಿಡ್‌-19 ನಿರೋಧಕ ಲಸಿಕೆ ಹಾಕುವಲ್ಲಿ ಭಾರತ ಮೈಲುಗಲ್ಲು ಸ್ಥಾಪಿಸಿತ್ತು. ಆ ಆಚರಣೆ ಅಂಗವಾಗಿ ದೇಶದ ಹಲವಾರು ವೈದ್ಯರನ್ನು ಸೇರಿದಂತೆ ಎಲ್ಲ ವರ್ಗದ ಸೇವಕರನ್ನು ಪ್ರಧಾನಿ ಪ್ರಶಂಸಿಸಿದ್ದರು. ಅವರ ಸೇವೆಯನ್ನು ಸ್ಮರಿಸಿ ಪತ್ರವನ್ನು ಬರೆದಿದ್ದರು. ಅಲ್ಲದೆ, ಆಭಾರ ಮನ್ನಣೆ ಸಲ್ಲಿಸಿದ್ದರು. ಅದರೊಂದಿಗೆ ಸೇವೆ ಮಾಡಿದ ವ್ಯಕ್ತಿಯ ಕುಟುಂಬ ಸದಸ್ಯರನ್ನು ಸ್ಮರಿಸಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಅಂತಹದೊಂದು ಪತ್ರ ಕಲಬುರಗಿ ವಲಯದಲ್ಲಿ ಈಗ ಭಾರೀ ಸದ್ದು ಮಾಡುತ್ತಿದೆ.

ಯಾರು ಡಾ| ಮಲ್ಹೇರಾವ್‌?: ಡಾ|ಮಲ್ಹಾರ್‌ ರಾವ್‌ ಮಲ್ಲೇ ಮೂಲತಃ ಜೇವರ್ಗಿ ತಾಲೂಕಿನ ಮಲ್ಲೆ ಊರಿನವರು. ಜಮೀನುದಾರಿಕೆ ಕುಟುಂಬ. ಗ್ರಾಮೀಣ ಪ್ರದೇಶದವರಾದ್ದರಿಂದ ಸದಾ ಜನರಿಗಾಗಿ ಮಿಡಿಯುವ ವ್ಯಕ್ತಿ. ಅಪ್ಪ ದಿ| ಕಿಶನ್‌ರಾವ್‌ ಮಲ್ಲೆ ರೋಲ್‌ಮಾಡೆಲ್‌. ವಕೀಲರು ಅಲ್ಲದೆ, ಸಂಗೀತಗಾರರು. ಆದರೆ, ಮಲ್ಹಾರ್‌ರಾವ್‌ ಅವರ ಆಸಕ್ತಿಯಂತೆ ವೈದ್ಯಕೀಯ (ಎಂಬಿಬಿಎಸ್‌ -1974) ಪಾಸ್‌ ಆದ ಬಳಿಕ 1984ರಲ್ಲಿ ಕಾನೂನು ಪದವಿ ಪಡೆದು ಅಪ್ಪನ ವೃತ್ತಿ ಮುಂದುರಿಸಬೇಕು ಎಂದು ಕೊಂಡಿದ್ದಾಗಲೇ, “ಅಪ್ಪ ಬೈದು.. ನೀನು ಡಾಕ್ಟರಕಿ ಓದಿದಿ.. ಅದನ್ನೇ ಮುಂದುವರಿಸು ಎಂದ್ರು.. ಆಗ ದವಾಖಾನಿ ತೆರೆಯಲು ರೊಕ್ಕಾ ಕೊಡ್ರಿ ಅಂದ್ರ.. ರೊಕ್ಕ ಇಲ್ಲ.. ನೀನೇ ಶುರು ಮಾಡು ಅಂದಿದ್ದರು. 80 ರೂ.ನಲ್ಲಿ ದವಾಖಾನೆ ತೆರೆದು ಕಳೆದ 47 ವರ್ಷಗಳಿಂದ ವಿವಿಧ ರೋಗಗಳಿಗೆ ಕೇವಲ 10 ರೂ. ತಪಾಸಣೆ ಶುಲ್ಕದಲ್ಲಿ ಚಿಕಿತ್ಸೆ ನೀಡುತ್ತಾ ಇದ್ದೇನೆ’ ಎನ್ನುತ್ತಾರೆ ಡಾ| ಮಲ್ಹಾರ್‌ ರಾವ್‌ ಮಲ್ಲೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನನಗೆ ಪತ್ರ ಬರೆದು ಪ್ರಶಂಸೆ ಮಾಡಿದ್ದಕ್ಕೆ ಭಾಳ್‌ ಖುಷಿಯಾಗಿದೆ. ಆದರೆ, ನಾನು ಕೋವಿಡ್‌ನ‌ಲ್ಲಿ ಕೆಲಸ ಮಾಡಿದ್ದನ್ನು ಯಾರು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಸೇವೆ ಮಾಡುವುದನ್ನು ಮಾತ್ರ ಮಾಡಿದ್ದೇನೆ ಎನ್ನುವ ಮಲ್ಲೇ ಅವರ ಔದಾರ್ಯ ಮತ್ತು ಮಾನವೀಯ ಕಕ್ಕುಲಾತಿ ದೊಡ್ಡದು.

