Udayavni Special

ರಾಯಚೋಟಿ ವೀರಭದ್ರೇಶ್ವರ ರಥೋತ್ಸವ

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಭಾಗಿ

Team Udayavani, Feb 28, 2020, 10:40 AM IST

28-Febraury-1

ರಾಯಚೋಟಿ/ಹುಬ್ಬಳ್ಳಿ: ಆಂಧ್ರಪ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ಶ್ರೀ ವೀರಭದ್ರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಸಂಭ್ರಮದಿಂದ ಜರುಗಿತು.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಲಬುರ್ಗಿ, ಬೀದರ ಸೇರಿದಂತೆ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಶ್ರದ್ಧಾ-ಭಕ್ತಿಯ ಸೇವೆ ಸಲ್ಲಿಸಿದರು. ರಥ ಆರಂಭಗೊಳ್ಳುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿಯ ನಮನ ಸಲ್ಲಿಸಿದರು.

ಹರಹರ ಮಹಾದೇವ… ಶ್ರೀ ಭದ್ರಕಾಳಿ, ರಾಯಚೋಟಿ ವೀರಭದ್ರೇಶ್ವರ ಮಹಾರಾಜಕೀ ಜೈ ಜಯಘೋಷ ಮೊಳಗಿದವು. ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅಲಂಕೃತ ರಥದ ಪೂಜಾ ಕೈಂಕರ್ಯ ಜರುಗಿತು. ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಜಿಲ್ಲೆ ಕಿಲ್ಲೆ ಸಾವಿರದೇವರ ಸಂಸ್ಥಾನ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ತಾಲೂಕು ಸಂಪಗಾಂವ ಕಟಾಪುರಿ ಹಿರೇಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದ್ಯಾಲದ ಬೃಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿಗಳು ಪಾಲ್ಗೊಂಡಿದ್ದರು.

9 ದಿನಗಳ ಸಂಭ್ರಮ: ಕಳೆದ 9 ದಿನಗಳ ಕಾಲ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಅಂಕುರಾರೋಪಣ, ಮಹಾಗಣಪತಿ ಪೂಜಾ, ದೀಕ್ಷಾ ಕಂಕಣ ಧ್ವಜಾರೋಹಣ, ತ್ರಿಶೂಲ ಉತ್ಸವ, ಕಲ್ಯಾಣ ಉತ್ಸವ, ಪುರುಷಾಮೃಗೋತ್ಸವ, ಗಜವಾಹನೋತ್ಸವ, ಯಾಳಿ ವಾಹನೋತ್ಸವ, ಸಿಂಹವಾಹನೋತ್ಸವ, ಹುಲಿವಾಹನೋತ್ಸವ ಸೇರಿ ದಂತೆ ಮತ್ತಿತರ ಧಾರ್ಮಿಕ ಸೇವೆ ಜರುಗಿದವು.

ವೀರಭದ್ರೇಶ್ವರ ದೇವಾಲಯ ಟ್ರಸ್ಟ್‌ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಮಂಜುಳಾ, ಹುಬ್ಬಳ್ಳಿ ಮಹಾನಗರದ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಅನಿಲ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ, ರಮೇಶಕುಮಾರ ಬುಡರಕಟ್ಟಿಮಠ, ಗಂಗಾಧರ ನಾಗಠಾಣ, ಮಹೇಶ ಸೂಡಿ, ಮಲ್ಲಿಕಾರ್ಜುನ ಕುರ್ತಕೋಟಿ, ನಾಗನಗೌಡ ನೀರಲಗಿ ವಿವಿಧ ಸೇವಾ ಕೈಂಕರ್ಯಗಳಿಗೆ ಸಾಕ್ಷಿಯಾದರು.

ನಿರಂತರ ದಾಸೋಹ: ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಕ್ಕೆ ಬೈಲಹೊಂಗಲದ ವೀರಯ್ಯ ಮುಪ್ಪಯ್ಯನಮಠ ಹಾಗೂ ನರಗುಂದದ ಚೆನ್ನಪ್ಪ ನಾಗಠಾಣ ನೇತೃತ್ವದಲ್ಲಿ ನಿರಂತರ ದಾಸೋಹ ನೆರವೇರಿತು. ಬುಧವಾರ ರಾತ್ರಿ ಜರುಗಿದ ವಿಶೇಷ ಸಮಾರಂಭದಲ್ಲಿ ವಿವಿಧ ದಾನಿ ಗಣ್ಯರನ್ನು ಹಾಗೂ ಎಲ್ಲ ಸೇವಾಕರ್ತರನ್ನು ದೇವಾಲಯ ಟ್ರಸ್ಟ್‌ ವತಿಯಿಂದ ಗೌರವಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

telangaana-baby-possitive

ತೆಲಂಗಾಣದಲ್ಲಿ 23 ದಿನಗಳ ಮಗುವನ್ನೂ ಕಾಡಿದ ಕೋವಿಡ್-19 ವೈರಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

08-April-2

ಅಗತ್ಯವಸ್ತು ಸರಬರಾಜಿಗೆ ಅಡ್ಡಿ ಮಾಡುವಂತಿಲ್ಲ

08-April-1

ನಾಲ್ವರ ವರದಿ ನೆಗೆಟಿವ್‌: ನಿಟ್ಟುಸಿರು ಬಿಟ್ಟ ವಾಡಿ ಜನತೆ

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

07-April-34

ಸೋಂಕು ಹರಡುವ ಭೀತಿಯಲ್ಲಿ ನೀರಿನ ಸಮಸ್ಯೆ ಗೌಣ

ಕಲಬುರಗಿಯ ಮತ್ತಿಬ್ಬರಿಗೆ ಕೋವಿಡ್19 ದೃಢ: ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೂ ಸೋಂಕು!

ಕಲಬುರಗಿಯ ಮತ್ತಿಬ್ಬರಿಗೆ ಕೋವಿಡ್19 ದೃಢ: ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೂ ಸೋಂಕು!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

08-April-5

ಅಭಿವೃದ್ಧಿಗೆ ಕೊರೊನಾ ಲಾಕ್‌ಡೌನ್‌ ಅಡ್ಡಿ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಲಾಕ್‌ಡೌನ್‌: ಖನ್ನತೆಯಲ್ಲಿ ಟೆಕ್ಕಿಗಳೇ ಹೆಚ್ಚು!

ಲಾಕ್‌ಡೌನ್‌: ಖನ್ನತೆಯಲ್ಲಿ ಟೆಕ್ಕಿಗಳೇ ಹೆಚ್ಚು!

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