ಮತದಾನದಲ್ಲಿ ವಿವಿಪ್ಯಾಟ್‌ ಯಂತ್ರ ಬಳಕೆ


Team Udayavani, Mar 29, 2018, 12:22 PM IST

gul-1.jpg

ಕಲಬುರಗಿ: ಚುನಾವಣೆ ಆಯೋಗ ದಿಂದ ಇದೇ ಮೊದಲ ಬಾರಿಗೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ವಿವಿಪ್ಯಾಟ್‌ ಯಂತ್ರ ಬಳಕೆ ಮಾಡಲಾಗುತ್ತಿದೆ. ಈ ಯಂತ್ರ ನಾವು ಯಾರಿಗೆ ಮತದಾನ ಮಾಡಿದ್ದೇವೆ ಎನ್ನುವುದನ್ನು ಖಾತ್ರಿ ಪಡಿಸುತ್ತದೆ. ಇದರಿಂದ ಮತದಾರ ಯಾರಿಗೆ ಮತ ಚಲಾಯಿಸಿದ್ದಾನೆ ಎನ್ನುವುದು ಸ್ಥಳದಲ್ಲಿಯೇ ಮತದಾರನಿಗೆ ಗೊತ್ತಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಹೇಳಿದರು.

ಬುಧವಾರ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ನಾಯಕರಿಗೆ ಮತ್ತು ಪತ್ರಕರ್ತರಿಗೆ ಇ.ವಿ.ಎಂ. ಮತ್ತು ವಿವಿಪ್ಯಾಟ್‌ ಕುರಿತು ತರಬೇತಿ ನೀಡಲು ಆಯೋಜಿಸಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿವಿಪ್ಯಾಟ್‌ ಯಂತ್ರದದಿಂದ ತಾನು ಯಾರಿಗೆ ಮತ ಚಲಾಯಿಸಿದ್ದೇನೆ ಎನ್ನುವ ಕುರಿತು ಖಾತ್ರಿ ಪಡಿಸಲು ಏಳು ಸೆಕೆಂಡ್‌ ಬ್ಯಾಲೆಟ್‌ ಚೀಟಿ
ವಿವಿಪ್ಯಾಟ್‌ನಲ್ಲಿ ಪ್ರದರ್ಶನಗೊಳ್ಳುತ್ತದೆ. ನಂತರ ಅದು ವಿವಿಪ್ಯಾಟ್‌ ಪೆಟ್ಟಿಗೆಯಲ್ಲಿ ಕತ್ತರಿಸಿ ಬೀಳುತ್ತದೆ. ವಿವಿಪ್ಯಾಟ್‌ನಲ್ಲಿ ತಾನು ಮತ ಹಾಕಿದ್ದು ಬಯಸಿದ ಅಭ್ಯರ್ಥಿಗೆ ಬಿದ್ದಿದೆಯೋ, ಬದಲಾಗಿ ಬೇರೊಬ್ಬ ಅಭ್ಯರ್ಥಿಗೆ ಮತದಾನವಾಗಿದೆ ಎಂದು ಮತದಾರ ತಿಳಿದುಕೊಳ್ಳಬಹುದು. ಹಾಗೊಂದು ವೇಳೆ ತಪ್ಪಾಗಿ ಚಲಾವಣೆ ಆಗಿದ್ದರೆ ಕೂಡಲೇ ಸ್ಥಳದಲ್ಲಿಯೇ ಇರುವ ಪ್ರಸಿಡಿಂಗ್‌ ಆಫೀಸರ್‌ಗಳ ಗಮನಕ್ಕೆ ತಂದು ಆಯೋಗಕ್ಕೆ ದೂರು ನೀಡಿದಲ್ಲಿ ಮತದಾನ ಸ್ಥಗಿತಗೊಳಿಸಲಾಗುವುದು. ಒಂದು ವೇಳೆ ಮತದಾರನ ಹೇಳಿಕೆ ಸುಳ್ಳಾಗಿದ್ದಲ್ಲಿ ಆರು ತಿಂಗಳ ಶಿಕ್ಷೆ ವಿಧಿ ಸಲು ಅವಕಾಶವಿದ್ದು, ಮತದಾರ ದೂರು ನೀಡುವ ಮುನ್ನ ಮತದಾನ ಖಾತ್ರಿ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಹೊಸ ಮಾದರಿ ಯಂತ್ರಗಳನ್ನು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷಗಳು, ಪತ್ರಕರ್ತರು, ನ್ಯಾಯವಾದಿಗಳಿಗೆ, ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಹಾಗೂ ಸಂಘ-ಸಂಸ್ಥೆಗಳಿಗೆ
ಇ.ವಿ.ಎಂ. ಮತ್ತು ವಿವಿಪ್ಯಾಟ್‌ ಯಂತ್ರಗಳ ಬಳಕೆ ಬಗ್ಗೆ ಅಣಕು ಮತದಾನ ಪ್ರದರ್ಶನದ ಮೂಲಕ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದರು. 

