ಮಾನವೀಯತೆಯೊಂದಿಗೆ ಸೇವೆ ಸಲ್ಲಿಸಿ

Team Udayavani, Feb 24, 2019, 6:18 AM IST

ಕಲಬುರಗಿ: ಕಠಿಣ ತರಬೇತಿ ಪಡೆದು ನಾಗರಿಕ ಪೊಲೀಸ್‌ ಅಧಿಕಾರಿಗಳಾಗಿ ಹೊರಹೊಮ್ಮಿದ ನಿರ್ಗಮಿತ ಪ್ರಶಿಕ್ಷಣಾರ್ಥಿಗಳೆಲ್ಲ ಸತ್ಯ, ಪ್ರಮಾಣಿಕತೆಯಿಂದ ಸ್ವಜಪಕ್ಷಪಾತ ರಹಿತ ಸೇವೆ ಕುರಿತು ಪಡೆಯಲಾದ ಪ್ರತಿಜ್ಞಾವಿಧಿಯಂತೆ ಮಾನವೀತೆಯೊಂದಿಗೆ ಸೇವೆ ಸಲ್ಲಿಸಬೇಕೆಂದು ಗೃಹ ಸಚಿವ ಎಂ.ಬಿ. ಪಾಟೀಲ ಸಲಹೆ ನೀಡಿದರು.

ಶನಿವಾರ ಇಲ್ಲಿನ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾ ವಿದ್ಯಾಲಯದಲ್ಲಿ 8ನೇ ತಂಡದ 48 ಪಿಎಸ್‌ಐ (ನಾಗರಿಕ ಸಿವಿಲ್‌), ನಾಲ್ಕನೇ ತಂಡದ ಪಿಎಸ್‌ಐ (ನಿಸ್ತಂತು), ಒಂದನೇ ತಂಡದ ಪಿಎಸ್‌ಐ (ಸಿಐಡಿ/ ಕೆ.ಎಸ್‌ಐ.ಎಸ್‌.ಎಫ್‌/ ಗುಪ್ತವಾರ್ತೆ) ಸೇರಿದಂತೆ ಒಟ್ಟಾರೆ 267 ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಮುಖ್ಯ ಅತಿಥಿಗಳಾಗಿ ಹಾಗೂ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. 

ಕುಟುಂಬದವರೆಲ್ಲರೂ ಕಷ್ಟಪಟ್ಟು ತಮ್ಮನ್ನು ಈ ಮಟ್ಟಕ್ಕೆ ತಂದಿದ್ದಾರೆ. ಆದ್ದರಿಂದ ಕುಟುಂಬದ ಜತೆಗೆ ಇಲಾಖೆಗೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಹೆಸರು ತರಲು ಸದಾ ಬದ್ಧವಾಗಿರಿ. ಯಾವುದೇ ಸಂದರ್ಭದಲ್ಲೂ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್‌ರ ಪಾತ್ರವೇ ಬಹುಮುಖ್ಯ. ಸೇವೆ ಸಲ್ಲಿಸುವ ವೇಳೆ ಯಾವುದೇ ಕಷ್ಟ-ನಷ್ಟ ಎದುರಾದಲ್ಲಿ ತಮ್ಮೊಂದಿಗೆ ನಾನಿರುತ್ತೇನೆ ಎಂದು ಅಭಯ ನೀಡಿದರು.

ಪೊಲೀಸ್‌ ತರಬೇತಿ ಕೇಂದ್ರ ಹಾಗೂ ಶಾಲೆಗಳು ಇಲಾಖೆಗೆ ಹೃದಯವಿದ್ದಂತೆ. ತರಬೇತಿ ಸೂಕ್ತವಾಗಿ ಲಭಿಸಿದಲ್ಲಿ ಸೇವೆಗೆ ಬಲ ಬರುತ್ತದೆ. ಹೀಗಾಗಿ ತರಬೇತಿ ಬಲವರ್ಧನೆಗೆ ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ವರದಿ ಬಂದ ನಂತರ ದೃಢ ಹೆಜ್ಜೆ ಇಡಲಾಗುವುದು ಎಂದರು.

ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ ಮಾತನಾಡಿ, 2003ರಲ್ಲಿ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಪ್ರಾರಂಭವಾಗಿದ್ದು, ಇಲ್ಲಿಯ ವರೆಗೆ 1266 ಪಿಎಸ್‌ಐ, 4796 ಪೊಲೀಸ್‌ ಪೇದೆಗಳಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಎಲ್ಲ ಹಂತದ ಸಮರೋಭ್ಯಾಸ ನಡೆಸಲಾಗಿದೆ. ಅಲ್ಲದೇ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಉಪನ್ಯಾಸ ಕೊಡಿಸಲಾಗಿದೆ ಎಂದು ತಿಳಿಸಿದರು.

