ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

Team Udayavani, Apr 17, 2019, 4:13 PM IST

ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ವಿಪರಿತವಾಗುತ್ತಿದ್ದು, ಜನ-ಜಾನುವಾರುಗಳು ಪರದಾಡುತ್ತಿದ್ದು ಈ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಚಿಂಚೋಳಿ ತಾಲೂಕಿನ ಸುಂಠಾಣ, ಸುಂಠಾಣ ತಾಂಡಾದಲ್ಲಿ ಪೈಪ್‌ಲೈನ್‌ ಮಾಡಿಸಬೇಕು. ರುಮ್ಮುನಗೂಡ ತಾಂಡಾದಲ್ಲಿನ ಹಳೆ ಬಾವಿಗಳ
ಹೂಳೆತ್ತಬೇಕು. ಸಾಸರಗಾಂವ, ರುಮ್ಮನಗುಡ ಗ್ರಾಮದಲ್ಲಿ ಹೊಸ ಬೋರ್‌ವೆಲ್‌ ಹಾಕಿಸಬೇಕು. ರಟಕಲ್‌ ತಾಂಡಾದಲ್ಲಿ, ರಟಕಲ್‌ ಮಾದಿಗರ ಓಣಿಯಲ್ಲಿ , ಕುರುಬರ ಓಣಿಯಲ್ಲಿ ಬೋರವೆಲ್‌ ಹಾಕಿಸಬೇಕು. ಹಾಳುಬಿದ್ದ ಬೋರ್‌ವೆಲ್‌ ದುರಸ್ತಿ ಮಾಡಬೇಕು, ಕುಡಳ್ಳಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕುಡಿವ ಹನಿ ನೀರಿಗಾಗಿ ದಿನೇದಿನೇ ಪರಿಸ್ಥಿತಿ ಉಲ್ಬಣವಾಗುತ್ತಿದೆ. ಜನಜಾನುವಾರುಗಳು ಸಂಕಷ್ಟಕ್ಕೆ
ಸಿಲುಕಿವೆ.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೇ ಜನರು ರೊಚ್ಚಿಗೇಳುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು. ಲೋಕಸಭೆ ಚುನಾವಣೆಯ ನೆಪವೊಡ್ಡಿ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಆದರೆ ಜನರು ಹನಿಹನಿ ನೀರಿಗಾಗಿ ಪರಿತಾಪ ಪಡುತ್ತಿದ್ದಾರೆ ಇದು ಸರಿಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಜ್ಞಾನ ನಗರಿಯಾದ ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶೀ ಮಹಾ ಪೀಠದ ಗುರುಕುಲದ ಶತಮಾನೋತ್ಸವ ಸಮಾರಂಭ 2020ರ ಜನವರಿ 15ರಿಂದ ಫೆ.21ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ...

  • ಕಲಬುರಗಿ: ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳು ಗ್ರಂಥಾಲಯಗಳ 429 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿವೆ. ಇದರಿಂದ ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಆಧುನಿಕ...

  • ಆಳಂದ: ತಹಶೀಲ್ದಾರ್‌ ಕಚೇರಿ ಎದುರು ಭಾರತೀಯ ಖೇತ್‌ ಮಜ್ದೂರ್‌ ಯೂನಿಯನ್‌ ಹಾಗೂ ಅಖೀಲ ಭಾರತ ಕಿಸಾನ್‌ಸಭಾ ಮೂರುದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ...

  • ಸೊಲ್ಲಾಪುರ: ಯುವಕರ ವಿಕಾಸಕ್ಕೆ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ಸಮಾಜದ ಋಣ ತೀರಿಸಲು ಸಹಾಯವಾಗುತ್ತದೆ ಎಂದು ಅಕ್ಕಲಕೋಟ ಶಾಸಕ ಸಿದ್ಧಾರಾಮ ಮ್ಹೇತ್ರೆ ಹೇಳಿದರು. ಬೆಂಗಳೂರಿನ...

  • ಚಿಂಚೋಳಿ: ಓದಿನ ಕಡೆಗೆ ಹೆಚ್ಚಿನ ಸಮಯ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಡಿವೈಎಸ್‌ಪಿ, ಐಪಿಎಸ್‌ ಅಧಿಕಾರಿ ಅಕ್ಷಯ ಹಾಕೆ ವಿದ್ಯಾರ್ಥಿಗಳಿಗೆ...

ಹೊಸ ಸೇರ್ಪಡೆ