ನಿರ್ಭೀತಿಯ ಮತದಾನಕ್ಕೆ ಕ್ರಮ: ಈ ಹಿಂದಿನ ಚುನಾವಣೆಯ ಆಧಾರದ ಮೇಲೆ ಜಿಲ್ಲೆಯಲ್ಲಿ 77 ವಲ್ನರೇಬಲ್‌(ಭಯಮುಕ್ತ) ಮತದಾನ ಕೇಂದ್ರಗಳೆಂದು ಗುರುತಿಸಲಾಗಿರುವ ಹಿನ್ನೆಲೆಯಲ್ಲಿ ಇಂತಹ ಮತಗಟ್ಟೆಯ ವ್ಯಾಪ್ತಿಯಲ್ಲಿನ ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ 1077 ಶುಲ್ಕ ರಹಿತ ಸಹಾಯವಾಣಿ 24/7 ಕಾರ್ಯನಿರ್ವಹಿಸಲಿದೆ. ಇದಲ್ಲದೆ ವಿಧಾನಸಭಾ ಕ್ಷೇತ್ರವಾರು ಸಹ ದೂರು ಕೋಶ ಸ್ಥಾಪಿಸಲಾಗುತ್ತಿದ್ದು, ಇಲ್ಲಿಯೂ ಸಹ ಪ್ರತಿ 8 ಗಂಟೆಗೊಮ್ಮೆ 2 ಸಿಬ್ಬಂದಿಗಳು ಸರದಿಯನ್ವಯ 24 ಗಂಟೆ ಕಾಲ ಕಾರ್ಯನಿರ್ವಹಿಸಲಿದ್ದಾರೆ. ದೂರು ನೀಡಿದ 30 ನಿಮಿಷದಲ್ಲಿಯೇ ಕ್ರಮ ಕೈಗೊಳ್ಳಲು ಸಂಬಂಧಿ 
ಸಿದ ಕ್ಷೇತ್ರದ ಆರ್‌.ಒ. ಗಳಿಗೆ ನೇರವಾಗಿ ದೂರು ಸಲ್ಲಿಸುವುದು ಒಳಿತು ಎಂದರು.

 ಜಿಲ್ಲೆಯಲ್ಲಿ 117 ಆಕ್ಸಲರಿ ಮತದಾನ ಕೇಂದ್ರಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಇಂದು ಹೊಸದಾಗಿ ವಿವಿಪ್ಯಾಟ್‌ ಮತ್ತು ಇ.ವಿ.ಎಂ ಯಂತ್ರಗಳು ಬಂದಿದ್ದು, ಎಫ್‌.ಎಲ್‌.ಸಿ. ಮಾಡಲಾಗುವುದು. ಜಿಲ್ಲೆಯ ಗಡಿಯಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಇದಲ್ಲದೆ ಅಬಕಾರಿ ಇಲಾಖೆಯಿಂದ 16 ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದ್ದು, ಅಕ್ರಮ ಮದ್ಯ ಸಾಗಣೆ ಮತ್ತು ಶೇಖರಣೆ ಬಗ್ಗೆ ಪ್ರತಿದಿನ ವರದಿ ನೀಡಲಿದೆ ಎಂದರು. 

ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಶಶಿಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಜ್ಯ ಹಾಗೂ ಅಂತರ ಜಿಲ್ಲೆ ಗಡಿಯಲ್ಲಿ ಸ್ಥಾಪಿಸಲಾದ 27 ಚೆಕ್‌ ಪೋಸ್ಟ್‌, ಫ್ಲೆ„ಯಿಂಗ್‌ ಸ್ಕ್ವಾಡ್‌, 200 ಸೆಕ್ಟರ್‌ ತಂಡಕ್ಕೆ ಸಂಜೆಯೊಳಗೆ ಅಗತ್ಯ ಸಿಬ್ಬಂದಿ ಪೂರೈಸಲಾಗುವುದು. ಶಾಂತಿಯುತ ಚುನಾವಣೆ ಜರುಗಲು ಮುನ್ನೆಚ್ಚರಿಕೆಯಾಗಿ 380 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2000
ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳಿದ್ದು, ಇದರಲ್ಲಿ 1500ಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದವು ವಶಕ್ಕೆ ಪಡೆಯಲಾಗುತ್ತಿದೆ. ಕೆಲವು ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟಿಕೊಳ್ಳಲು ವಿನಾಯಿತಿ ಇರುವುದರಿಂದ, ಇದಕ್ಕೆ ಆಯೋಗದ
ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ. ಒಟ್ಟಾರೆ 9 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಪೊಲೀಸ್‌ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ತರಬೇತುದಾರ ಮಾಸ್ಟರ್‌ ಟ್ರೇನರ್‌ ಮಹಾಂತೇಶ ಸ್ವಾಮಿ ಇ.ವಿ.ಎಂ ಮತ್ತು ವಿವಿಪ್ಯಾಟ್‌ ಮತಯಂತ್ರದ ಕಾರ್ಯನಿರ್ವಹಿಸುವ ಕುರಿತು ಸಮಗ್ರ ಮಾಹಿತಿಯನ್ನು ಪ್ರಾಯೋಗಿಕವಾಗಿ ರಾಜಕೀಯ ಪಕ್ಷದವರಿಗೆ ಹಾಗೂ ಪತ್ರಕರ್ತರಿಗೆ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎ.ಎಸ್‌.ಪಿ. ಮಿತುನಕುಮರ ಜಿ.ಕೆ., ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ಪತ್ರಕರ್ತರು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು.

ಚುನಾವಣೆ: ಅಕ್ರಮ ಮದ್ಯ ತಡೆಗೆ ತಂಡ ರಚನೆ
ಕಲಬುರಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಚುನಾವಣೆಯು ಶಾಂತಿ ಮತ್ತು ಮುಕ್ತವಾಗಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಅಕ್ರಮವಾಗಿ ಸಾರಾಯಿ, ಸೇಂದಿ, ಮದ್ಯವನ್ನು ಸಾಗಾಟ ಮಾಡದಂತೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ಈ ತಂಡ ದಿನದ 24 ಗಂಟೆ ಕೆಲಸ ಮಾಡುತ್ತದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಇಂತಹ ಅಕ್ರಮಗಳ ಕುರಿತು ದೂರು ನೀಡಲು ಕಂಟ್ರೋಲ್‌ ರೂಂ ಸ್ಥಾಪಿಸಿ, ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲಿಗೆ ದೂರು ನೀಡಬೇಕು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

