Udayavni Special

ತರ್ಕಸ್‌ಪೇಟೆ: ಮತದಾನ ಮಾಡಲು ಮನವೊಲಿಕ

Team Udayavani, May 11, 2018, 11:04 AM IST

gul-1.jpg

ಕಲಬುರಗಿ: ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮದ ಮತದಾರರಿಗೆ ಮೇ 12 ರಂದು ಮತ ಚಲಾಯಿಸುವಂತೆ ಚಿತ್ತಾಪುರ ತಹಶೀಲ್ದಾರ ಶಿವಾನಂದ ಸಾಗರ ಮನವಿ ಮಾಡಿದರು. ಮತದಾನ ಬಹಿಷ್ಕರಿಸಲು ಮುಂದಾಗಿರುವ ತರ್ಕಸ್‌ಪೇಟೆ ಗ್ರಾಮದ ಮತದಾರರ ಮನವೊಲಿಸಿ ಮತದಾನ ಮಾಡಲು ಪ್ರೇರೇಪಿಸಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಲಾಯಿತು.

ತರ್ಕಸ್‌ಪೇಟೆ ಗ್ರಾಮದ ಹಣಮಂತ ದೇವರ ಗುಡಿಯಲ್ಲಿ ಸೇರಿದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರರು, ಈಗಾಗಲೇ ನಾಲ್ಕು ಬಾರಿ ಈ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡಲು ಕೋರಲಾಗಿದೆ ಎಂದು ಹೇಳಿದರು. 

ಗ್ರಾಮ ಪಂಚಾಯತಿ ಡಿ ಲಿಮಿಟೇಷನ್‌ ಸಂದರ್ಭದಲ್ಲಿ ತರ್ಕಸ್‌ಪೇಠ ಗ್ರಾಮವು ರಾಂಪುರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಅಳವಡಿಸಿ ಈಗಾಗಲೇ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲಾಗಿದೆ. ಪ್ರತಿ ಐದು ವರ್ಷಕ್ಕೊಂದು ಬಾರಿ ಜನಸಂಖ್ಯೆ ಆಧಾರದ ಮೇಲೆ ಗ್ರಾಪಂಗಳನ್ನು ಡಿಲಿಮಿಟೇಷನ್‌ ಮಾಡಲಾಗುತ್ತದೆ. ಮುಂದಿನ ಬಾರಿ ಡಿ ಲಿಮಿಟೇಷನ್‌ ಮಾಡುವಾಗ ತರ್ಕಸ್‌ಪೇಟೆ ಗ್ರಾಮವನ್ನು ಪಂಚಾಯತಿ ಕೇಂದ್ರ ಸ್ಥಾನವನ್ನಾಗಿಸಲು ಪ್ರಯತ್ನಿಸಬೇಕು. ಈ ಚುನಾವಣೆಯಲ್ಲಿ ತಾವು ಮತದಾನ ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಜಾಪ್ರಭುತ್ವದ ಭದ್ರಬುನಾದಿಗೆ ಸಹಕರಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಚಿತ್ತಾಪುರ ಪಿಎಸ್‌ಐ ವಿಜಯಕುಮಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬ ಅಸ್ತ್ರವು ನಮಗೆ ಸಂವಿಧಾನಾತ್ಮಕವಾಗಿ ಪ್ರಾಪ್ತವಾಗಿದೆ. ಗ್ರಾಮಸ್ಥರು ತಮ್ಮ ನಿರ್ಧಾರ ಬದಲಾಯಿಸಿ ಮತದಾನ ಮಾಡಬೇಕು. ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ ಚುನಾವಣೆ ಆಯೋಗವು ನೋಟಾ ಎನ್ನುವ ಮತ ಚಲಾಯಿಸಲು ಅವಕಾಶ ಮಾಡಿದೆ. ಕಾರಣ ಗ್ರಾಮಸ್ಥರು ಮತದಾನದಿಂದ ವಂಚಿತರಾಗದೆ ಕಡ್ಡಾಯವಾಗಿ ಮತಚಲಾಯಿಸಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆ‌ಗೆದುಕೊಂಡು ಅಶಾಂತಿಗೆ ಆಸ್ಪದ ನೀಡಬಾರದು ಎಂದರು.

