ತ್ರಿವಳಿ ತಲಾಖ್‌-ಹಸ್ತಾಕ್ಷರ ಅಭಿಯಾನ: ಚುಲ್‌ಬುಲ್‌

Team Udayavani, Nov 3, 2017, 10:15 AM IST

ಕ‌ಲಬುರಗಿ: ತ್ರಿವಳಿ ತಲಾಖ್‌ಗೆ ಸಂಬಂಧಪಟ್ಟಂತೆ ದೇಶದಲ್ಲಿರುವ ಎಲ್ಲ ಮುಸ್ಲಿಂ ಪುರುಷರು ಮತ್ತು ಮಹಿಳೆಯರು
ಹಸ್ತಾಕ್ಷರದ ಅಭಿಯಾನ ನಡೆಸಿ ಜತೆಗೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ನಿರ್ಣಯ ಕೈಗೊಂಡು ರಾಷ್ಟ್ರಪತಿ,
ಪ್ರಧಾನಮಂತ್ರಿ, ಕಾನೂನು ಸಚಿವಾಲಯ, ಕಾನೂನು ಅಯೋಗಕ್ಕೆ ಸಲ್ಲಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿ ಸದಸ್ಯರಾಗಿರುವ ಕುಡಾ ಅಧ್ಯಕ್ಷ ಮೊಹಮ್ಮದ ಅಸಗರ ಚುಲ್‌ಬುಲ್‌ ಹೇಳಿದರು.

ಹಜ್‌ ಸಮಿತಿ ನಗರದ ನಯಾಮೋಹಲ್ಲಾದಲ್ಲಿ ನಡೆದ ಸಲಹಾ ಸಭೆ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ಭೋಪಾಲ ರಾಜಧಾನಿಯಲ್ಲಿ ನಡೆದ ಕಾನೂನು ಮಂಡಳಿ ಸಭೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ಆರು ತಿಂಗಳೊಳಗೆ ತ್ರಿವಳಿ ತಲಾಖ್‌ ಬಗ್ಗೆ ಕಾನೂನು ರೂಪಿಸಬೇಕೆಂಬ ಆದೇಶದ ಪ್ರಕಾರದ ಹಿನ್ನೆಲೆಯಲ್ಲಿ ಹಸ್ತಾಕ್ಷರದ ಅಭಿಯಾನ ನಿರ್ಣಯಿಸಲಾಗಿದೆ ಎಂದು ವಿವರಿಸಿದರು. ದೇಶದ ಸಂವಿಧಾನದಲ್ಲಿ ತಮ್ಮ-ತಮ್ಮ ಧರ್ಮಾನುಸಾರ ಜೀವನ ನಡೆಸಬೇಕೆಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ವಿನಾಕಾರಣ ಶರಿಯತ್‌ ನಲ್ಲಿ ಹಸ್ತಕ್ಷೇಪ ಮಾಡಲು ಹುನ್ನಾರ ನಡೆಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕಲಬುರಗಿ ಜಿಲ್ಲೆ ಸೇರಿದಂತೆ ಹೈದ್ರಾಬಾದ್‌ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹಸ್ತಾಕ್ಷರ ನಡೆಸುವ ಕುರಿತಾಗಿಸ ಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಧರ್ಮದ ವಿವಿಧ ಮುಖಂಡರು ಹಾಜರಿದ್ದರು. ಡಾ| ಹಬೀಬ ರೆಹಮಾನ್‌, ಮೌಲಾನಾ ನೂಹ್‌, ಮೌಲಾನಾ ಇಸ್ಮಾಯಿಲ್‌ ಮುದ್ದಸೀರ, ಮೌಲಾನಾ ಅತೀಕ ಅಹ್ಮದ, ಮೌಲಾನಾ ಶಫಿ, ಅಬ್ದುಲ್‌ ಜಬ್ಟಾರ ಮಾತನಾಡಿದರು. ಅಣ್ಣಾನಾದ ಮೋತಿ ಸೇಠ್, ಪಾಲಿಕೆ ಸದಸ್ಯರಾದ ಇಸ್ಮಾಯಿಲ್‌ ಪಲ್ಲಂ, ಅಜಮ್‌ ಪಟೇಲ್‌, ಹಬೀಬಕೌಸ್‌, ಎಜಾಜ್‌ ಅಹ್ಮದ, ಶಫಿ ಹುಂಡೇಕಾರ್‌, ಸಲೀಮ್‌ ಸಿದ್ಧಿಕಿ, ವಲಿ ಅಹ್ಮದ, ಖಾಜಾ ಪಾಶಾ, ಮಖಬೂಲ ಸಗರಿ ಮುಂತಾದವರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