ನಿಜಾಮರ ವಿರುದ್ಧದ ಹೋರಾಟ ರೋಮಾಂಚನಕಾರಿ

Team Udayavani, Aug 13, 2018, 11:34 AM IST

ಕಲಬುರಗಿ: ನಿಜಾಮರ ನಾಡಿನಲ್ಲಿ ನಡೆದ ಸ್ವಾತಂತ್ರ್ಯಾ ಹೋರಾಟ ಹಾಗೂ ಏಕೀಕರಣ ಚಳವಳಿ ಇತಿಹಾಸ ಮೈನವಿರೇಳಿಸುವ ಒಂದು ರೋಚಕ ಕಥೆ. ಹೈಕ ಭಾಗವನ್ನು ನಿಜಾಮನ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸಲು ಅನೇಕರು ತ್ಯಾಗ-ಬಲಿದಾನ ಮಾಡಿದ್ದಾರೆ. ಅವರ ಸ್ಮರಣೆ ನಿರಂತರ ನಡೆಯಲಿ ಎಂದು ಕರ್ನಾಟಕ ಗೃಹ ರಕ್ಷಕ ದಳದ ಕಮಾಂಡೆಂಟ್‌ ಸಂತೋಷ ಪಾಟೀಲ ಸರಡಗಿ ಹೇಳಿದರು.

ಭಾರತೀಯ ವಿದ್ಯಾ ಕೇಂದ್ರದಲ್ಲಿ ಸ್ವಾತಂತ್ರ್ಯೊತ್ಸವ ಸವಿನೆನಪಿಗಾಗಿ ವಿಶ್ವಜ್ಯೋತಿ ಪ್ರತಿಷ್ಠಾನ, ಶಿರಪುರ ಪ್ರಕಾಶನ, ಕನ್ನಡನಾಡು ಲೇಖಕರ ಹಾಗೂ ಓದುಗರ ಸಹಕಾರ ಸಂಘದ ಸಹಯೋಗದೊಂದಿಗೆ ಕಳೆದ 10 ದಿನಗಳಿಂದ ನಡೆಸಲಾಗುತ್ತಿರುವ ಸ್ವಾತಂತ್ರ್ಯೊಕ್ಕಾಗಿ… ಸಾವಿರದ ಹೋರಾಟಗಾರರ ಸರಣಿ ಉಪನ್ಯಾಸ ಮಾಲಿಕೆ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ ಮಾತನಾಡಿ, ಸ್ವಾತಂತ್ರ್ಯೊ ಹೋರಾಟಗಾರ ಜಗನ್ನಾಥರಾವ್‌ ಚಂಡ್ರಿಕಿ
ಹೈಕ ಜನರ ಮನ ಗೆದ್ದ ನಾಯಕರಾಗಿದ್ದರು. ಇವರು ಕೇವಲ ಒಬ್ಬ ವ್ಯಕ್ತಿಯಾಗಿರದೇ ಹೈಕ ಭಾಗದ ಶಕ್ತಿಯಾಗಿದ್ದರು.
ದೇಶಪ್ರೇಮಿ, ಗಾಂಧೀವಾದಿ ಹಾಗೂ ನೇರ-ನುಡಿಯನ್ನು ಅಳವಡಿಸಿಕೊಂಡಿದ್ದ ಇವರು ಇಂದಿನ ಪೀಳಿಗೆಗೆ ಆದರ್ಶರು
ಎಂದರು. ಭಾರತೀಯ ವಿದ್ಯಾ ಕೇಂದ್ರದ ಚನ್ನವೀರಪ್ಪ ಗುಡ್ಡಾ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ , ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ಪರಮೇಶ್ವರ ಶಟಕಾರ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ರಾಜಶೇಖರ ಯಾಳಗಿ, ಸವಿತಾ ಪಾಟೀಲ ಸೊಂತ, ಜ್ಯೋತಿ ಹಿರೇಮಠ, ಪ್ರಭುಲಿಂಗ ಯಳವಂತಗಿ ಹಾಜರಿದ್ದರು. ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಸಹಕಾರದಿಂದ ಸಂಗೀತ ಕಲಾವಿದ ಮಹೇಶಕುಮಾರ ಬಡಿಗೇರ ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪುಸ್ತಕ ಪದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಿತ್ತಾಪುರ: ವಿದ್ಯಾರ್ಥಿಗಳು ಹಾಗೂ ಯುವಸಮೂಹದ ಜ್ಞಾನ ಭಂಡಾರ ಹೆಚ್ಚಿಸುವ ಉದ್ದೇಶ ಹೊಂದಿದ ಗ್ರಂಥಾಲಯಗಳು ಸದ್ದಿಲ್ಲದೆ ಮುಚ್ಚುತ್ತಿವೆ.ಗ್ರಾಪಂ ಖರ್ಚು-ವೆಚ್ಚದಲ್ಲಿ...

  • ವಾಡಿ: ಸಾಮ್ರಾಟ್‌ ಅಶೋಕನ ಕಾಲದ್ದು ಎನ್ನಲಾದ ಸನ್ನತಿ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಅಭಿವೃದ್ಧಿ ಹೊಂದುವಲ್ಲಿ ಹಿನ್ನೆಡೆಯುಂಟಾಗಿದೆ. ಇದು ಇಲ್ಲಿನ ಜನಪ್ರತಿನಿಧಿ ಗಳು...

  • ಕಲಬುರಗಿ: ರಾಷ್ಟ್ರೀಯ ಪರಿಷ್ಕೃತ ಲಸಿಕಾ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಡಿ.11ರಿಂದ 31ರ ವರೆಗೆ ಡಿಫ್ಟಿರಿಯಾ...

  • ಕಲಬುರಗಿ: ಕಳೆದ ವರ್ಷದ ಬೆಳೆವಿಮೆ ಮಂಜೂರಾತಿ ತಾರತಮ್ಯ ಈ ವರ್ಷ ಪುನರಾವರ್ತನೆಯಾಗುವುದನ್ನು ತಪ್ಪಿಸಲು, ಸಮರ್ಪಕವಾಗಿ ರೈತರಿಗೆ ಬೆಳೆವಿಮೆ ಸಿಗುವ ನಿಟ್ಟಿನಲ್ಲಿ...

  • ಕಲಬುರಗಿ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಅವರು ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಹೊರಹೊಮ್ಮಿ ದೇಶದ ಸಂಸ್ಕೃತಿ ಎತ್ತಿ ಹಿಡಿಯುವಂತೆ ಆಗಬೇಕೆಂದು ಕನ್ನಡ...

ಹೊಸ ಸೇರ್ಪಡೆ

  • ಬೀದರ್‌: ಅಪ್ಪಟ ಗ್ರಾಮೀಣ ಪ್ರತಿಭೆ, ಮಾಡೆಲಿಂಗ್‌ ಲೋಕದಲ್ಲಿ ಹೆಜ್ಜೆಯನ್ನಿಟ್ಟಿರುವ ಜಿಲ್ಲೆಯ ಧುಮ್ಮನಸೂರು ಗ್ರಾಮದ ಬೆಡಗಿ ನಿಶಾ ತಾಳಂಪಳ್ಳಿ ಈಗ "ಮಿಸ್‌ ಇಂಡಿಯಾ...

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...