ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Team Udayavani, Jul 9, 2019, 7:58 AM IST

ಕಲಬುರಗಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಲಬುರಗಿ: ಕನಿಷ್ಟ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನಿಷ್ಟ ವೇತನ ಜಾರಿಗೊಳಿಸುವುದು, ಗ್ರಂಥಾಲಯದ ಸಮಯ ಬದಲಾವಣೆ ಮಾಡುವುದು, ಮೇಲ್ವಿಚಾರಕರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಅನುಕಂಪ ಆಧಾರದ ಮೇಲೆ ಈ ಹುದ್ದೆ ಒದಗಿಸಿಕೊಡಬೇಕು. ಆತ್ಮಹತ್ಯೆಗೆ ಯತ್ನಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾ.ಪಂ.ಮೇಲ್ವಿಚಾರಕರಾದ ರೇವಣಕುಮಾರ ಕುಟುಂಬಕ್ಕೆ ಸರ್ಕಾರ ಸಹಾಯ ಧನ ನೀಡಬೇಕು ಎನ್ನುವ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶರಣಪ್ಪ ಮಾವನೂರ, ಮಲ್ಲಿಕಾರ್ಜುನ ಬಿರಾದಾರ ಸೊನ್ನ, ಶ್ರೀಮಂತ ಗೌಂಡಿ, ಮಹಿಮೂದ್‌ ಖಾನ ಇಜೇರಿ, ಶಿವಶರಣಪ್ಪ ಕಾಳಗಿ, ಮಸ್ತಾನಪ್ಪ ಕಟ್ಟಿ ರಟಕಲ್, ಮಲ್ಕಪ್ಪ ಕಂದಗೋಳ, ಶಿವಕುಮಾರ ದಂಡೋತಿ, ಶರಣು ಪಟ್ಟಣ, ಹುಸೇನ ಪಟೇಲ್ ಯಾಳವಾರ, ಬಸವರಾಜ ಗುಬ್ಬನ್‌, ಸಂಗಣ್ಣ ದೊಡ್ಮನಿ ಗೂಡೂರ ಎಸ್‌.ಎ. ಹಾಗೂ ನೂರಾರು ಗ್ರಾ.ಪಂ.ಮೇಲ್ವಿಚಾರಕರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