 ವಿಶೇಷ ತಂಡ: ಅಬಕಾರಿ ನಿರೀಕ್ಷಕ ಎಂ.ಎನ್‌. ಜಹಾಗೀರದಾರ, ಅಬಕಾರಿ ರಕ್ಷಕರುಗಳಾದ ವಿಠuಲ ಮತ್ತು ಪೀರಪ್ಪ ಇವರನ್ನು ನೇಮಿಸಲಾಗಿದ್ದು, ಇವರ ಮೊಬೈಲ್‌ ಸಂಖ್ಯೆ 9449597145 ಇರುತ್ತದೆ. ಕಲಬುರಗಿ ವಿಚಕ್ಷಣ ದಳ ಉಪವಿಭಾಗಕ್ಕೆ ಅಬಕಾರಿ ಉಪ ಅಧೀಕ್ಷಕ ನಿಂಬಣ್ಣ ಕಾಮಗೊಂಡ, ಅಬಕಾರಿ ಉಪ ನಿರೀಕ್ಷಕ ದಿಗಂಬರ ಕುಲಕರ್ಣಿ ಹಾಗೂ ಅಬಕಾರಿ ಹಿರಿಯ ರಕ್ಷಕ ಬಸವರಾಜ ಎಂ.
ಇವರನ್ನು ನೇಮಿಸಿದ್ದು, ಇವರ ಮೊಬೈಲ್‌ ಸಂಖ್ಯೆ 9449597146 ಇರುತ್ತದೆ. ಅದೇ ರೀತಿ ಚಿತ್ತಾಪುರ ವಿಚಕ್ಷಣದಳ ವಿಭಾಗಕ್ಕೆ ಅಬಕಾರಿ ಉಪ ಅಧೀಕ್ಷಕ ಗ್ಲಾಡಸನ್‌ ಸಂಜಯಕುಮಾರ, ಅಬಕಾರಿ ಉಪ ನಿರೀಕ್ಷಕ ಧನರಾಜ ಮತ್ತು ಅಬಕಾರಿ ಹಿರಿಯ ರಕ್ಷಕ ಮಲ್ಲಿಕಾರ್ಜುನ ಇವರನ್ನು ನೇಮಿಸಲಾಗಿದ್ದು, ಇವರ ಮೊಬೈಲ್‌ ಸಂಖ್ಯೆ 9449597148 ಇರುತ್ತದೆ. ನಿಯಂತ್ರಣಾ ಕೊಠಡಿಗಳ ವಿವರ: ಕಲಬುರಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ 08472-278682, ಕಲಬುರಗಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ 08472-278684 ಹಾಗೂ ಚಿತ್ತಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ 08474-236811
ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಪೋಸ್ಟರ್ ಮುದ್ರಣಕ್ಕೂ ಅನುಮತಿ ಕಡ್ಡಾಯ
ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಪ್ರಚಾರದ ಭಿತ್ತಿಪತ್ರ, ಕರಪತ್ರ, ಹ್ಯಾಂಡಬಿಲ್‌, ಪೋಸ್ಟರ್, ಫ್ಲೆಕ್ಸ್‌ ಸೇರಿದಂತೆ ಅನೇಕ ಪ್ರಚಾರ ಮಾದರಿಯ ಪುಸ್ತಕ, ಕಿರುಹೊತ್ತಿಗೆಗಳು ಮುದ್ರಣ ಮಾಡುವ ಮುನ್ನ ಮುದ್ರಕರು ಸಂಬಂಧಿ 
ಸಿದ ಕ್ಷೇತ್ರ ಚುನಾವಣಾಧಿಕಾರಿಗಳ ಅನುಮತಿ ಪಡೆದಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಮಾತ್ರ ಮುದ್ರಣ ಮಾಡಬೇಕು ಎಂದು ಜಿಲ್ಲಾ
ಚುನಾವಣಾಧಿ ಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ನಾಯಕರು ಮತ್ತು ಪ್ರಿಂಟಿಂಗ್‌ ಪ್ರಸ್‌ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಅವಧಿ ಇದಾಗಿರುವುದರಿಂದ ಆಯಾ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಖರ್ಚು ವಿವರಗಳನ್ನು ಅವರ ಪಕ್ಷ ಮತ್ತು ವೈಯಕ್ತಿಕ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಯಾವುದೇ ರಾಜಕೀಯ ಪ್ರಚಾರ ಸಾಮಗ್ರಿಯಾಗಲಿ, ಅಥವಾ ಸಂಘ-ಸಂಸ್ಥೆ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿ ಮುದ್ರಿಸುವ ಮುನ್ನವು ಸಹ ಚುನಾವಣಾ ಧಿಕಾರಿಗಳು ನೀಡಿರುವ ಅನುಮತಿ ಪತ್ರ ಗಮನಿಸುವುದು ಕಡ್ಡಾಯ. ಚುನಾವಣಾಧಿಕಾರಿಗಳ ಅನುಮತಿ
ಇಲ್ಲದೆ ಮುದ್ರಣ ಮಾಡಿದಲ್ಲಿ ಅಂತಹ ಮುದ್ರಕರ ಅಂಗಡಿಗಳನ್ನು ವಶಪಡಿಸಿಕೊಂಡು ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜನತಾ ಪ್ರಾತಿನಿಧ್ಯ ಅಧಿನಿಯಮ 1951ರ 127(ಎ)ರನ್ವಯ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸವಿಲ್ಲದೆ ಪ್ರಚಾರ ಸಾಮಗ್ರಿ ಮುದ್ರಿಸುವುದು ನಿರ್ಬಂಧಿಸಲಾಗಿದೆ. ಪ್ರತಿ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ ಮತ್ತು ಪ್ರಕಾಶಕರ ವಿವರ ಕಡ್ಡಾಯ. ಮುದ್ರಣ ಮಾಡುವ ಮುನ್ನ ಪ್ರಕಾಶಕರಿಂದ ಘೋಷಣಾ ಪತ್ರ ಪಡೆಯಬೇಕು.
ಈ ಘೋಷಣಾ ಪತ್ರಕ್ಕೆ ಪ್ರಕಾಶಕನನ್ನು ಚೆನ್ನಾಗಿ ಪರಿಚಯವುಳ್ಳ ಇಬ್ಬರು ವ್ಯಕ್ತಿಗಳಿಂದ ದೃಢೀಕರಣ ಪಡೆಯಬೇಕು.

