Udayavni Special

ಯಾನಾಗುಂದಿ ಟ್ರಸ್ಟ್ ನಡಿ ಎರಡೂವರೆ ಕೋಟಿ ಆಸ್ತಿ


Team Udayavani, Mar 22, 2021, 9:54 PM IST

ಹಜ್ಗಜ್ಗಹಜ

ಸೇಡಂ: ಶ್ರೀಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಟ್ರಸ್ಟ್‌ನಡಿ 2.53 ಕೋಟಿ ರೂ. ನಗದು ಇದೆ ಎಂದು ಟ್ರಸ್ಟ್‌ ಖಜಾಂಚಿ, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ ತಿಳಿಸಿದ್ದಾರೆ.

ತಾಲೂಕಿನ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಟ್ರಸ್ಟ್‌ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆಸ್ತಿಯ ವಿವರ ಕೇಳುತ್ತಿದ್ದಾರೆ. ಇದರು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಟ್ರಸ್ಟ್‌ನಡಿ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶಯದಂತೆ ಆಸ್ಪತ್ರೆ, ಮೆಡಿಕಲ್‌ ಹಾಗೂ ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಟ್ಟಿನಲ್ಲಿ ಹಲವಾರು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ನೀಡುವಂತೆ ಕೋರಲಾಗಿದೆ.

ಆದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿ ಸಿಲ್ಲ ಎಂದು ತಿಳಿಸಿದರು. ಟ್ರಸ್ಟಿ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ ಮಾತನಾಡಿ, ಟ್ರಸ್ಟ್‌ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ಧಾರೆ. ಟ್ರಸ್ಟ್‌ನಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಮುಂದಿನ ದಿನಗಳಲ್ಲಿ ಸಭೆ ಸೇರಿ ಎಲ್ಲರೂ ಒಟ್ಟಾಗಿ ಸೇರಿ ಪರಿಹರಿಸಿಕೊಳ್ಳಲಾಗುವುದು ಎಂದರು. ಮಾಜಿ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮಾತಾ ಮಾಣಿಕೇಶ್ವರಿ ಆಶ್ರಮಕ್ಕೆ ಭಕ್ತರೇ ದೊಡ್ಡವರು. ಟ್ರಸ್ಟ್ ನವರ ಮನಪರಿವರ್ತನೆ ಆಗಬೇಕು. ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ ಪರಿವರ್ತನೆ ಆಗಬೇಕು.

ಅಮ್ಮನವರ ಮಾರ್ಗದರ್ಶನದಲ್ಲಿ ಟ್ರಸ್ಟ್‌ ಮುನ್ನಡೆಸಿಕೊಂಡು ಹೋಗುತ್ತಿರುವ ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ ಪರಿವರ್ತನೆಯಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈಗಿರುವ ಟ್ರಸ್ಟ್‌ ರದ್ದುಪಡಿಸಿ, ಹೊಸ ಟ್ರಸ್ಟ್‌ ರಚಿಸಿ ಹೊಸ ಅಭಿವೃದ್ಧಿಪರ ಮುಖಗಳಿಗೆ ಅವಕಾಶ ಕೊಡಬೇಕು ಎಂದು ಹೇಳಿದರು. ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ, ಮೌಲಾಲಿ ಅನಪುರ, ಮಂದಾರ ನಾರಾಯಣಪೇಟ, ಹಣಮಂತ ಮಡ್ಡಿ, ಶಿವರಾಮರೆಡ್ಡಿ, ಜಗಜೀವನರೆಡ್ಡಿ, ಜ್ಞಾನೇಶ್ವರ ಹೈದ್ರಾಬಾದ್‌, ಬಸವರಾಜಪ್ಪ ದರ್ಶನಾಪುರ, ಕಿಷ್ಟಪ್ಪ ಮಾಸ್ತರ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgtgte

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್

hfghyhtr

ಕೋವಿಡ್ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಬಿಚ್ಚಿಟ್ಟ ನಟಿ ಅನುಪ್ರಭಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus

ಸರಿ ದಾರಿಗೆ ಬಂದ ಈಶಾನ್ಯ ಸಾರಿಗೆ

cooli

ಖಾತ್ರಿ ಸ್ಥಳದಲ್ಲಿ ನೀರಿಲ್ಲ-ನೆರಳಿಲ್ಲ, ಕೋವಿಡ್‌ ನಿಯಮ ಪಾಲನೆಯೂ ಇಲ್ಲ

dgtgte

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್

ಮನಬವಚಷಗ

ಸ್ವಯಂ ಲಾಕ್‌ ಡೌನ್‌ ಗೆ ಸಂಘ-ಸಂಸ್ಥೆಗಳ ನಿರ್ಧಾರ

,ಮನಬವಚದಸದವ

48 ಕೊರೊನಾ ಹೆಲ್ಪ್ ಡೆಸ್ಕ್ ಸ್ಥಾಪನೆ : ಡಿಸಿ ಜ್ಯೋತ್ಸ್ನಾ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

22-23

ತರಾಸು ಜಯಂತಿ ಸರ್ಕಾರಿ ಆಚರಣೆಯಾಗಲಿ

22-22

ಈ ಬಾರಿಯೂ ಸರಳ ರಾಮನವಮಿ

Value_US_Degree

ಶಾಲೆಗೆ ಚಕ್ಕರ್‌ ಹೊಡೆದ ಸಾಹಸಗಾಥೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.