ಇದನ್ನೂ ಓದಿ: ಸೇನೆ ಸೇರುವ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕರು

10 ರೂ. ಡಾಕ್ಟರ್ಆಗಿದ್ದು ಹೇಗೆ?

ಮಲ್ಹಾರ್‌ ರಾವ್‌ ಅವರ ಪತ್ನಿ ಲತಾ ಮನೆ ಯಜಮಾನತಿ. “ಎಂದಿಗೂ 10 ರೂ.ನಲ್ಲೇ ಏಕೆ ಚಿಕಿತ್ಸೆ ಕೊಡ್ತಿರಿ’ ಎಂದು ಪ್ರಶ್ನೆ ಮಾಡದೆಯೇ ಅನುಸರಿಸಿಕೊಂಡು ಬಂದವರು. ಮೂವರು ಪುತ್ರಿಯರು, ಓರ್ವ ಪುತ್ರ ಇರುವ ತುಂಬಿದ ಸಂಸಾರ. ಸಣ್ಣ ಮಗಳು ಡಾಕ್ಟರ್‌ ಮತ್ತು ಮೊಮ್ಮಗಳು ಕೂಡ ಡೆಂಟಿಸ್ಟ್‌. ಪುತ್ರ ಆರ್ಕಿಟೆಕ್ಟ್ ಎಲ್ಲವೂ ಶೈಕ್ಷಣಿಕವಾಗಿ ಉನ್ನತ ಸ್ಥಾಯಿಗೇರಿದ ಕುಟುಂಬ. ಡಾ| ಮಲ್ಹಾರ್‌ ರಾವ್‌ ಮಲ್ಲೇ 47 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ರೋಗಿಗಳನ್ನು ಉಪಚರಿಸಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಿದ್ದಾರೆ. 1975ರಿಂದ ವೃತ್ತಿ ಶುರು ಮಾಡಿದ್ದಾಗ ಶುಲ್ಕವೇ ಪಡೆಯುತ್ತಿರಲಿಲ್ಲ. ಉಚಿತವಾಗಿ ತಪಾಸಣೆ ಮಾಡುತ್ತಿದ್ದರು. ಬಳಿಕ 2000ರಲ್ಲಿ ಪ್ರೈವೇಟ್‌ ಮೆಡಿಕಲ್‌ ಪ್ರ್ಯಾಕ್ಟೀಸ್‌ ಆ್ಯಕ್ಟ್ ಅಡಿ ಶುಲ್ಕದ ಮಾಹಿತಿ ಕೇಳಿದಾಗ 10 ರೂ. ಅಂತ ಬರೆಯಿಸಿದ್ದರು. ಅದನ್ನೂ ಇಂದಿನವರೆಗೂ ಪಾಲಿಸುತ್ತಿದ್ದಾರೆ. ಈಗಂತೂ 10 ರೂ. ಡಾಕ್ಟರ್‌ ಅಂತಲೇ ಫೇಮಸ್‌. ನಗರದ ಜಗತ್‌ ವೃತ್ತದ ಸನಿಹದಲ್ಲೇ ಕ್ಲಿನಿಕ್‌ ಇದೆ. ಪ್ರಗತಿಪರ ವಿಚಾರದವರಾದರೂ ಜನರ ದೈವಿಭಕ್ತಿಗೆ ತಲೆಬಾಗುತ್ತಾರೆ. ಊರಲ್ಲಿ ನಾಲ್ಕು ದೇವಸ್ಥಾನಗಳನ್ನು ಕಟ್ಟಿಸಿ ಸ್ವಂತ ಊರಿನ ಜನರಿಗೆ ದೇವರ ಕೃಪೆ ದಕ್ಕುವಂತೆ ಮಾಡಿದ್ದಾರೆ.

