ದಿಗ್ಗಾಂವ ಜಗಳಕ್ಕೆ ರಾಜಕೀಯ ಬಣ್ಣ ಬೇಡ
Team Udayavani, Apr 22, 2022, 11:56 AM IST
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಕಳೆದ ಏ.16ರಂದು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದಲಿತರ ನಡುವೆ ನಡೆದ ಜಗಳ ತಿಳಿಗೊಳಿಸುವ ಬದಲು ಮತ್ತಷ್ಟು ದ್ವೇಷದ ಭಾವನೆ ಬಿತ್ತಿ ರಾಜಕೀಯ ಮಾಡುತ್ತಿರುವ ಸಮಾಜ ಸೇವಕ ಮಣಿಕಂಠ ರಾಠೊಡ ನಡೆ ಖಂಡನೀಯ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ಆನಂದ ಕಲ್ಲಕ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಮದುವೆ ಕಾರ್ಯಕ್ರಮವೊಂದಕ್ಕೆ ದಿಗ್ಗಾಂವಗೆ ಹೋದಾಗ ದಲಿತ ಮಹಿಳೆಯರು ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದರು. ಸಮಸ್ಯೆ ಬಗೆಹರಿಸಲು ಶಾಸಕರು ಸ್ಪಂದಿಸಿ ಹೋಗಿದ್ದರು. ಅವರು ಹೋದ ನಂತರ ವೈಯಕ್ತಿಕ ಕಾರಣಕ್ಕೆ ದಲಿತರ ನಡುವೆ ಗಲಾಟೆ ನಡೆದಿತ್ತು. ಇದನ್ನೇ ಮುಂದಿಟ್ಟುಕೊಂಡು ಕೆಲ ಬಿಜೆಪಿ ಮುಖಂಡರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ, ದಿಗ್ಗಾಂವ ಗ್ರಾಮದಲ್ಲಿ ನಡೆದ ದಲಿತರ ವೈಯಕ್ತಿಕ ಜಗಳದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ ಹೆಸರು ಪ್ರಸ್ತಾಪಿಸಿ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರ ನೀತಿಯನ್ನು ಖಂಡಿಸಿದರು.
ಈಗಾಗಲೇ ಶಾಸಕ ಪ್ರಿಯಾಂಕ್ ಖರ್ಗೆ ಕುಡಿಯುವ ನೀರು ಮತ್ತು ಸಾರ್ವಜನಿಕ ಶೌಚಾಲಯ ಸಮಸ್ಯೆಗೆ ಸ್ಪಂದಿಸಿ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿದ್ದಾರೆ. ಮುಖಂಡರಾದ ಮಣಿಕಂಠ ರಾಠೊಡ ಅವರು ನಮ್ಮ ಸಮಾಜದ ಮಧ್ಯೆ ಬರುವ ಅವಶ್ಯಕತೆ ಇಲ್ಲ ಎಂದರು.
ಡಿಎಸ್‌ಎಸ್ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ದೇವಿಂದ್ರ ಕುಮಸಿ, ಶ್ರೀಕಾಂತ ಸಿಂಧೆ, ಜಗನ್ನಾಥ ಮುಡಬೂಳಕರ್, ಸಂಜಯ ಬುಳಕರ್, ಲೋಹಿತ್ ಮುದ್ದಡಗಿ, ವಿಶ್ವನಾಥ ಬಿದಿಮನಿ, ರವಿಸಾಗರ ಹೊಸಮನಿ, ಬಸವರಾಜ ಮುಡಬೂಳ, ಸೂರಜ್ ಕಲ್ಲಕ್, ಶರಣು ತಲಾಟಿ, ಪರಶುರಾಮ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು