ಶಿಕ್ಷಕರು-ಪ್ರಾಚಾರ್ಯರಾಗಿ ಪಾಠ ಮಾಡಿದ ಮಕ್ಕಳು

Team Udayavani, Sep 8, 2017, 12:40 PM IST

ಕಲಬುರಗಿ: ನಗರದ ಶರಣಬಸವೇಶ್ವರ ರೆಸಿಡೆನ್ಸಿಯಲ್‌ ಪಬ್ಲಿಕ್‌ ಶಾಲೆ (ಎಸ್‌.ಬಿ.ಆರ್‌)ಯಲ್ಲಿ ವಿಶಿಷ್ಠ ರೀತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳೇ ಎಲ್ಲ ಜವಾಬ್ದಾರಿ ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳೇ ತಮ್ಮ ಕಿರಿಯ ವಿದ್ಯಾರ್ಥಿಗಳ ತರಗತಿಗಳಿಗೆ ಹೋಗಿ ತಮ್ಮ ಮೆಚ್ಚಿನ ವಿಷಯದ ಪಾಠ ಮಾಡಿದರು. ಶಿಕ್ಷಕರು ಪ್ರೇಕ್ಷಕರಾಗಿದ್ದರು.

ವಿದ್ಯಾರ್ಥಿಗಳೇ ಪ್ರಾಚಾರ್ಯರಾಗಿ, ಶಿಕ್ಷಕರಿಗಾಗಿ ಕೆಲಸ ಮಾಡಿದರು. ಆಡಳಿತ ಜವಾಬ್ದಾರಿಯ ಅರಿವು ವಿದ್ಯಾರ್ಥಿಗಳಲ್ಲಿ
ಮೂಡಲೆಂಬುದೇ ಇದರ ಮೂಲ ಉದ್ದೇಶ ಎಂಬುದಾಗಿ ತಿಳಿಸಲಾಯಿತು.

ಶಾಲೆಯ ಎಲ್ಲಾ ಕಾರ್ಯ ವಿಧಾನಗಳೆಲ್ಲವನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟರು. ಬೆಳಗ್ಗೆ ಶಾಲೆ ಪ್ರಾರಂಭವಾಗುತ್ತಲೇ
ವಿದ್ಯಾರ್ಥಿಗಳೇ ತಾವೇ ಆಯ್ಕೆ ಮಾಡಿಕೊಂಡಿದ್ದ ತರಗತಿಗಳಿಗೆ ತೆರಳಿದರು. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಶಿಕ್ಷಕರ ಮೆಚ್ಚುಗೆಗೂ ಪಾತ್ರರಾದರು. ನಂತರ ಶಿಕ್ಷಕರ ದಿನಾಚರಣೆ ಸಮಾರಂಭ ನಡೆಯಿತು.

ವಿದ್ಯಾರ್ಥಿಗಳು ಡಾ| ಎಸ್‌.ರಾಧಾಕೃಷ್ಣನ್‌ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ಸಹ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿದ್ದ ಭಾಲ್ಕಿ ಸಂಸ್ಥಾನ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಿ.ಎ. ಪಾಟೀಲ ಮಾತನಾಡಿ, ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶೈಕ್ಷಣಿಕ ಅರ್ಹತೆಗಿಂತಲೂ ಜ್ಞಾನ ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದರು. ನಿವೃತ್ತ ಇಂಗ್ಲಿಷ್‌ ಉಪನ್ಯಾಸಕಿ ಶಶಿಕಲಾ ಲಾಖೆ ಅವರನ್ನು ಸತ್ಕರಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಶಾರದಾ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕ ಆದಿತ್ಯ ಮದರಿ ಮತ್ತು ವಿದ್ಯಾರ್ಥಿ ನಾಯಕಿ ಶ್ರೇಯಾ ಚಿಂತಿ ಮುಂತಾದವರಿದ್ದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ವೀರೇಂದ್ರ ಡೆಂಗೆ, ಅನನ್ಯಾ ಪೂಜಾರಿ ನಿರೂಪಿಸಿದರು. ಶಿಕ್ಷಕರಾದ ವಿಶ್ವೇಶ್ವರ
ಹೊನಗುಂಟಿಕರ್‌, ಜಿ.ಕೆ. ಪ್ರಸಾದ, ಶಂಭುಲಿಂಗಪ್ಪ, ಅನಿಲಕುಮಾರ, ನಂದಾ ಪಾಟೀಲ, ಸುರೇಖಾ ಖೇಣಿ,
ಸಂಗೀತಾ ಸಾಹು, ಮೇಘಲತಾ ಬಿರಾದಾರ, ದಿಗಂಬರ ಕುಲಕರ್ಣಿ, ಚಂದ್ರಲೇಖಾ, ಸುಗಂಧಾ ಪ್ರಸಾದ, ಕೋಮಲಾ
ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಳಂದ: ತಾಲೂಕಿನ ಕಣಮಸ್‌ ಗ್ರಾಮದ ಸಂಪರ್ಕ ಸೇತುವೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್‌...

  • ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪಿಂಚಣಿ ಸಮಸ್ಯೆ ಬಗೆಹರಿಸಲು ರಾಷ್ಟ್ರಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಆ. 23ರಂದು ಪಿಂಚಣಿ...

  • ಕಲಬುರಗಿ: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ನಿಮಿತ್ತ ನಗರದ ಮಠಗಳಲ್ಲಿ ಶನಿವಾರ ಮಧ್ಯಾರಾಧನೆ ಸಂಭ್ರಮದಿಂದ ನೆರವೇರಿತು. ಜೇವರ್ಗಿ...

  • ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಹಾನಿಗೊಳಗಾದ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಶನಿವಾರ...

  • ಕಲಬುರಗಿ: ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ನಗರದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದ್ದು,...

ಹೊಸ ಸೇರ್ಪಡೆ