ಏಳು ದಶಕದ ನಂತರ ದಲಿತರ ಓಣಿಗೆ ರಸ್ತೆ ಭಾಗ್ಯ
Team Udayavani, Apr 25, 2021, 6:11 PM IST
ವಾಡಿ: ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಕಾಲೋನಿ ಹಾಗೂ ಗಿರಿಜನ ಸಮುದಾಯ ವಾಸಿಸುವ ಜಾಂಬವೀರ ಕಾಲೋನಿ ಬಡಾವಣೆಗಳನಡುವೆ ಹಾಯ್ದು ಹೋದ ಕುಂದನೂರು ಗ್ರಾಮದರಸ್ತೆ ಅಭಿವೃದ್ಧಿ ಬರೋಬ್ಬರಿ ಏಳು ದಶಕಗಳ ನಂತರ ಆರಂಭಗೊಂಡಿದೆ.
ಹದಗೆಟ್ಟ ರಸ್ತೆಯಿಂದ ನರಕಯಾತನೆ ಅನುಭವಿಸಿದ್ದ ನಗರದ ಸಾವಿರಾರು ದಲಿತ ಕುಟುಂಬಗಳು ಕೊನೆಗೂ ನಿಟ್ಟುಸಿರು ಬಿಟ್ಟಿವೆ. ಈ ಎರಡು ದಲಿತ ಕೇರಿಗಳಿಗೆ ಸಂಪರ್ಕಕೊಂಡಿಯಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದ ರಸ್ತೆಯೀಗ ಗುಣಮಟ್ಟದ ಸಿಸಿ ರಸ್ತೆಯಾಗಿ ಪ್ರಗತಿ ಹೊಂದುತ್ತಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯಡಿ 65 ಲಕ್ಷ ರೂ. ಮಂಜೂರಾಗಿದೆ.
ಶನಿವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಗಿರಿಜನ ಬಡಾವಣೆ ಪ್ರತಿನಿಧಿ , ಕಾಂಗ್ರೆಸ್ ಸದಸ್ಯ ದೇವಿಂದ್ರ ಕರದಳ್ಳಿ ಹಾಗೂ ಕೋಲಿಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಕಳೆದ ಹಲವುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಿದ್ಧಾರ್ಥ ನಗರ,ಅಂಬೇಡ್ಕರ್ ಕಾಲೋನಿ, ಜಾಂಬವೀರ ಕಾಲೋನಿ, ಚೌಡೇಶ್ವರ ಕಾಲೋನಿಗಳ ರಸ್ತೆ ಅಭಿವೃದ್ಧಿ ಶಾಸಕಪ್ರಿಯಾಂಕ್ ಖರ್ಗೆ ಅವರ ಸತತ ಪ್ರಯತ್ನದಿಂದ ಆಗಿದೆ ಎಂದರು.
ಹಗಲು ರಾತ್ರಿ ಭಾರಿ ವಾಹನಗಳು ಸಂಚವರಿಸುವ ಈ ರಸ್ತೆ ಮಳೆಗಾಲದಲ್ಲಿ ಕೆಸರು, ಚಳಿಗಾಲ ಮತ್ತುಬೇಸಿಗೆಯಲ್ಲಿ ವಿಪರೀತ ಧೂಳು ಹರಡುವಮೂಲಕ ಜನರ ನೆಮ್ಮದಿ ಕದಡಿತ್ತು. ಅನಾರೋಗ್ಯಕರ ವಾತಾವರಣ ಸೃಷ್ಟಿಸಿದ್ದ ಯಮರೂಪಿ ರಸ್ತೆ ಕೊನೆಗೂ ಪ್ರಗತಿ ಹೊಂದುತ್ತಿರುವುದು ಸಂತಸ ತರಿಸಿದೆ. ಸದ್ಯ ಬಿಡುಗಡೆಯಾಗಿರುವ ಅನುದಾನದಡಿ ಕುಂದನೂರು ವೃತ್ತದಿಂದ ಬೌದ್ಧ ಸಮಾಜದ ಸ್ಮಶಾನದ ವರೆಗೆ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಇನ್ನುಳಿದ ಕುಂದನೂರು ಗ್ರಾಮ ವರೆಗಿನ ಎಂಟು ಕಿ.ಮೀ. ರಸ್ತೆ ಅಭಿವೃದ್ಧಿಗೆ ಶಾಸಕ ಪ್ರಿಯಾಂಕ್ ಖರ್ಗೆ ಈಗಾಗಲೇ ಕ್ರಿಯಾಯೋಜನೆಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಬಿಜೆಪಿಸರ್ಕಾರ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕಿದೆ ಎಂದು ದೂರಿದರು.
ಪುರಸಭೆ ಸದಸ್ಯರಾದ ಮಲ್ಲಯ್ಯ ಗುತ್ತೇದಾರ, ಮಹ್ಮದ್ ಗೌಸ್, ಮಾಜಿ ಸದಸ್ಯ ಸೂರ್ಯಕಾಂತರ ದ್ದೇವಾಡಿ, ಮುಖಂಡರಾದ ಶ್ರವಣಕುಮಾರಮೊಸಲಗಿ, ನಾಗೇಂದ್ರ ಜೈಗಂಗಾ, ಶರಣಬಸುಸಿರೂರಕರ, ರಮೇಶ ಬಡಿಗೇರ, ಖೇಮಲಿಂಗ ಬೆಳಮಗಿ, ವಿಜಯಕುಮಾರ ಸಿಂಗೆ, ಬಸವರಾಜಭಂಕೂರ, ರಾಜಾ ಪಟೇಲ, ಮಹ್ಮದ್ ರಿಜ್ವಾನ್, ಕಿಶೋರ ಮಂಗಳೂರ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು