ಅರುಣ ಪಾಟೀಲ ಜನ್ಮದಿನಕ್ಕೆ ಸಜ್ಜು

Team Udayavani, Sep 27, 2018, 9:23 AM IST

ಕಲಬುರಗಿ: ಅಫಜಲಪುರ ತಾಲೂಕಿನ ಮಾಶ್ಯಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಅವರ 45ನೇ ಜನ್ಮ ದಿನಾಚರಣೆಗೆ ಅಫಜಲಪುರ ಪಟ್ಟಣ ಸಜ್ಜುಗೊಂಡಿದೆ.

ಪಟ್ಟಣದ ನ್ಯಾಷನಲ್‌ ಪಂಕ್ಷನ್‌ ಹಾಲ್‌ದಲ್ಲಿ ಯುವ ನಾಯಕನ ಜನ್ಮ ದಿನಾಚರಣೆಗೆ ವೇದಿಕೆ ನಿರ್ಮಿಸಲಾಗಿದ್ದು, ಹಲವಾರು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸಸಿಗಳ ವಿತರಣೆ, ತಾಲೂಕಾ ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ,
ಮಹಿಳಾ ಪೌರ ನೌಕರರಿಗೆ ಬಟ್ಟೆ ವಿತರಣೆ, ಬಡ ಮಕ್ಕಳಿಗೆ ನೋಟ್‌ ಬುಕ್‌ ವಿತರಣೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಸವಾಲು ಹಾಗೂ ಪ್ರತಿಷ್ಠೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಇತಿಹಾಸ ನಿರ್ಮಿಸುವ ಮೂಲಕ ರಾಜಕೀಯ ದೃವತಾರೆಯಾಗಿ ಹೊರ ಹೊಮ್ಮಿದ ಹಾಗೂ ತಂದೆಯವರಾಗಿರುವ ಶಾಸಕ ಎಂ.ವೈ. ಪಾಟೀಲ ಅವರ ರಾಜಕೀಯ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅರುಣಕುಮಾರ ಪಾಟೀಲ ದೂರದೃಷ್ಟಿ ಹಾಗೂ ಅಭಿವೃದ್ಧಿ ಪರ ನಾಯಕರಾಗಿದ್ದಾರೆ.

ಗುರುವಾರ ನಡೆಯುವ ಜನ್ಮ ದಿನಾಚರಣೆಯಲ್ಲಿ ಅಫಜಲಪುರ ಪಟ್ಟಣದ ವಿಶ್ವಾರಾಧ್ಯ ಮಳೇಂದ್ರ ಶಿಚಾವಾರ್ಯರು, ಬಡದಾಳದ ಚೆನ್ನಮಲ್ಲ ಶಿವಾಚಾರ್ಯರು, ಚಿನ್ಮಯಗಿರಿ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯರು, ವೀರಮಹಾಂತ ಶಿವಾಚಾರ್ಯರು ಸೇರಿದಂತೆ ನಾಡಿನ ಹಲವಾರು ಮಠಾಧೀಶರು, ರಾಜಕೀಯ ಗಣ್ಯರು, ಜನಪ್ರತಿನಿಧಿಗಳು, ಸಮಾಜ ಸೇವಕರು, ಕಾರ್ಯಕರ್ತರು, ಪಾಟೀಲ ಬಳಗದ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಜನ್ಮ ದಿನಾಚರಣೆಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 


ಈ ವಿಭಾಗದಿಂದ ಇನ್ನಷ್ಟು

  • ವಾಡಿ: ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರ ಸಂಕಟದಲ್ಲಿರುವ ಪಟ್ಟಣದ ವಿವಿಧ ಬಡಾವಣೆಗಳ ಜನರ ಅನುಕೂಲಕ್ಕಾಗಿ ಕೊಳವೆಬಾವಿ (ಬೋರ್‌ವೆಲ್)ಗಳು ಮಂಜೂರಾಗಿದ್ದು,...

  • ಕಲಬುರಗಿ: ತಾಲೂಕಿನ ಹಾಗರಗಿ ಗ್ರಾಪಂ ವ್ಯಾಪ್ತಿಯ ಆಜಾದಪೂರ ಗ್ರಾಮದಲ್ಲಿ ನಾಲ್ಕು ಕಡೆ ಪೈಪ್‌ಲೈನ್‌ ಒಡೆದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಕ್ಷಣವೇ ಪೈಪ್‌ಲೈನ್‌...

  • ಕಲಬುರಗಿ: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರನ್ನು ಕೊಂಡೊಯ್ಯುತ್ತಿರುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ...

  • ಚಿತ್ತಾಪುರ: ಸರ್ಕಾರಿ ಶಾಲಾ ಮಕ್ಕಳು ಕೂಡ ಆರಂಭದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ...

  • ವಾಡಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನವೂ ಪಾವತಿಸಲಾಗುತ್ತಿದೆ. ಲಕ್ಷಾಂತರ...

ಹೊಸ ಸೇರ್ಪಡೆ