ಮುದ್ರಣದ ನಂತರ ಘೋಷಣಾ ಪತ್ರದೊಂದಿಗೆ ಪ್ರಚಾರ ಸಾಮಗ್ರಿಯ ದಸ್ತಾವೇಜು ಪ್ರತಿ ಸಮಂಜಸವಾದ ಸಮಯದೊಳಗೆ ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಚುನಾವಣೆಯ ಈ ಎಲ್ಲ ಮಾರ್ಗಸೂಚಿಗಳನ್ನು ಮುದ್ರಕರು ಗಮನಿಸುವುದು ಮತ್ತು ಅದರಂತೆ ಕ್ರಮ ವಹಿಸುವುದು. ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳು ಶಿಕ್ಷೆ ಮತ್ತು 2000
ರೂ. ದಂಡ ವಿ ಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಲ್ಲದೆ ಯಾವುದೆ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಅಪೀಲು ಮಾಡುವಂತಹ ಮತ್ತು ಪ್ರತಿಸ್ಪರ್ಧಿಯ ಚಾರಿತ್ರವಧೆ ಮಾಡುವಂತಹ ವಿಷಯಗಳನ್ನು ಪ್ರಕಟಿಸಿ ಪ್ರತಿಕೂಲ
ಪರಿಣಾಮ ಬೀರಿದಲ್ಲಿ ಅಂತಹವರ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾರ್ಚ್‌ 29ರೊಳಗೆ ಘೋಷಣಾ ಪತ್ರ ಸಲ್ಲಿಸಿ: ಜಿಲ್ಲೆಯಲ್ಲಿನ ಎಲ್ಲ ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ತಮ್ಮ ಪ್ರಿಂಟಿಂಗ್‌ ಪ್ರಸ್‌ ವಿವರ
ಒಳಗೊಂಡ ಘೋಷಣಾ ಪತ್ರವನ್ನು ಮಾ.29ರ ಸಂಜೆ ಒಳಗಾಗಿ ಜಿಲ್ಲಾ ಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು.