ಶಂಕ್ರಪ್ಪ ಕುಟುಂಬಕ್ಕೆ ಸಹಾಯ: ಪ್ರಶಿಕ್ಷಣಾರ್ಥಿಯಾಗಿ ಹೊರ ಹೊಮ್ಮಬೇಕಿದ್ದ ಸಮಯದಲ್ಲಿ ಇತ್ತೀಚೆಗೆ ಅಸಹಜ ಸಾವಿಗೀಡಾದ ಸೇಡಂ ತಾಲೂಕಿನ ಬೆನಕನಹಳ್ಳಿಯ ಬಸವರಾಜ ಶಂಕ್ರಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಗೃಹ ಸಚಿವರು, ಕುಟುಂಬಕ್ಕೊಂದು ಕೆಲಸ ಹಾಗೂ ಆರ್ಥಿಕ ಸಹಾಯ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ತದನಂತರ ಬಸವರಾಜ ಕುಟುಂಬ ವರ್ಗದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರಲ್ಲದೇ ತಮ್ಮೊಂದಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಎಂದು ಧೈರ್ಯ ತುಂಬಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಪೊಲೀಸ್‌ ಮಹಾನಿರ್ದೇಶಕ ಪದಮ್‌ಕುಮಾರ ಗರ್ಗ್‌, ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಶಿಕುಮಾರ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಹಾಗೂ ಇತರರು ಇದ್ದರು. ಚಿತ್ತಾಪುರ ಸಿಪಿಐ ಪಿ.ಎಂ. ಸಾಲಿಮಠ, ಲಕ್ಷ್ಮೀ ನಿರೂಪಿಸಿದರು. ಪೊಲೀಸ್‌ ತರಬೇತಿ ಮಹಾ ವಿದ್ಯಾಲಯದ ಡಿವೈಎಸ್ಪಿ ಎಂ.ಎಂ. ಯಾದವಾಡ ವಂದಿಸಿದರು. 

ಕುಸಿದು ಬಿದ್ದ ಪ್ರಶಿಕ್ಷಣಾರ್ಥಿಗಳು
ಬೆಳಗ್ಗೆ 8:30ಕ್ಕೆ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನಕ್ಕೆ ಸಮಯ ನಿಗದಿಯಾಗಿತ್ತು. ಹೀಗಾಗಿ ಬೆಳಗ್ಗೆ 7:30ಕ್ಕೆ ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಮೈದಾನಕ್ಕೆ ಬಂದು ಗೌರವ ವಂದನೆ ಸಲ್ಲಿಸಲು ತಯಾರಾಗಿದ್ದರು. ಆದರೆ ಗೃಹ ಸಚಿವ ಎಂ.ಬಿ. ಪಾಟೀಲ ಒಂದು ಗಂಟೆ ತಡವಾಗಿ ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ತದನಂತರ ಭಾಷಣ ಮಾಡುವಾಗ ಸಮಯ 10 ಗಂಟೆಯಾಗಿತ್ತು. ಈ ಹೊತ್ತಿಗೆ ಬಿಸಿಲು ಜಾಸ್ತಿಯಾಗಿದ್ದರಿಂದ ಪ್ರಶಿಕ್ಷಣಾರ್ಥಿಗಳು ಒಬ್ಬೊಬ್ಬರಾಗಿ ಸುಸ್ತಾಗಿ ಕುಸಿಯಲಾರಂಭಿಸಿದರು. ಒಟ್ಟು ಐದು ಪ್ರಶಿಕ್ಷಣಾರ್ಥಿಗಳು ಕುಸಿದು ಬಿದ್ದಿರುವುದನ್ನು ಕಂಡ ಸಚಿವರು, ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು. ಪ್ರಶಿಕ್ಷಣಾರ್ಥಿಗಳು ಕುಸಿಯುತ್ತಿರುವ

ಬಂಧು-ಬಳಗದವರೂ ಭಾಗಿ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 267 ವಿವಿಧ ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಬಂಧು-ಬಳಗದವರು, ತಂದೆ-ತಾಯಿ, ಸಹೋದರರು ಪಾಲ್ಗೊಂಡಿದ್ದರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರಿಗೆ ಲಿಖೀತ ದಾಖಲೆ ಸಲ್ಲಿಕೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ...

  • ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ...

  • ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ನವೆಂಬರ್‌ 18ರಿಂದ ಡಿಸೆಂಬರ್‌ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸಂಸದೀಯ ವ್ಯವಹಾರಗಳ...

  • ಬೀಜಿಂಗ್‌: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್‌ಗಳ...

  • ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ...