ಎಸ್‌ಬಿಆರ್‌ಗೆ ರಾಜ್ಯಕ್ಕೆ 10ನೇ ಸ್ಥಾನ


Team Udayavani, May 1, 2018, 12:12 PM IST

gul-1.jpg

ಕಲಬುರಗಿ: ಈ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಿಯು (ಎಸ್‌ಬಿಆರ್‌) ಕಾಲೇಜಿಗೆ ಪ್ರತಿವರ್ಷದಂತೆ ಪ್ರಸಕ್ತ ಪಿಯುಸಿ ಫಲಿತಾಂಶದಲ್ಲಿ ಮತ್ತೆ ದಾಖಲೆ ಫಲಿತಾಂಶ ಬಂದಿದೆ. ಇಡೀ ಹೈದ್ರಾಬಾದ ಕರ್ನಾಟಕವೇ ಹುಬ್ಬೇರಿಸುವಂತೆ 298 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ನಾಗರಾಜ ಬಗಲಕರ್‌ 588 ಅಂಕ ಪಡೆದು ಜಿಲ್ಲೆಗೆ ಟಾಪರ್‌ ಹಾಗೂ ರಾಜ್ಯಕ್ಕೆ 10 ಸ್ಥಾನ ಪಡೆದಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾನೆ.

ನಾಗರಾಜ ಕನ್ನಡದಲ್ಲಿ 94, ಇಂಗ್ಲಿಷದಲ್ಲಿ 97, ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರದಲ್ಲಿ 100, ಗಣಿತದಲ್ಲಿ 99 ಹಾಗೂ ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾನೆ. ಕಾಲೇಜಿನಲ್ಲಿ ಅತ್ಯುತ್ತಮ ಬೋಧನೆ ಹಾಗೂ ಕಾಲಾನುಕಾಲ ಅವಶ್ಯಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾ ಸೂಕ್ತ ಮಾರ್ಗದರ್ಶನ ನೀಡಿದ್ದೇ ಟಾಪರ್‌ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

298 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ದಲ್ಲಿ ಪಾಸಾಗಿದ್ದರೆ 378 ವಿದ್ಯಾರ್ಥಿಗಳು ಪ್ರಥಮ ದರ್ಜೆ, 39 ದ್ವಿತೀಯ ದರ್ಜೆ ಹಾಗೂ ಕೇವಲ 08 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ. 96ರಷ್ಟು ಫಲಿತಾಂಶ ಬಂದಿದೆ. 

ಕಾಲೇಜಿನ ಭುವನೇಶ್ವರಿ ಗುಂಡದ್‌, ಅನುಷಾ ಆರ್‌. ಪಾಟೀಲ 586 ಅಂಕ, ಲುಬಾ ಹಾಗೂ ಭಾಗ್ಯಶ್ರೀ ಎಸ್‌. ಬಿರಾದಾರ 585 ಅಂಕ ಪಡೆದಿದ್ದರೆ, ಸಹನಾ ಎಚ್‌. 585 ಅಂಕಗಳನ್ನು ಪಡೆದು ತದನಂತರದ ಟಾಪರ್‌ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಭೌತಶಾಸ್ತ್ರದಲ್ಲಿ 15, ರಸಾಯನಶಾಸ್ತ್ರದಲ್ಲಿ 24, ಗಣಿತದಲ್ಲಿ 27 ಹಾಗೂ ಜೀವಶಾಸ್ತ್ರದಲ್ಲಿ 04 ಹಾಗೂ ಎಲೆಕ್ಟ್ರಾನಿಕ್ಸ್‌ 04, ಗಣಕಶಾಸ್ತ್ರ 02 ಹಾಗೂ ಹಿಂದಿ ವಿಷಯದಲ್ಲಿ 03 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ಸೌಮ್ಯ ಎ. ಹಿರೇಮಠ 583, ಸ್ಫೂರ್ತಿ ಎಸ್‌ 581, ಸೀಮಾ ಫಾತೀಮಾ 580, ಕಾವ್ಯ ಎ. ಪಠಾಣ 579, ಪ್ರೇರಣಾ ಭರತ 579, ಸಂಗಮೇಶ ಬಬಲೇಶ್ವರ 579, ಸುಷ್ಮಾ ಎಸ್‌. ಜೆ 579, ಭಾಗ್ಯಶ್ರೀ ಧೂಳಪ್ಪ 578, ಹರ್ಷಾ ಗುಡೇದ್‌ 578, ವಿದ್ಯಾಸಾಗರ ಪಾಟೀಲ 578, ಅಬುಲಖೈರ್‌ 577, ಅಂಜಲಿ ಆಕಾಶಕೋರೆ 577, ಅಹ್ಮದಿ ಶಕೀಲ್‌ ಖಾನ್‌ 574, ಅರ್ಪಿತಾ ಅರುಣಕುಮಾರ 574, ನಿರಂಜನ್‌ ಬೀರನಳ್ಳಿ 574, ಪ್ರಶಾಂತ ಎನ್‌. ಸೂರೆ 573, ಶ್ರೀಪ್ರಿಯಾ ಕುಲಕರ್ಣಿ 573, ಧೂಳಪ್ಪ ನಾಗಣ್ಣ 572, ನಿಷ್ಠಾ ಸೌಶೆಟ್ಟಿ 572, ರೋಹನ ಪ್ರಭುಜರಾಜ 572, ಸೌಜನ್ಯ ಆರ್‌. ಬಿರಾದಾರ 572, ಸೌಮ್ಯ ಆರ್‌. ಬಿರಾದಾರ 572, ಸುಷ್ಮಾ ವೈಜನಾಥ 572, ಸುರೇಖಾ ಬಿ. ಪಾಟೀಲ 571, ಅಪೂರ್ವ ಎಸ್‌. ಜಿಂದೆ 570, ಮಂಜುನಾಥ ಎಸ್‌. ನಾಗಶೆಟ್ಟಿ 570, ನಿರಜಾ ಸಿ. ಕಲಬುರಗಿ 570, ರಹೀಲ್ಲಾ ತಾಷ್ಕಿನ್‌ 570, ಸ್ಮಿತಾ ಮೈನಾಳೆ 570, ಶ್ರೀರಾಮ ಕಡಗಿ 570 ಅಂಕಗಳನ್ನು ಪಡೆದಿದ್ದಾರೆ. 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.