ತರ್ಕಸ್‌ಪೇಟೆಗ್ರಾಮದ ಮುಖಂಡ ಬಸಂತರಾಯ ದಂಡಗಿ ಮಾತನಾಡಿ, ತರ್ಕಸ್‌ಪೇಠ ಗ್ರಾಮವು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನವಾಗಲು ಎಲ್ಲ ಸವಲತ್ತುಗಳನ್ನು ಹೊಂದಿದೆ. ಆದರೂ ಸಹ ತರ್ಕಸ್‌ಪೇಟೆ ಗ್ರಾಮವನ್ನು ರಾಂಪುರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದನ್ನು ಬದಲಾಯಿಸಲು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ತರ್ಕಸ್‌ಪೇಟೆ ಗ್ರಾಮವು ಪಂಚಾಯತಿ ಕೇಂದ್ರ ಸ್ಥಾನವಾಗದಿದ್ದಲ್ಲಿ ಈ ಗ್ರಾಮವನ್ನು ಈ ಹಿಂದಿನ ಕೊಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಬೇಕು. ನಮ್ಮ ಗ್ರಾಮವನ್ನು ಪಂಚಾಯತಿ ಕೇಂದ್ರಸ್ಥಾನ ಮಾಡಲಿಲ್ಲ ಎನ್ನುವ ಅಸಮಾಧಾನ ನಮಗಿದೆ. ಇದರಿಂದ ಮತದಾನ ಬಹಿಷ್ಕರಿಸುವುದಕ್ಕೆ ಮುಂದಾಗಿದ್ದೇವೆ ಎಂದರು.

ಚಿತ್ತಾಪುರ ಫ್ಲೆಯಿಂಗ್‌ ಸ್ಕ್ವಾಡ್‌ ತಂಡದ ಶ್ರೀಧರ, ಸೆಕ್ಟರ್‌ ಅಧಿಕಾರಿಗಳಾದ ಸಿದ್ದು ಅಣಬಿ, ಅಶೋಕ ಟಿಳೇಕರ, ನಾಲವಾರ ಕಂದಾಯ ನಿರೀಕ್ಷಕ ಗುರುಪ್ರಸಾದ, ತರ್ಕಸ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಬಸವಣ್ಣಪ್ಪ ಹೂಗಾರ, ಗ್ರಾಮದ ಗಣ್ಯರಾದ ಅಮೀನರೆಡ್ಡಿ, ನಾಗರೆಡ್ಡಿ, ಚಂದ್ರಶೇಖರ ನೀಲಗಾರ, ಮಲ್ಲಿಕಾರ್ಜುನ ಶೆಳ್ಳಗಿ, ರಾಯಪ್ಪ ಪೂಜಾರಿ, ಮಶಾಕಸಾಬ ಹೈದ್ರಾಬಾದ ಪಾಲ್ಗೊಂಡಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉತ್ತರಪ್ರದೇಶದಲ್ಲಿ ಯೋಗಿ ಆಡಳಿತ ಇರುವವರೆಗೆ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ: ಸಿದ್ದು

ಉತ್ತರಪ್ರದೇಶದಲ್ಲಿ ಯೋಗಿ ಆಡಳಿತ ಇರುವವರೆಗೆ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ: ಸಿದ್ದು

ಬಾಬ್ರಿ ಅಂತಿಮ ತೀರ್ಪು: ಆಡ್ವಾಣಿ, ಉಮಾ ಸೇರಿ 32 ಆರೋಪಿಗಳಿಗೆ ಶಿಕ್ಷೆಯಾದ್ರೆ ಮುಂದೇನು?

ಬಾಬ್ರಿ ಅಂತಿಮ ತೀರ್ಪು: ಆಡ್ವಾಣಿ, ಉಮಾ ಸೇರಿ 32 ಆರೋಪಿಗಳಿಗೆ ಶಿಕ್ಷೆಯಾದ್ರೆ ಮುಂದೇನು?

ಡೀಸೆಲ್ ದರದಲ್ಲಿ ಮತ್ತೆ ಇಳಿಕೆ: ಬೆಂಗಳೂರು, ಮುಂಬೈ ಸೇರಿ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?

