ಸಂಚಾರಿ ವ್ಯವಸ್ಥೆಗೆ ಚುರುಕು ನೀಡಿದ ಪೊಲೀಸರು


Team Udayavani, Nov 28, 2017, 10:27 AM IST

gul-2.jpg

ಕಲಬುರಗಿ: ಕಳೆದ ಮೂರು ದಿನಗಳಿಂದ ಸುಗಮ ಸಂಚಾರಕ್ಕಾಗಿ ಜಾರಿಗೆ ತಂದಿರುವ ಹೆಲ್ಮೆಟ್‌ ಕಡ್ಡಾಯ, ಅಗತ್ಯ ದಾಖಲೆ ಪತ್ರಗಳು ಮತ್ತು ಕಾರಿನಲ್ಲಿ ಸೀಟ್‌ ಬೆಲ್ಟ್ ಹಾಕಿಕೊಳ್ಳುವುದು, ಆಟೋ ಚಾಲಕರು ಸಮವಸ್ತ್ರ ಧರಿಸುವುದನ್ನು ಜಾರಿಗೆ ತರಲು ಖುದ್ದು ಐಜಿಪಿ ಅಲೋಕಕುಮಾರ ರಸ್ತೆಗಳಲ್ಲಿ ನಿಲ್ಲುತ್ತಿದ್ದಾರೆ.

ಈ ಹಿಂದೆ ಮೂರ್‍ನಾಲ್ಕು ಬಾರಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದಾಗ ಜನರಲ್ಲಿ ಅಷ್ಟು ಎಚ್ಚರಿಕೆ ಮೂಡಿರಲಿಲ್ಲ. ಆದರೆ ಕಳೆದ ಮೂರು ದಿನಗಳಲ್ಲಿ 2 ಲಕ್ಷದಷ್ಟು ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ. ಕಾರು ಚಾಲಕರಿಗೆ ಸೀಟ್‌ ಬೆಲ್ಟ್ ಕಡ್ಡಾಯ ಮತ್ತು ಕಾರುಗಳಿಗಿರುವ ಕೋಲಿಂಗ್‌ ಪೇಪರ್‌(ಕಪ್ಪು) ತೆಗೆಸುವುದನ್ನು ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಅತಿ ಹೆಚ್ಚು ಸಂಚಾರ ಹೊಂದಿರುವ ರಸ್ತೆಗಳಲ್ಲಿ ಐಜಿಪಿ ಅಲೋಕುಮಾರ ಖುದ್ದು ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದಾಗಿ ಜನರಿಗೆ ಹೆಲ್ಮೆಟ್‌ ಹಾಕಿಕೊಳ್ಳಲೇಬೇಕಾದ ಅನಿವಾರ್ಯ ಎದುರಾಗಿದೆ.

ಐಜಿಪಿ ಸಾಮೋಪಾಯ: ಆರಂಭದ ದಿನದಂದು ಸ್ವತಃ ಐಜಿಪಿ ಅಲೋಕಕುಮಾರ ಅವರ ನೇತೃತ್ವದ ಪೊಲೀಸ್‌ ಪಡೆ ಸಾಮೋಪಾಯದಿಂದಲೇ ಸಂಚಾರಿ ನಿಯಮ ಪಾಲಿಸಲು ಕೋರಿದ್ದರು. ಮರುದಿನ ಆ ಕೋರಿಕೆಯನ್ನು ಮನ್ನಿಸಿದವರಿಗೆ ಪೊಲೀಸರು ಗುಲಾಬಿ ಹೂ ನೀಡಿ ಅಭಿನಂದಿಸಿದರು. ಕೋರಿಕೆ ತಿರಸ್ಕರಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಕಟ್ಟಿದರು. ಹೀಗಾಗಿ ಹೆಚ್ಚಿನ ಸಂಖ್ಯೆಯ ಸವಾರರು ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಆರಂಭಿಸಿದರು.

ಪೊಲೀಸರ ಕಾರ್ಯಾಚರಣೆ ಕೇವಲ ಆರಂಭ ಶೂರತನ ಎಂದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿತ್ತು. ಆದಾಗ್ಯೂ, ಸೋಮವಾರ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಅವರು ಇನ್ನೊಂದು ದಿಟ್ಟ ಹೆಜ್ಜೆ ಇಟ್ಟರು. ವಾಹನಗಳ ಸಂಚಾರದ ಪ್ರಮುಖ ಸ್ಥಳವಾದ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದ ನ್ಯಾಯಾಲಯದ ಮಾರ್ಗದ ಕಡೆಗೆ ಹೋಗುವ ಸ್ಥಳದಲ್ಲಿ ಅಪಘಾತದಿಂದ ಆಗುವ ಭೀಕರ ಸಾವು, ನೋವುಗಳ ಕುರಿತಾದ ಛಾಯಾಚಿತ್ರಗಳ ಬೃಹತ್‌
ಗಾತ್ರದ ಕಟೌಟ್‌ ಪ್ರದರ್ಶನ ಉದ್ಘಾಟಿಸಿದರು. ಆ ಬ್ಯಾನರ್‌ ನೋಡಿದವರಿಗೆ ಹೆಲ್ಮೆಟ್‌ ಹಾಕಿಕೊಳ್ಳದೇ ಹೋದಲ್ಲಿ, ಕಾರಿನಲ್ಲಿ ಸೀಟ್‌ ಬೆಲ್ಟ್ ಹಾಕಿಕೊಳ್ಳದೇ ಹೋದಲ್ಲಿ ಸಾವು ಖಚಿತ ಎಂಬ ತಿಳಿವಳಿಕೆ ಮೂಡಿಸುವ ರೀತಿಯಲ್ಲಿ ಅನೇಕ ಅಪಘಾತದ ಛಾಯಾಚಿತ್ರಗಳು ವಾಹನ ಸವಾರರಿಗೆ ಗಮನಸೆಳೆದು ಪರಿಣಾಮ ಬೀರಲಾರಂಭಿಸಿವೆ. ಇಲ್ಲಿಯವರೆಗೆ ಆ ಸ್ಥಳದಲ್ಲಿ ಅನಾವಶ್ಯಕ ಜಾಹೀರಾತು ಫಲಕ ಅಳವಡಿಸಲಾಗುತ್ತಿತ್ತು. ಈಗ ಅಪಘಾತ ನಿಯಂತ್ರಣದ ಛಾಯಾಚಿತ್ರಗಳ ಕಟೌಟ್‌ ಹಾಕಿರುವುದು ಪೊಲೀಸ್‌ ಇಲಾಖೆಯಿಂದ ಒಂದು ಒಳ್ಳೆಯ ಕೆಲಸವಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿ ಅಲೋಕಕುಮಾರ ಅವರು ಅದೇ ಸಂದರ್ಭದಲ್ಲಿ ವೃತ್ತದಲ್ಲಿ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲು ಸೂಚಿಸಿದರು. ಅದರಂತೆ ಪೊಲೀಸರು ನಿಯಮ ಬಾಹಿರವಾಗಿ ಸಂಚರಿಸುವವರಿಗೆ ದಂಡ ಕಟ್ಟಿದರು. ಇದರೊಂದಿಗೆ ಐಜಿಪಿ ಮಟ್ಟದ ಅಧಿಕಾರಿ ಖುದ್ದಾಗಿ ಸಂಚಾರಿ ವ್ಯವಸ್ಥೆ ನಿಭಾಯಿಸುತ್ತಿರುವುದು ಸಾರ್ವಜನಿಕರಿಗೆ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೆ, ಅವರ ನಡೆ ಪ್ರಶಂಸೆಗೆ ಒಳಗಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದ ವಾರದಲ್ಲಿ ಎಲ್ಲರೂ ಹೆಲ್ಮೆಟ್‌ ಧರಿಸಿ ಓಡಾಡುವುದರಲ್ಲಿ ಅನುಮಾನವೇ ಇಲ್ಲ. ಆದರೂ, ಬೇಸಿಗೆ ದಿನಗಳಲ್ಲಿ ಮಾತ್ರ ಹೆಲ್ಮೆಟ್‌ನಿಂದ ವಿನಾಯತಿ ನೀಡಬೇಕು ಎನ್ನುವ ಬೇಡಿಕೆಯಂತೂ ಇದ್ದೇ ಇದೆ

8 ಸಾವಿರ ಪ್ರಕರಣ ದಾಖಲು
ಕಲಬುರಗಿ ಐಜಿಪಿ ವಲಯ ವ್ಯಾಪ್ತಿಯಲ್ಲಿನ ಯಾದಗಿರಿ, ಬೀದರ ಮತ್ತು ಕಲಬುರಗಿ ಸೇರಿಂದಂತೆ ಒಟ್ಟು 8330 ಪ್ರಕರಣ ದಾಖಲಿಸಲಾಗಿದೆ. ಜನರು ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ. ಇದು ಜನರಿಗಾಗಿ ಮಾಡಿರುವ ಕಾನೂನು ಜಾರಿ. ತಮ್ಮ ಪ್ರಾಣರಕ್ಷಣೆಗಾಗಿ ಅವರು ಮಾಡೇ ಮಾಡುತ್ತಾರೆ. ಕಲಬುರಗಿಯಲ್ಲಿ 5800, ಯಾದಗಿರಿಯಲ್ಲಿ 1930 ಮತ್ತು ಬೀದರನಲ್ಲಿ 1600 ಪ್ರಕರಣಗಳು ದಾಖಲಾಗಿದೆ.
 ಅಲೋಕಕುಮಾರ, ಐಜಿಪಿ, ಕಲಬುರಗಿ ವಲಯ

„ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.