ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ
Team Udayavani, May 26, 2020, 8:57 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಲಬುರಗಿ: ಮಹಾರಾಷ್ಟ್ರದ ಮುಂಬೈನಿಂದ ಬಂದು ಕ್ವಾರಂಟೈನ್ ಆಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ನಡೆದಿದೆ.
ಉದ್ಯೋಗ ಅರಸಿ ಮುಂಬೈಗೆ ಹೋಗಿದ್ದ ಬಾಲಕಿ ಲಾಕ್ ಡೌನ್ ಕಾರಣ ಮೇ 17ರಂದು ಮರಳಿ ಬಂದಿದ್ದಳು. ಕೋವಿಡ್-19 ಸೋಂಕು ಭೀತಿ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕ್ವಾರಂಟೈನ್ ಕೇಂದ್ರದಲ್ಲೇ ಬಾಲಕಿಗೆ ಹೆರಿಗೆ ಆಗಿದೆ. ಬಾಲಕಿ ಅವಿವಾಹಿತೆ ಆಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇಬ್ಬರನ್ನೂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಹಾಬಾದ್ ಪಟ್ಟಣದಲ್ಲಿ ಒಟ್ಟು 20 ಕ್ವಾರಂಟೈನ್ ಕೇಂದ್ರಗಳಿದ್ದು, 645 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದೆಡೆ ಕಾಂಗ್ರೆಸ್ ಗೆದ್ದಿದೆ: ಡಾ. ಶರಣಪ್ರಕಾಶ
HKE ಚುನಾವಣೆ: ಅಧ್ಯಕ್ಷರಾಗಿ ಶಶೀಲ್ ಜಿ. ನಮೋಶಿ ಆಯ್ಕೆ
PM ಮೋದಿ ಸಮನಾದ ನಾಯಕ ಕಾಂಗ್ರೆಸ್ನಲ್ಲಿಲ್ಲ: ಬಿಎಸ್ವೈ
Kalaburagi; ಅರ್ಧ ಗಂಟೆ ಭಾಷಣದಲ್ಲಿ ಖರ್ಗೆ ಹೆಸರನ್ನೇ ಉಲ್ಲೇಖಿಸದ ಮೋದಿ
Kalaburagi; ಕರ್ನಾಟಕದ ಜನತೆ ಕೋಪಗೊಂಡಿದ್ದಾರೆ, ಎಚ್ಚೆತ್ತುಕೊಂಡಿದ್ದಾರೆ:ಪ್ರಧಾನಿ ಮೋದಿ