“ಕೈ’ನಿಂದಲೇ ದೇಶದ ವ್ಯವಸ್ಥೆ ಗಟ್ಟಿ

Team Udayavani, Feb 18, 2019, 6:48 AM IST

ಅಫಜಲಪುರ: ಸ್ವಾತಂತ್ರ್ಯಾ ಬಂದಾಗಿನಿಂದ ಇಲ್ಲಿಯ ವರೆಗೆ ದೇಶ ಏನೆಲ್ಲ ಸಾಧನೆಯಾಗಿದೆಯೋ ಅದರಲ್ಲಿ ಸಿಂಹ ಪಾಲು ಕಾಂಗ್ರೆಸ್‌ ಪಕ್ಷದ್ದಾಗಿದೆ. ಕಾಂಗ್ರೆಸ್‌ ಪಕ್ಷದಿಂದಲೇ ದೇಶದ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೊಡ ಹೇಳಿದರು.

ಪಟ್ಟಣದ ಮಹಾಂತೇಶ್ವರ ಕಾಲೇಜು ಆವರಣದಲ್ಲಿ 2019ರ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಪಕ್ಷದ ಸಿದ್ಧತಾ ತರಬೇತಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯಾ ಬಂದಾಗ ದೇಶದಲ್ಲಿ ಒಂದು ಸೂಜಿಯೂ ತಯಾರಾಗುತ್ತಿರಲಿಲ್ಲ. ಅಲ್ಲದೇ ನುರಾರು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿ ಮುನ್ನಡೆಸುವುದೇ ದೊಡ್ಡ ಸವಾಲಾಗಿತ್ತು. ಅಂತದ್ದರಲ್ಲಿ ನೂರಾರು ಕೈಗಾರಿಕೆಗಳನ್ನು ಸ್ಥಾಪಿಸಿ, ದೇಶದ ಗಡಿ ಭದ್ರಗೊಳಿಸಿದ್ದು ಕಾಂಗ್ರೆಸ್‌ ಎಂದು ಹೇಳಿದರು.

ವಿಜ್ಞಾನ, ತಂತ್ರಜ್ಞಾನ, ಹೈನೋದ್ಯಮ, ಆಹಾರ ಭದ್ರತೆ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಿಂದ ಹಿಡಿದು ಎಲ್ಲವನ್ನು ಕಾಂಗ್ರೆಸ್‌ ಮಾಡಿದೆ. ಕಾಂಗ್ರೆಸ್‌ ಪಕ್ಷದ ಯೋಜನೆಗಳ ಲಾಭ ಪಡೆದುಕೊಂಡವರೇ ಈಗ ಕಾಂಗ್ರೆಸ್‌ನ್ನು ತೆಗಳುತ್ತಾರೆ. ಇದು ನಿಜಕ್ಕೂ ವಿಚಿತ್ರವಾಗಿದೆ ಎಂದರು. 

ಶಾಸಕ ಎಂ.ವೈ. ಪಾಟೀಲ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಮಾಸ್ಟರ್‌ ಟ್ರೇನರ್‌ ಆಗಿರುವ ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ವಿಜಯಕುಮಾರ ಪಾಟೀಲ, ಜಿಪಂ ಮಾಜಿ ಸದಸ್ಯ ಸಂಜೀವಕುಮಾರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾದ ಕಾಂಗ್ರೆಸ್‌ ಪಕ್ಷದ ಭೂತ ಮಟ್ಟದ ಅಧ್ಯಕ್ಷ ಹಾಗೂ ಸದಸ್ಯರಿಗೆ, ಕಾರ್ಯಕರ್ತರಿಗೆ ಪಕ್ಷದ ಯೋಜನೆಗಳು, ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಜವಾಬ್ದಾರಿ ಕುರಿತು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿಂ ಪೀರ್‌ ವಾಲೀಕಾರ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಕುಲ್‌ ಪಟೇಲ್‌, ಮಾಜಿ ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಸಿದ್ಧಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಶರಣು ಕುಂಬಾರ, ಮತೀನ್‌ ಪಟೇಲ್‌, ಬಿರಣ್ಣ ಕಲ್ಲೂರ, ಮಹಾಂತೇಶ ಪಾಟೀಲ ಇದ್ದರು. 

ಹುಚ್ಚಾಟವಾಡೋ ಪಕ್ಷ ಸೋಲಿಸಿ
ಐದು ವರ್ಷಗಳ ಕಾಲ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡು ದೇಶದ ಜನರ ಭಾವನೆಗಳೊಂದಿಗೆ ಹುಚ್ಚಾಟ ಆಡುತ್ತಿರುವ ಪಕ್ಷಕ್ಕೆ ಈ ಬಾರಿ ಸೋಲಿಸಿ ಪುನಃ ಕಾಂಗ್ರೆಸ್‌ ಕೈಗೆ ಅಧಿಕಾರ ಕೊಡಲು ಜನ ನಿರ್ಧರಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ದೇಶದ ಭವಿಷ್ಯ ಬದಲಿಸುವ ದಿಕ್ಸೂಚಿಯಾಗಲಿದೆ. ಕಲಬುರಗಿ ಅಭಿವೃದ್ಧಿ ಹರಿಕಾರ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೂಮ್ಮೆ ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ.
  ಪ್ರಕಾಶ ರಾಠೊಡ, ವಿಧಾನ ಪರಿಷತ್‌ ಸದಸ್ಯ


ಈ ವಿಭಾಗದಿಂದ ಇನ್ನಷ್ಟು

 • ಕಲಬುರಗಿ: ತೀವ್ರ ಕುತೂಹಲ ಮೂಡಿಸಿದ ಲೋಕಸಭಾ ಚುನಾವಣೆ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ತೆರೆ ಬಿದ್ದಿದೆ. ಬುಧವಾರ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ...

 • ಕಲಬುರಗಿ: ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಕಲಬುರಗಿ ಕ್ಷೇತ್ರದ ಜನತೆ ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ. ಸೋಲಿಲ್ಲದ ಸರದಾರ ಖ್ಯಾತಿಯ ಕಾಂಗ್ರೆಸ್‌ ಹಿರಿಯ...

 • ಯಾದಗಿರಿ: ಸೋಲಿಲ್ಲದ ಸರದಾರನಿಗೆ ಈ ಬಾರಿ ಗುರುಮಠಕಲ್ ಮತಕ್ಷೇತ್ರದ ಜನರು ಕೈ ಹಿಡಿಯಲಿಲ್ಲವೇ? ಎನ್ನುವ ಚರ್ಚೆ ಎಲ್ಲೆಡೆ ಶುರುವಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ...

 • ಕಲಬುರಗಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ತಮ್ಮ ಪುತ್ರನನ್ನು ಪ್ರಥಮ ಸಲ ಸ್ಪರ್ಧಿಸಿದ್ದ...

 • ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 2019-2024ನೇ ಸಾಲಿನ ಅಧ್ಯಕ್ಷರಾಗಿ ಸಿದ್ದಣ್ಣ ಬಸಣ್ಣ ಸಿಕೇದ್‌ ಕೋಳಕೂರ, ಉಪಾಧ್ಯಕ್ಷರಾಗಿ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...