ತರಬೇತುದಾರ ಮಾಸ್ಟರ್‌ ಟ್ರೇನರ್‌ ಮಹಾಂತೇಶ ಸ್ವಾಮಿ ಅವರು ಮುದ್ರಕರು ಮತ್ತು ರಾಜಕೀಯ ಪಕ್ಷಗಳು ಪ್ರಚಾರ ಸಾಮಗ್ರಿ ಮುದ್ರಣ ಮತ್ತು ಪ್ರಕಾಶನಕ್ಕೆ ಸಂಬಂ ಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ರಾಜಕೀಯ ಪಕ್ಷದ ಪ್ರತಿನಿ ಧಿಗಳು ಮತ್ತು ಪ್ರಿಂಟಿಂಗ್‌ ಪ್ರಸ್‌ ಮಾಲೀಕರು ಭಾಗವಹಿಸಿದ್ದರು.

ಪಕ್ಷಗಳ ಖರ್ಚು-ವೆಚ್ಚದ ಮೇಲೆ ನಿಗಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯಕ್ರಮ, ಸಮಾರಂಭಗಳಿಗೆ ಉಪಯೋಗಿಸಲಾಗುವ ಶಾಮಿಯಾನ, ಕ್ಯಾಪ್‌, ಟವಲ್‌, ತಾತ್ಕಾಲಿಕ ವೇದಿಕೆ, ಬ್ಯಾನರ್‌, ಫ್ಲೆಕ್ಸ್‌, ಸ್ಪೀಕರ್‌, ಕರಪತ್ರ ಹೀಗೆ ಅನೇಕ ವಸ್ತು ಹಾಗೂ ಉಪಹಾರ, ಊಟ, ನೀರು ಸೇರಿದಂತೆ ಇನ್ನಿತರ ಸಾಮಗ್ರಿಗಳಿಗೆ ದರ ನಿಗದಿಪಡಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ವಾಹಿನಿಯಲ್ಲಿ ನೀಡಲಾಗುವ ಜಾಹೀರಾತಿಗೂ ದರ ಇದ್ದು, ಇದೆಲ್ಲದರ ಖರ್ಚನ್ನು ಆಯಾ ರಾಜಕೀಯ ಪಕ್ಷದ ಖಾತೆಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ನಾಮನಿರ್ದೇಶನ ಮಾಡಿದ ನಂತರ ಅಭ್ಯರ್ಥಿಗಳು
ಚುನಾವಣೆಗೆಂದೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆಗೆದು ಈ ಬಗ್ಗೆ ಕ್ಷೇತ್ರದ ಸಹಾಯಕ ಚುನಾವಣಾ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಬೇಕು. ನಾಮನಿರ್ದೇಶನ ಸಲ್ಲಿಸಿದ ನಂತರ ನಿಯಮಾವಳಿಯನ್ವಯ ಅಭ್ಯರ್ಥಿ ಲೆಕ್ಕದಲ್ಲಿ ಈ ಖರ್ಚು-ವೆಚ್ಚವನ್ನು ಸೇರಿಸಲಾಗುತ್ತದೆ. ವಸ್ತುಗಳ ಉಪಯೋಗದ ಕುರಿತು ನಿಗದಿಪಡಿಸಲಾಗಿರುವ ದರದ ಬಗ್ಗೆ ಕರಡು ಅ ಧಿಸೂಚನೆ ಹೊರಡಿಸಲಾಗಿದ್ದು, ರಾಜಕೀಯ ಪಕ್ಷಗಳು ಇದನ್ನು ಗಮನಿಸಿ ಇದಕ್ಕೆ ಸಂಬಂಧಿ ಸಿದಂತೆ ತಮ್ಮ ಅಹವಾಲುಗಳಿದ್ದಲ್ಲಿ ಸಲ್ಲಿಸಬಹುದು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.