Udayavni Special

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪ್ರೊ| ವಸಂತ ಕುಷ್ಟ ಗಿ ಅಸ್ತಂಗತ

Team Udayavani, Jun 5, 2021, 6:02 PM IST

ಗ್ಎಡದ್ಗ್ದಸ

ಕಲಬುರಗಿ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕಲ್ಯಾಣ ಕರ್ನಾಟಕ, ಕರುನಾಡಿನ ಮಾತೃಭಾಷೆಯ ಕರುಳು ಬಳ್ಳಿ, ಪ್ರಾಧ್ಯಾಪಕ, ಲೇಖಕ, ಸಾಹಿತಿ, ಭಾಷಾ ವಿದ್ವಾಂಸ, ಸಾಹಿತ್ಯ ಲೋಕದ ಮೇರು ಕಳಸವಾಗಿದ್ದ ಪ್ರೊ| ವಸಂತ ಕುಷ್ಟಗಿ ಶುಕ್ರವಾರ ಅಸ್ತಂಗರಾಗಿದ್ದು, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಪ್ರೊ| ವಸಂತ ಕುಷ್ಟಗಿ ಅಗಲುವಿಕೆಯಿಂದ ಸಾಹಿತ್ಯ ಲೋಕಕ್ಕೆ ದೊಡ್ಡ ಹಾನಿಯಾಗಿದೆ.

ಕಲ್ಯಾಣ ಕರ್ನಾಟಕದ ಸಾಹಿತ್ಯ, ಐತಿಹಾಸಿಕ ಹೋರಾಟಗಳು, ಚಾರಿತ್ರಿಕ ಘಟನೆಗಳ ಕುರಿತು ಅಪಾರ ಅನುಭವ ಜ್ಞಾನದಿಂದ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆ ಮೂಲಕ ರಾಷ್ಟ್ರ ಭಕ್ತಿಯ ಸುಧೆ ಹರಿಸಿದವರು ದೈವಾ  ಧೀನರಾಗಿದ್ದು ಕನ್ನಡ ಸಾಹಿತ್ಯ ಲೋಕ ಹಾಗೂ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ. ಕಲ್ಯಾಣ ಕರ್ನಾಟಕದ ಐತಿಹಾಸಿಕ ಶತಮಾನ ಕಂಡ ಪ್ರತಿಷ್ಠಿತ “ನೂತನ ವಿದ್ಯಾಲಯ’ದ ಕನ್ನಡ ಪ್ರಾಧ್ಯಾಪಕರು, ಪ್ರಾಂಶುಪಾಲರಾಗಿ ತಮ್ಮ ಜ್ಞಾನ ಜ್ಯೋತಿಯಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿ, ಶಿಕ್ಷಣ ಸಂಸ್ಥೆ ಯ ಕೀರ್ತಿಯನ್ನು ಕರುನಾಡಿನ ತುಂಬಾ ವ್ಯಾಪಿಸುವಂತೆ ಮಾಡಿ, ಮಹಾನ್‌ ಆಡಳಿತಗಾರರು ಎಂದು ಮನ್ನಣೆ ಪಡೆದಿದ್ದರು.

1995ರಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಪರಿಷ್ಕರಣೆಗೊಳಿಸಿ ಪ್ರಥಮ ಭಾಷೆಯಾದ ಕನ್ನಡದ ಪದ್ಯಭಾಗದಲ್ಲಿ ಕುಷ್ಟಗಿ ಅವರು ಬರೆದ “ಹಾರೈಕೆ’ ಮೊದಲ ಪದ್ಯವನ್ನೇ ಅಳವಡಿಸಿತ್ತು. ಈ ಕವಿತೆ ಕರುನಾಡಿನಾದ್ಯಂತ ಮನೆಮಾತಾಗಿತ್ತು. ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಲಭಿಸಿತ್ತು. ಗುಲಬರ್ಗಾ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್‌ ಪಡೆದ ಹಿರಿಯರು ಆಗಿದ್ದರು. ನಾಡಿನ ವಿದ್ವಾಂಸ ಪರಂಪರೆಯ ಹಿರಿಯ ಕೊಂಡಿ ಆಗಿದ್ದ ಕುಷ್ಟಗಿ ಲೇಖಕರಿಗೆ ಪ್ರೇರಕ ಶಕ್ತಿಯಾಗಿ ಚೈತನ್ಯ ತುಂಬಿದ್ದರು.

