ಕಳಪೆ ನಗರೋತ್ಥಾನ; ಜನರ ಅಸಮಾಧಾನ


Team Udayavani, Mar 6, 2021, 5:36 PM IST

Untitled-1

ಶಹಾಬಾದ: ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದ ಕಾಮಗಾರಿಯಿಂದ ಸಾರ್ವಜನಿಕರು ಬೇಸತ್ತುಹೋಗಿದ್ದಾರೆ.

ನಗರೋತ್ಥಾನ ಮೂರನೇ ಹಂತದ ಯೋಜನೆಯಲ್ಲಿ 20 ಕೋಟಿ ರೂ. ಅನುದಾನದಲ್ಲಿ ರಸ್ತೆ, ಚರಂಡಿ, ಸೇತುವೆನಿರ್ಮಿಸಲು ಗುತ್ತಿಗೆದಾರರು ಕಳೆದ ಎರಡುವರ್ಷದಿಂದ ಹರಸಾಹಸ ಪಡುತ್ತಿದ್ದಾರೆ.

ಅಂಕುಡೊಂಕು ಸೇತುವೆ: ಒಂದೂವರೆ ವರ್ಷದ ಹಿಂದೆ ಅಜನಿ ಹಳ್ಳಕ್ಕೆ ನಗರೋತ್ಥಾನ ಯೋಜನೆ ಏಯಡಿ ಸುಮಾರು 2 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ಕ್ರಿಯಾಯೋಜನೆ ಪ್ರಕಾರ ಹಳೆ ಸೇತುವೆ ಬಿಳಿಸಿ, ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಿಸಬೇಕಿತ್ತು. ಆದರೆ ಹಳೆ ಸೇತುವೆಯನ್ನು ಬೀಳಿಸದೇ ಹೊಸ ಸೇತುವೆಯನ್ನು ಅಂಕು ಡೊಂಕಾಗಿ ನಿರ್ಮಿಸಲಾಗಿದೆ. ಮೇಲ್ಭಾಗದ ರಸ್ತೆ ಕಿತ್ತು ಹೋಗಿದೆ. ಕೆಲವೆಡೆ ಸೀಳಿಕೊಂಡಿದೆ. ಆದರೆ ನಗರಸಭೆ ಜೆಇ, ಎಇಇ, ಡಿಯುಡಿಸಿಯಜೆಇ, ಎಇಇ, ಮೂರನೇ, ನಾಲ್ಕನೇ ತಪಾಸಣಾ ವ್ಯಕ್ತಿಗಳು ಈ ಕುರಿತು ಗಮನ ಹರಿಸದೇ ಇರುವುದು ದುರ್ದೈವದ ಸಂಗತಿ.

ಸೇತುವೆ ಮೇಲೆ ಹೋಗಬೇಕಾದರೆ ರಸ್ತೆ ನೇರವಾಗಿಲ್ಲ. ಅಲ್ಲದೇ ಸೇತುವೆ ಮೇಲ್ಭಾಗದ ರಸ್ತೆ ಕಿತ್ತು ಹೋಗಿದೆ. ರಸ್ತೆ ಸೀಳಿಕೊಂಡು ಬೀಳುವಸ್ಥಿತಿಯಲ್ಲಿದೆ. ಈ ಕುರಿತು ಕಳೆದ ಒಂದುವರ್ಷದಿಂದ ಜನರು ದೂರು ಸಲ್ಲಿಸಿದರೂಯಾವುದೇ ಕ್ರಮ ಕೈಗೊಂಡಿಲ್ಲ.

