ಕುಲಪತಿ ಇಲ್ಲದೇ ಬೀದರ ಪಶು ವಿವಿ ಅನಾಥ!


Team Udayavani, Dec 26, 2017, 10:32 AM IST

55828_Capture.JPG-cvr-image-after-ml..jpg-edt-after.jpg

ಬೀದರ: ಸರ್ಕಾರದ ನಿಷ್ಕಾಳಜಿತನದ ಪರಿಣಾಮ ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ಒಂದೂವರೆ ವರ್ಷದಿಂದ ಖಾಲಿ ಉಳಿದಿದೆ. ಹಿಂದೆ ನೇಮಕಾತಿ ಅಕ್ರಮ, ಅವ್ಯವಹಾರಗಳಿಂದ ಚರ್ಚೆಗೆ ಒಳಗಾಗುತ್ತಿದ್ದ ವಿವಿ ಈಗ ಕಾಯಂ ಕುಲಪತಿ ಇಲ್ಲದೇ ಮತ್ತೆ ಸುದ್ದಿಯಲ್ಲಿದೆ.

ಜಾನುವಾರುಗಳ ಆರೋಗ್ಯ ಸಂಶೋಧನೆ ಚಟುವಟಿಕೆಗಳು ನಡೆಯುವುದರಿಂದ ಪಶು ವಿಶ್ವವಿದ್ಯಾಲಯ ಅತಿ ಮಹತ್ವದ್ದಾಗಿದ್ದರೂ ಅದರ ಮುಖ್ಯ ಹುದ್ದೆಯಾಗಿರುವ ಕುಲಪತಿ ಸ್ಥಾನ ತುಂಬುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತಿದೆ. 2016ರ ಸೆ.22ರಂದು ಕುಲಪತಿ ಪ್ರೊ| ರೇಣುಕಾಪ್ರಸಾದ ನಿವೃತ್ತಿ ನಂತರ ಈ ಸ್ಥಾನಕ್ಕೆ ಯಾರೊಬ್ಬರನ್ನು ಇದೂವರೆಗೆ ನೇಮಿಸಿಲ್ಲ.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಆರ್‌.ವಿ. ಪ್ರಸಾದ ಅವರನ್ನು ಪ್ರಭಾರಿ ಕುಲಪತಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ. ರಾಜ್ಯದ ಏಕೈಕ ಪಶು ವಿವಿ ವ್ಯಾಪ್ತಿಯಲ್ಲಿ ಒಟ್ಟು 7 ಮಹಾವಿದ್ಯಾಲಯಗಳು ಮತ್ತು 2 ಪಾಲಿಟೆಕ್ನಿಕ್‌ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ನಿರ್ವಹಣೆ ಜವಾಬ್ದಾರಿ ಕುಲಪತಿಗಳ ಮೇಲಿದೆ.
 
ಆದರೆ, ಮಹತ್ವದ ಹುದ್ದೆಯನ್ನೇ ಸರ್ಕಾರ ಖಾಲಿ ಇರಿಸಿರುವ ವಿಷಯ ಗಂಭೀರವಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟದ ಜತೆಗೆ ಹುದ್ದೆಗಳ ಭರ್ತಿ ಸೇರಿದಂತೆ ಕಾನೂನಾತ್ಮಕ ವಿಷಯಗಳ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಆಡಳಿತ ಕಾರ್ಯವೈಖರಿ ಮೇಲೂ ಹೊಡೆತ ಬಿದ್ದಿದೆ.

ಕುಲಪತಿಗಳ ಹುದ್ದೆಗಾಗಿ ಪಶು ವೈದ್ಯಕೀಯ ಮತ್ತು ಸಂಗೋಪಾಲನಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ಶೋಧನಾ ಸಮಿತಿಗೆ ಪ್ರೋಫೆಸರ್‌ಗಳಿಂದ 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಶೋಧನಾ ಸಮಿತಿಯು ಸಮಯಕ್ಕೆ ಸಭೆಗಳನ್ನು ನಡೆಸದೇ ಮುಂದೂಡುತ್ತ ಬಂದಿದ್ದೇ ಕುಲಪತಿಗಳ ಹುದ್ದೆ ನೇಮಕಾತಿ ವಿಳಂಬಕ್ಕೆ ಕಾರಣವಾಗಿತ್ತು.