ಸುಮಾರು 80 ಕೃತಿಗಳನ್ನು ಸಾಹಿತ್ಯ ಸರಸ್ವತಿ ಮಡಿಲಿಗೆ ಹಾಕಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾವ್ಯ, ಹತ್ತಾರು ಲೇಖನ, ವಿಶೇಷವಾಗಿ ದಾಸಸಾಹಿತ್ಯದಲ್ಲಿ ಸಾಹಿತ್ಯ ಕೃಷಿ ಮಾಡಿದ್ದರು. ಎನ್‌. ಧಮಸಿಂìಗ್‌ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ| ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಎಂಭತ್ತರ ಇಳಿ ವಯಸ್ಸಿನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕುಷ್ಟಗಿ ಅವರ ಮನಸ್ಸು ಸದಾ ಮಿಡಿಯುತ್ತಿತ್ತು. ಇಂತಹ ಸಾಹಿತ್ಯ ದಿಗ್ಗಜಗೆ ಮತ್ಯಾರೂ ಸರಿಸಾಟಿ ಆಗಲಾರರು.

ಟಾಪ್ ನ್ಯೂಸ್

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

Jolle

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆ

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

randeep surjewala

ಸಿದ್ದು ಸಿಎಂ ಹೇಳಿಕೆ:ಜಮೀರ್, ಹಿಟ್ನಾಳ್ ಗೆ ಪರೋಕ್ಷ ಎಚ್ಚರಿಕೆ ನೀಡಿದ ಉಸ್ತುವಾರಿ ಸುರ್ಜೇವಾಲ

ಮತಾಂತರ ಜಾಲ ಬೇಧಿಸಿದ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಇಬ್ಬರ ಬಂಧನ

ಮತಾಂತರ ಜಾಲ ಬೇಧಿಸಿದ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಇಬ್ಬರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sdfgfewefgfefv

ಕೊರಳ್ಳಿ ಗ್ರಾಪಂ ಕಾರ್ಯಕ್ಕೆ ಪಾಟೀಲ ಮೆಚ್ಚುಗೆ

sdfghgfdsdfgbhnb

ಶರಣಬಸವ ಮಹಾದಾಸೋಹ ದರ್ಶನಂ ಮಹಾಕಾವ್ಯ ಬಿಡುಗಡೆ

asdcdsdfdcd

ವರ್ಷದಲೇ ವಿಮಾನ ಹಾರಾಟ ತರಬೇತಿ ಶುರು

ಯುವಕನ ಕೊಲೆ ಮಾಡಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಯುವಕನ ಕೊಲೆ ಮಾಡಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

Untitled-1

ಕಲಬುರಗಿಯ ಜಿಮ್ಸ್ ನಲ್ಲಿ ಅತ್ಯಾಚಾರ ಯತ್ನ ನಡೆಸಿದ್ದ ಆರೋಪಿಯ ಹಳೆಯ ಹೀನ ಕೃತ್ಯ ಬಯಲು

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

page

ಯೋಗ ಸಾಧಕರ ಯಶೋಗಾಥೆ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

20-kalaghatagi 1

ಜಿಗಳಿ ಕೆರೆ ಬಂಡು ಪುನರ್‌ ನಿರ್ಮಾಣ ಭರವಸೆ

20hub-dwd2

ಕಾರ್ಮಿಕರಿಗೆ ಆಹಾರ ಸಾಮಗ್ರಿ ಪೂರೈಸಲು ಕ್ರಮ

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.