ಕಳಪೆ ರಸ್ತೆ: ಬಸವೇಶ್ವರ ನಗರದಿಂದ ಮರಗೋಳ ಕಾಲೇಜಿನ ಡಾಂಬರೀಕರಣ ರಸ್ತೆಪೂರ್ಣಗೊಳ್ಳುವ ಮೊದಲೇ ಸಂಪೂರ್ಣಹಾಳಾಗಿತ್ತು. ರಸ್ತೆ ತುಂಬಾ ತೆಗ್ಗು ಬಿದ್ದಿವೆ.ಆದರೂ ಇದಕ್ಕೆ ಹೆಚ್ಚಿನ ಅನುದಾನದ ಅನುಮೋದನೆ ಪಡೆದು, ಮತ್ತೆ ಸಿಸಿ ರಸ್ತೆನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಈಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಹಳೆ ಚರಂಡಿಗಳನ್ನು ಕೆಡವಿ ವರ್ಷಗಳಾಗಿವೆ. ಈಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಗುತ್ತಿಗೆದಾರನೇ ಗೊತ್ತಿಲ್ಲ: ವಿಪರ್ಯಾಸದ ಸಂಗತಿಯೆಂದರೆ ನಗರೋತ್ಥಾನ ಮೂರನೇಹಂತದ ಕಾಮಗಾರಿ ಟೆಂಡರ್‌ ಪಡೆದ ಮುಖ್ಯಗುತ್ತಿಗೆದಾರ ಯಾರೆಂಬುದು ಇಲ್ಲಿಯವರೆಗೆನಗರಸಭೆ ಅಧಿ ಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಹೀಗೆಂದು ಅಧಿಕಾರಿಗಳೇ ಹೇಳುತ್ತಾರೆ. ಶಹಾಪುರ ಮೂಲದ ತಿರುಪತಿ ಎನ್ನುವ ಉಪ ಗುತ್ತಿಗೆದಾರ ಬಂದು ಹೋಗುತ್ತಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರಿಂದ ದೂರುಗಳುಬಂದಿದ್ದು, ಸಂಬಂಧಪಟ್ಟಗುತ್ತಿಗೆದಾರನಿಗೆ ಈಗಾಗಲೇನೋಟಿಸ್‌ ನೀಡಿದ್ದೇವೆ. ರಸ್ತೆ ಕಾಮಗಾರಿ ಪ್ರಾರಂಭವಾಗಿದೆ.ಮಳೆಗಾಲದಲ್ಲಿ ಹೆಚ್ಚಿನ ಪ್ರವಾಹಉಂಟಾದ ಕಾರಣ ಅಜನಿ ಹಳ್ಳದ ಸೇತುವೆ ರಸ್ತೆ ಬಿರುಕುಬಿಟ್ಟಿದೆ. ಶೀಘ್ರವೇ ಸರಿಪಡಿಸಲಾಗುವುದು. -ಡಾ| ಕೆ. ಗುರುಲಿಂಗಪ್ಪ, ಪೌರಾಯುಕ್ತ, ನಗರಸಭೆ

ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಕೆಲವು ಅಧಿಕಾರಿಗಳು ಮತ್ತು ಗುತ್ತಿಗೆದಾರರುಸೇರಿಕೊಂಡು ಕಳಪೆಕಾಮಗಾರಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ನಗರಕ್ಕೆ ಭೇಟಿ ನೀಡಿ, ಇದನ್ನು ಪರಿಶೀಲಿಸಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರ ಬಿಲ್‌ ತಡೆಹಿಡಿಯಬೇಕು.  –ಲೋಹಿತ್‌ ಕಟ್ಟಿ , ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ

ಸೇತುವೆ ಕಾಮಗಾರಿನೋಡಿದರೆ ಎಷ್ಟುಕಳಪೆಯಿದೆ ಎನ್ನುವುದುತಿಳಿಯುತ್ತದೆ.ಸಂಬಂಧಪಟ್ಟ ಜೆಇ, ಎಇಇ ಹಳೆ ಸೇತುವೆಪಕ್ಕದಲ್ಲಿ ಹೊಸ ಸೇತುವೆ ಮಾಡುವಾಗ ಏನು ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾಕೆಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಮುಖ್ಯಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. – ಕುಮಾರ ಚವ್ಹಾಣ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ನಗರಸಭೆ

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.