PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

Team Udayavani, Aug 6, 2024, 6:43 PM IST

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

ಕೊಪ್ಪಳ: ಯಾದಗಿರಿ ಪಿಎಸ್‌ಐ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನನ್ನ ತಮ್ಮನ ಸಾವಿಗೆ ಕಾರಣರಾದ ಯಾದಗಿರಿಯ ಶಾಸಕ ಹಾಗೂ ಆತನ ಪುತ್ರನನ್ನು ಮೊದಲು ಬಂಧಿಸಿ, ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಮ್ಮ ಮನೆಗೆ ಬರಲಿ ಎಂದು ಮೃತ ಪಿಎಸ್‌ಐ ಪರಶುರಾಮ ಅವರ ಸಹೋದರ ಹನುಮಂತಪ್ಪ ಛಲವಾದಿ ಒತ್ತಾಯ ಮಾಡಿದ್ದಾರೆ.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆ.೦7 ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಲಿದ್ದಾರೆ. ಈ ವೇಳೆ ಮೃತ ಪಿಎಸ್‌ಐ ಹೆತ್ತವರಿಗೆ ಸಾಂತ್ವಾನ ಹೇಳಲಿದ್ದಾರೆ.

ಪಿಎಸ್‌ಐ ಪರಶುರಾಮ ಸಾವಿಗೆ ಯಾದಗಿರಿ ಶಾಸಕ ಹಾಗೂ ಆತನ ಪುತ್ರನೇ ಕಾರಣ. ಅವರ ವಿರುದ್ದ ನಾವು ದೂರು ಕೊಟ್ಟಿದ್ದೇವೆ. ಆದರೆ ಈವರೆಗೂ ಆ ಆರೋಪಿಗಳ ಬಂಧನವಾಗಿಲ್ಲ. ನಮ್ಮ ಮನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಮುಖ್ಯ ಸಚೇತಕ ಛಲವಾದಿ ನಾರಾಯಣಸ್ವಾಮಿ ಸಾಂತ್ವಾನ ಹೇಳಲು ಬಂದಿದ್ದಾರೆ. ಆ.೦7ಕ್ಕೆ ನಮ್ಮ ಮನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಆಗಮಿಸುವುದಾಗಿ ಮಾಹಿತಿ ಗೊತ್ತಾಗಿದೆ. ಅವರು ಸರ್ಕಾರದ ಭಾಗವಾಗಿ ನಮ್ಮ ಮನೆಗೆ ಆಗಮಿಸುತ್ತಿದ್ದಾರೆ. ನನ್ನ ತಮ್ಮನ ಸಾವಿಗೆ ನ್ಯಾಯ ಸಿಗಬೇಕು. ಸಾವಿಗೆ ಕಾರಣರಾದವನ್ನು ಬಂಧಿಸದೆ ಸಾಂತ್ವಾನ ಹೇಳಲು ಬರುವುದು ಸರಿಯಲ್ಲ. ಮೊದಲು ಆರೋಪಿಗಳ ಬಂಧಿಸಿ ನಂತರ ನಮ್ಮ ಮನೆಗೆ ಬರಲಿ. ಗೃಹ ಸಚಿವರು ನಮ್ಮ ಮನೆಗೆ ಸಾಂತ್ವಾನ ಹೇಳಲು ಬರುತ್ತಿರುವುದಕ್ಕೆ ನಮ್ಮ ವಿರೋಧವೇನು ಇಲ್ಲ. ಸರ್ಕಾರದ ಪ್ರತಿನಿಧಿಯಾಗಿ ಅವರು ಬರುತ್ತಿದ್ದು ಆರೋಪಿಗಳನ್ನು ಐದು ದಿನಗಳಾದರೂ ಬಂಧಿಸಿಲ್ಲ ಎಂದು ಮೃತ ಪಿಎಸ್‌ಐ ಸಹೋದರ ಹನುಮಂತಪ್ಪ ಹೇಳಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಭೇಟಿ

ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪಿಎಸ್ಐ ಪರಶುರಾಮ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದೇ ವೇಳೆ ಪರಶುರಾಮ ಕುಟುಂಬಕ್ಕೆ ತಮ್ಮ ಒಂದು ತಿಂಗಳ ವೇತನದ ಚೆಕ್ ಹಸ್ತಾಂತರ ಮಾಡಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಯಾದಗಿರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಲಿ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.

ಪಿಎಸ್ಐ ಒತ್ತಡ, ಮಾನಸಿಕ ಕಿರುಕುಳದಿಂದ ಮೃತಪಟ್ಟಿದ್ದಾರೆ. ಪರಶುರಾಮ್ ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರ ಕಾರಣ ಎಂದು ಅವರ ಪತ್ನಿ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಲಿಖಿತ ದೂರು ಕೊಟ್ಟಿದ್ದಾರೆ. ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲ. ಈ ಕೂಡಲೇ ತಪ್ಪಿತಸ್ಥರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.