ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ
Team Udayavani, Jun 25, 2022, 9:46 AM IST
ಚಿತ್ತಾಪುರ: ಪಟ್ಟಣದಲ್ಲಿ ಹಾಡುಹಗಲೇ ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯಿತ ಯುವ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಮುಖಂಡರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ಬಸವೇಶ್ವರ ಮೂರ್ತಿ ಮುಖಕ್ಕೆ ಕಪ್ಪು ಮತ್ತು ಕೆಂಪು ಬಟ್ಟೆ ಕಟ್ಟಿ ಅವಮಾನಿಸಿದ ಕೃತ್ಯವನ್ನು ಕಟುವಾಗಿ ಖಂಡಿಸಲಾಗುವುದು ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ಇನ್ನುಳಿದ ಕಿಡಿಕೇಡಿಗಳನ್ನು ತಕ್ಷಣವೇ ಬಂಧಿಸಿ ಅವರನ್ನು ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಕದಡಿಸಿದವರನ್ನು ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ರಾಜ್ಯ ಸಮಿತಿ ಸದಸ್ಯ ಶ್ರೀಧರ ನಾಗನಹಳ್ಳಿ, ಪ್ರಧಾನ ಕಾರ್ಯದರ್ಶಿ ಸುನೀಲ ಮಹಾಗಾಂವಕರ್, ಜಿಲ್ಲಾ ಸಂಚಾಲಕರಾದ ಸತೀಶ ಮಾಹೂರ, ಅವಿನಾಶ ಅರಳಿ, ಗುರುರಾಜ ಅಂಬಾಡಿ, ಮಲ್ಲಿಕಾರ್ಜುನ ಕೊಂಡದ್, ತಾಲೂಕು ಅಧ್ಯಕ್ಷ ಮಹೇಶ ಬಾಳಿ, ಮುಖಂಡರಾದ ಗುರುರಾಜ ಸುಂಟನೂರ, ನಾಗರೆಡ್ಡಿ ಗೋಪಸೇನ್, ಆನಂದ ಪಾಟೀಲ ನರಬೋಳ, ಶಂಭು ದಿಗ್ಗಾಂವ, ಮಲ್ಲಿನಾಥ ಅವಂಟಿ, ಹನುಮಾನ ವ್ಯಾಸ್, ರವಿ ಪಡ್ಲಾ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಲಮಟ್ಟಿ ಶಾಸ್ತ್ರೀ ಜಲಾಶಯದ ಪ್ರವಾಹ ನಿರ್ವಹಣೆಗೆ ಮಹಾ ಸಿ.ಎಂ. ಶ್ಲಾಘನೆ : ಕೋಳಕೂರ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ
ಅಕ್ರಮ ಹುಲಿ ಉಗುರು ಮಾರಾಟಕ್ಕೆ: ಇಬ್ಬರ ಬಂಧನ
ಮೂಡಿಗೆರೆ: ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ
ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