ಡೀಸೆಲ್ ದರದಲ್ಲಿ ಮತ್ತೆ ಇಳಿಕೆ: ಬೆಂಗಳೂರು, ಮುಂಬೈ ಸೇರಿ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಬೆಳಗಾವಿಯಲ್ಲಿ ಖಾಕಿ ಕಟ್ಟೆಚ್ಚರ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಬೆಳಗಾವಿಯಲ್ಲಿ ಖಾಕಿ ಕಟ್ಟೆಚ್ಚರ

munirathna

ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ಬಿಟ್ಟದ್ದು, ಬಿಜೆಪಿ ಮಾತಿನ ಮೇಲೆ ನಿಲ್ಲುವ ಪಕ್ಷ: ಮುನಿರತ್ನ

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ ಹಾಗೂ 5 ಬೈಕ್ ಬೆಂಕಿಗಾಹುತಿ

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

Live Update: ಬಾಬ್ರಿ ಅಂತಿಮ ತೀರ್ಪು: ಸಿಬಿಐ ವಿಶೇಷ ಕೋರ್ಟ್ ಗೆ ನ್ಯಾಯಾಧೀಶರ ಆಗಮನ

Live Update: ಬಾಬ್ರಿ ಅಂತಿಮ ತೀರ್ಪು ಓದುತ್ತಿರುವ ವಿಶೇಷ ಕೋರ್ಟ್ ನ್ಯಾಯಾಧೀಶರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gb-tdy-2

ಹೊಸ ಶಿಕ್ಷಣ ನೀತಿ ಜಾರಿ ಬೇಡ

ರೈತ ವಿರೋಧಿ ನೀತಿ ಖಂಡಿಸಿ ನಿರಶನ

ರೈತ ವಿರೋಧಿ ನೀತಿ ಖಂಡಿಸಿ ನಿರಶನ

ರೈಲ್ವೆ ಬ್ರಿಡ್ಜ್ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ: ನೀಲೂರು ಗ್ರಾಮದಲ್ಲಿ ನಿಷೇಧಾಜ್ಞೆ

ರೈಲ್ವೆ ಬ್ರಿಡ್ಜ್ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ: ನೀಲೂರು ಗ್ರಾಮದಲ್ಲಿ ನಿಷೇಧಾಜ್ಞೆ

gb-tdy-1

ಪ್ರವಾಸೋದ್ಯಮದಿಂದ ಹೆಚ್ಚು ಉದ್ಯೋಗ ಸೃಷ್ಟಿ

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಎದೆನೋವು: ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

ಉತ್ತರಪ್ರದೇಶದಲ್ಲಿ ಯೋಗಿ ಆಡಳಿತ ಇರುವವರೆಗೆ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ: ಸಿದ್ದು

ಉತ್ತರಪ್ರದೇಶದಲ್ಲಿ ಯೋಗಿ ಆಡಳಿತ ಇರುವವರೆಗೆ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ: ಸಿದ್ದು

ಬಾಬ್ರಿ ಅಂತಿಮ ತೀರ್ಪು: ಆಡ್ವಾಣಿ, ಉಮಾ ಸೇರಿ 32 ಆರೋಪಿಗಳಿಗೆ ಶಿಕ್ಷೆಯಾದ್ರೆ ಮುಂದೇನು?

ಬಾಬ್ರಿ ಅಂತಿಮ ತೀರ್ಪು: ಆಡ್ವಾಣಿ, ಉಮಾ ಸೇರಿ 32 ಆರೋಪಿಗಳಿಗೆ ಶಿಕ್ಷೆಯಾದ್ರೆ ಮುಂದೇನು?

ಡೀಸೆಲ್ ದರದಲ್ಲಿ ಮತ್ತೆ ಇಳಿಕೆ: ಬೆಂಗಳೂರು, ಮುಂಬೈ ಸೇರಿ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?

ಡೀಸೆಲ್ ದರದಲ್ಲಿ ಮತ್ತೆ ಇಳಿಕೆ: ಬೆಂಗಳೂರು, ಮುಂಬೈ ಸೇರಿ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?

bng-tdy-1

ಉಪ ಚುನಾವಣೆಗೆ ಆನ್‌ಲೈನ್‌ ಸ್ಪರ್ಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಬೆಳಗಾವಿಯಲ್ಲಿ ಖಾಕಿ ಕಟ್ಟೆಚ್ಚರ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು: ಬೆಳಗಾವಿಯಲ್ಲಿ ಖಾಕಿ ಕಟ್ಟೆಚ್ಚರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.