ಮೂಲಗಳ ಪ್ರಕಾರ ಶೋಧನಾ ಸಮಿತಿ ನ.29ರಂದು ಸಭೆ ನಡೆಸಿ ಅರ್ಜಿಗಳ ಪರಿಶೀಲನೆ ನಡೆಸಿದ್ದು, ಐದು ಜನರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿದೆ. ಈ ಪಟ್ಟಿಯಲ್ಲಿ ಡಾ|ಎಚ್‌. ಎಂ ಜಯಪ್ರಕಾಶ, ಪ್ರೊ| ಶಿವಾನಂದ ಮೂರ್ತಿ, ಡಾ|ಎಸ್‌.ಯತಿರಾಜ್‌, ಪ್ರೊ| ಶಿವಶಂಕರ ಉತ್ತರಗಿ, ಎಚ್‌.ಟಿ. ನಾರಾಯಣಸ್ವಾಮಿ ಅವರ ಹೆಸರು ಸೇರಿವೆ ಎನ್ನಲಾಗುತ್ತಿದೆ. ಆದರೆ, ಸರ್ಕಾರ ಈ ಪೈಕಿ ಮೂವರು ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಿದ್ದು, ಈ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.

ಸತ್ಯಶೋಧನಾ ಸಮಿತಿಯ ವಿಳಂಬ ಧೋರಣೆ ಬಳಿಕ ಈಗ ಸರ್ಕಾರದ ಮಟ್ಟದಲ್ಲಿ ತಡ ಆಗುತ್ತಿದೆ. ಮಹತ್ವದ ಹುದ್ದೆಗಾಗಿ ಪ್ರಬಲ ಪೈಪೋಯೂ ನಡೆಯುತ್ತಿರುವುದು ಸಹ ಮೂವರ ಹೆಸರು ಅಂತಿಮಗೊಳ್ಳುವಲ್ಲಿ ವಿಳಂಬ ಆಗುತ್ತಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರ ನೇಮಕಾತಿ ಪ್ರಕ್ರಿಯೆ ಮುಗಿಸಬೇಕಿದೆ.
 
ವಾರದಲ್ಲಿ ಪ್ರಕ್ರಿಯೆ ಪೂರ್ಣ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿಯಲ್ಲಿ ಸಾಕಷ್ಟು ವಿಳಂಬ ಆಗಿದ್ದು, ಇದರಿಂದ ವಿವಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸತ್ಯಶೋಧನಾ ಸಮಿತಿಯು ಐದು ಜನರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪೈಕಿ ಅಂತಿಮವಾಗಿ ಮೂವರ ಹೆಸರು ರಾಜ್ಯಪಾಲರಿಗೆ ಶಿಫಾರಸು ಆಗಬೇಕಿದೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.  ಮಲ್ಲಿಕಾರ್ಜುನ ಬಿರಾದಾರ, ಆಡಳಿತ ಮಂಡಳಿ ಸದಸ್ಯ, ಪಶು ವಿವಿ, ಬೀದರ

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13thefting

ಕಲಬುರಗಿ: ಅಂಗಡಿಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ಸೆರೆ

11karnataka

ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ

10thefts

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

9sheeps

ಹಳ್ಳದ ನೀರು ಕುಡಿದು 10 ಕುರಿ ಸಾವು

8road

ಯಡ್ರಾಮಿ ತಾಲೂಕಾದ್ರೂ ಸುಧಾರಿಸಿಲ್ಲ ರಸ್ತೆ ಸ್ಥಿತಿ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.