ನಾನು ಯಾವುದನ್ನು ಮುಟ್ಟುವ ಪ್ರಯತ್ನ ಮಾಡಿಲ್ಲ. ಸುಮ್ಮನೆ ಸೇವೆ ಮಾಡುತ್ತಿದ್ದೇನೆ. 10 ರೂ. ಗಳಲ್ಲಿ ಚಿಕಿತ್ಸೆ ನೀಡುವುದು ನನಗೆ ಕೀಳನ್ನಿಸಿಲ್ಲ. ಹಣದ ಜರೂರತ್ತಿಗಿಂತ ಸೇವೆ ಮಾಡಬೇಕನ್ನಿಸಿತು. ಅದಲ್ಲದೆ, ಎಷ್ಟು ದಿನ ಭೂಮಿಯಲ್ಲಿರುತ್ತೇವೆ. ಹೋಗುವಾಗ ಎಲ್ಲವೂ ಬಿಟ್ಟೇ ಹೋಗಬೇಕಲ್ಲ. ಅದಕ್ಕಾಗಿ ಹಣದ ಹಿಂದೆ ಓಡಿಲ್ಲ. ಅಪ್ಪ ಕಿಶನರಾವ್‌ ನನ್ನ ಆದರ್ಶ ಮತ್ತು ಮಾರ್ಗದರ್ಶಕರು. ಅವರು ವಕೀಲರಾದರೂ ಹಣದ ಹಿಂದೆ ಓಡಿಲ್ಲ. ಜಮೀನುದಾರಿಕೆ ಕುಟುಂಬವಾದ್ದರಿಂದ ರೊಕ್ಕ ನನ್ನ ಮೊದಲ ಆದ್ಯತೆ ಆಗಿಲ್ಲ. –ಡಾ| ಮಲ್ಹಾರ್ರಾವ್ಮಲ್ಲೇ ವೈದ್ಯರು

-ಸೂರ್ಯಕಾಂತ್ಎಂ.ಜಮಾದಾರ್

ಟಾಪ್ ನ್ಯೂಸ್

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

police

ಪ್ರಿಯಾಂಕ್ ಖರ್ಗೆ ಪರಮಾಪ್ತ ರಾಜು ಕಪನೂರ್ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

ಪ್ರಿಯಾಂಕ್ ಖರ್ಗೆ ಪರಮಾಪ್ತ ರಾಜು ಕಪನೂರ್ ಬಂಧನ

1-adsasd

ಒಬಿಸಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸೇರಲು ರಾಜ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ: ಖಂಡ್ರೆ

ಜೆಡಿಎಸ್ ಹಣದಿಂದ ರಾಜಕೀಯ ಮಾಡ್ತಿಲ್ಲ, ಹಣಕ್ಕಿಂತ ಜನ ಮುಖ್ಯ: ದೇವೇಗೌಡ

ಜೆಡಿಎಸ್ ಹಣದಿಂದ ರಾಜಕೀಯ ಮಾಡ್ತಿಲ್ಲ, ಹಣಕ್ಕಿಂತ ಜನ ಮುಖ್ಯ: ದೇವೇಗೌಡ

20

ಬಡ ಮಕ್ಕಳ ಶಿಕ್ಷಣದ ಹಕ್ಕು ಕಸಿದ ಕೇಂದ್ರ ಸರಕಾರ: ಸುರ್ಜೆವಾಲಾ ಆರೋಪ

16

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.