ಪ್ರಿಯಾಂಕ್‌ಗೆ ಸೋಲಿನ ಭಯ

Team Udayavani, Dec 16, 2017, 10:47 AM IST

ವಾಡಿ: ಪಟ್ಟಣದ ಪುರಸಭೆಯ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಆತಂಕ ಉಂಟಾಗಿದೆ. ಆ ಕಾರಣಕ್ಕೆ ಒಬ್ಬ ಕ್ಯಾಬಿನೆಟ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೇವಲ ಒಂದು ವಾರ್ಡ್‌ ಉಪ ಚುನಾವಣೆಯ ಪ್ರಚಾರಕ್ಕೆ ಬಂದಿರುವುದು ಬಿಜೆಪಿಯ ಗೆಲುವಿನ ಸಂಕೇತ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ದಿವ್ಯಾ ಆರ್‌.ಹಾಗರಗಿ ಹೇಳಿದರು.

ಪಟ್ಟಣದ ಪುರಸಭೆ ವಾರ್ಡ್‌ 1ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶನ್‌ ಜಾಧವ್‌ ಪರ ಮತಯಾಚಿಸಿ ಅವರು ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಆಡಳಿತ ಮೆಚ್ಚಿಕೊಂಡಿರುವ ಜನ 2018ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ. ಪಟ್ಟಣದ ಬಸವನ ಕಣಿ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಖಚಿತವಾಗಿದ್ದು, ಕಾಂಗ್ರೆಸ್‌ ಸೋಲಿನ ರುಚಿ ಉಣ್ಣಲಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಸಿದ್ದಣ್ಣ ಕಲಶೆಟ್ಟಿ ಮಾತನಾಡಿದರು. ಅಭ್ಯರ್ಥಿ ಕಿಶನ್‌ ಜಾಧವ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಭಾಗೀರತಿ ಶಹಾಬಾದಿ, ವೀರಣ್ಣ ಯಾರಿ, ಬಸವರಾಜ ಕಿರಣಗಿ, ಯಮನಪ್ಪ ನವನಳ್ಳಿ, ಆನಂದ ಇಂಗಳಗಿ, ಭೀಮಶಾ ಜಿರೊಳ್ಳಿ, ವಿಠ್ಠಲ ನಾಯಕ, ದೌಲತರಾವ್‌ ಚಿತ್ತಾಪುರಕರ, ಭೀಮರಾಯ ನಾಯಕೋಡಿ, ರಾಜೇಶ ಅಗರವಾಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. 

ನಾಳೆ ಮತದಾನ: ಪುರಸಭೆ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಚುನಾಯಿತ ಕಾಂಗ್ರೆಸ್‌ ಸದಸ್ಯ ಮರೆಪ್ಪ ಭೋವಿ ನಿಧನವಾದ ಕಾರಣಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದ್ದು, ಶನಿವಾರ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಡಿ.17ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆ ವರೆಗೆ ಮತದಾನ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಿತ್ತಾಪುರ: ಸಚಿವ ಇರಲಿ ಅಥವಾ ಇರದೇ ಇರಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಹೀಗಾಗಿ...

  • ಕಲಬುರಗಿ: ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಬಲಿದಾನವಾಗಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಅಫಜಲಪುರ ಶಾಸಕ ಎಂ.ವೈ....

  • ವಿಜಯಕುಮಾರ ಎಸ್‌.ಕಲ್ಲಾ ಜೇವರ್ಗಿ: ಸಾಮಾನ್ಯವಾಗಿ ಮನೆ ತಾರಸಿ ಮೇಲೆ ಹೂವಿನ ಕುಂಡ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ನಾವೆಲ್ಲ ನೋಡಿದ್ದೇವೆ. ಆದರೆ ಪಟ್ಟಣದ...

  • ಮಲ್ಲಿಕಾರ್ಜುನ ಹಿರೇಮಠ ಅಫಜಲಪುರ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಭೀಮಾ ನದಿ ತುಂಬಿ ಹರಿಯುವುದರ ಜೊತೆಗೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದು, ಭೀಮಾ...

  • ಆಳಂದ: ತಾಲೂಕಿನ ಕಣಮಸ್‌ ಗ್ರಾಮದ ಸಂಪರ್ಕ ಸೇತುವೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್‌...

ಹೊಸ ಸೇರ್ಪಡೆ