‘ರಾಹುಲ್ ಗಾಂಧಿ ಪ್ರಧಾನಿ: ಅದೊಂದು ತಿರುಕನ ಕನಸು’

Team Udayavani, May 14, 2019, 4:39 PM IST

ಚಿಂಚೋಳಿ: ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಾಬುರಾವ ಚವ್ಹಾಣ ಮಾತನಾಡಿದರು.

ಚಿಂಚೋಳಿ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಮತ್ತೆ ದೇಶದ ಎರಡನೇ ಸಲ ಪ್ರಧಾನ ಮಂತ್ರಿಗಳಾಗಲಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗುವುದಿಲ್ಲ. ಅದೊಂದು ತಿರುಕನ ಕನಸು ಆಗಿದೆ. ನಮ್ಮ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಕಾಲ ಸನ್ನಿತವಾಗಿದೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಗಂಗಾಮತ ಸಮಾಜ ಭೀಷ್ಮನ ಕುಲದವರು. ವೀರ ಶೂರರು ಆಗಿದ್ದಾರೆ. ಆದರೆ ಹೇಡಿಗಳಲ್ಲ. ಅಲ್ಲದೇ ಓಡಿ ಹೋಗುವವರಲ್ಲ. ಅಂಬಿಗರು ಹೊಳೆ ದಾಟಿಸುವವರು ನಾವು. ಆದರೆ ಜನರನ್ನು ಮುಳುಗಿಸುವವರು ಅಲ್ಲ. ದೋಣಿಯನ್ನು ನಡು ನೀರಿನಲ್ಲಿ ಬಿಡುವುದಿಲ್ಲ, ದಡ ಮುಟ್ಟಿಸುವುದು ನಮ್ಮ ಕೋಲಿ ಸಮಾಜ ಆಗಿದೆ. ಕಳೆದ ಎರಡು ವರ್ಷಗಳಿಂದ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಅನೇಕ ಹೋರಾಟ ನಡೆಸಲಾಗಿದೆ. ನಾನೊಬ್ಬ ಶಾಸಕನಾದರು ಸಹ ಕಲಬುರಗಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಮ್ಮ ಸಮಾಜ ನೆನಪಿಗೆ ಬರಲಿಲ್ಲವೇನು?. ಮಾನವೀಯತೆ ದೃಷ್ಟಿಯಿಂದ ನಮ್ಮನ್ನು ಮಾತನಾಡಿಸಲಿಲ್ಲ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದವರು ಕೋಲಿ ಗಂಗಾಮತವನ್ನು ಎಸ್‌ಟಿಗೆ ಸೇರಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮಂತ್ರಿಗಿರಿ ನನಗೇನು ಭಿಕ್ಷೆ ಕೊಟ್ಟಿಲ್ಲ. ಅದು ಕೋಲಿ ಸಮಾಜದ ಹಕ್ಕು ಸಿಕ್ಕಿದೆ. ಕೋಲಿ ಸಮಾಜದ ಹಕ್ಕು ಕಸಿದುಕೊಂಡು ಡಾ| ಮಲ್ಲಿಕಾರ್ಜುನ ಖರ್ಗೆ ಅವರು ತನ್ನ ಮಗನಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ. ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇವೆ ಎಂಬ ಹೇಳಿಕೆ ಕಾಂಗ್ರೆಸ್‌ ಪಕ್ಷದ ಕುತಂತ್ರವಾಗಿದೆ ಎಂದು ಆರೋಪಿಸಿದರು. ಕೋಲಿ ಸಮಾಜದ ಕಾರ್ಯದರ್ಶಿ ಲಕ್ಷ್ತ್ರಣ ಆವಂಟಿ, ಶರಣಪ್ಪ ತಳವಾರ, ರವಿಕುಮಾರ ಹುಸೇಬಾಯಿ, ಪಿಡಪ್ಪ ಜಾಲಗಾರ, ರಾಮಲಿಂಗ ನಾಟೀಕಾರ, ಕಾಶಿನಾಥ ನಾಟೀಕಾರ, ಜಗನ್ನಾಥ ನಾಟೀಕಾರ, ಬಸವರಾಜ ನಾಟೀಕಾರ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