ಮೋದಿ ಬಲಪಡಿಸಲು ಖೂಬಾಗೆ ಮತ ನೀಡಿ

Team Udayavani, Apr 16, 2019, 12:40 PM IST

ಆಳಂದ: ನರೇಂದ್ರ ಮೋದಿ ಅವರನ್ನು ಮತ್ತಷ್ಟು ಬಲಪಡಿಸಲು ಬೀದರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಎಂದಿನಂತೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಜಿಡಗಾ ಗ್ರಾಮದಲ್ಲಿ ಜಿಡಗಾ ಮತ್ತು ಸರಸಂಬಾ ಜಿಪಂ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿ ಸೋಮವಾರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನ ಮಂತ್ರಿಗಳು
ತನಗಾಗಿ ಮಾಡಿಕೊಳ್ಳದೆ ದೇಶಕ್ಕಾಗಿ ಏನೆಯಲ್ಲ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಜನಪರ ಯೋಜನೆಗಳು
ಜಾರಿಗೆ ತಂದಿದ್ದಾರೆ. ಅವರು ಮತ್ತೂಮ್ಮೆ ಪ್ರಧಾನಿಯಾಗಿಸಲು ರಾಜ್ಯದಲ್ಲಿನ ಖುಬಾ ಸೇರಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಕ್ಷೇತ್ರದಲ್ಲಿ ಸಾಕಷ್ಟು ದೂರದೃಷ್ಟಿಯುಳ್ಳ ಹೆದ್ದಾರಿ, ರೈಲ್ವೆ ಮಾರ್ಗಗಳನ್ನು ವಿಸ್ತರಿಸಲು ಶ್ರಮಿಸಿದ್ದೇನೆ. ಬಾಕಿ ಇರುವ ಸಾಕಷ್ಟು ಕೆಲಸಗಳನ್ನು ಮಾಡಲು ಈ ಚುನಾವಣೆಯಲ್ಲಿ ಮತದಾರರು
ಆಶೀರ್ವದಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ, ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಮಲ್ಲಣ್ಣಾ ನಾಗೂರೆ, ಸಂತೋಷ ಹಾದಿಮನಿ, ವಿಜಯಲಕ್ಷ್ಮೀರಾಗಿ, ಮಹಿಬೂಬ ಆಳಂದಕರ, ಬಸವರಾಜ ನೆಲ್ಲೂರ, ಮಹಾಂತಪ್ಪ ಆಲೂರೆ ಸರಸಂಬಾ, ಮಲ್ಲಿಕಾರ್ಜುನ ಪಾಟೀಲ ಸಕ್ಕರಗಾ, ರಾಜಶೇಖರ ಮಲಶೆಟ್ಟಿ, ಅಪ್ಪಾಸಾಹೇಬ ಗುಂಡೆ, ಗುರುಶಾಂತ ಪಾಟೀಲ ನಿಂಬಾಳ, ಮಲ್ಲಿನಾಥ ಒಡೆಯರ್‌, ಬಸವರಾಜ ಸಾಣಕ, ಶಿವಶರಣಪ್ಪ ಮಲಶೆಟ್ಟಿ, ಸಂಜಯ ಮಿಸ್ಕಿನ್‌, ಮಹೇಶ ಸೂರೆ ಪ್ರಚಾರದಲ್ಲಿ ತೊಡಗಿದರು.
ಹಣಮಂತರಾವ್‌ ಹಣಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚನ್ನವೀರ ಕಾಳಕಿಂಗೆ ಸ್ವಾಗತಿಸಿದರು. ಈ ಮೊದಲು ಮಮದಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಮತಯಾಚನೆ ಕೈಗೊಂಡರು.

ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ನಾನು ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ನಡೆಸಿದ್ದೇನೆ, ನನ್ನ ಸರ್ಕಾರದ ಸಾಧನೆ ಪಟ್ಟಿ ಕೊಡುತ್ತೇನೆ. ಅದೇ ರೀತಿ ಪ್ರಧಾನಿಯಾಗಿ ಐದು ವರ್ಷದ ಸಾಧನೆ...

  • ಕಲಬುರಗಿ: ನಾನು ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ನಡೆಸಿದ್ದೇನೆ, ನನ್ನ ಸರ್ಕಾರದ ಸಾಧನೆ ಪಟ್ಟಿ ಕೊಡುತ್ತೇನೆ. ಅದೇ ರೀತಿ ಪ್ರಧಾನಿಯಾಗಿ ಐದು ವರ್ಷದ ಸಾಧನೆ...

  • ಕಲಬುರಗಿ: ನನ್ನೆಲ್ಲ ವೈದ್ಯ ಮಿತ್ರರು ತಾವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆಂದು ಭಾವಿಸಿಕೊಂಡು ನನ್ನನ್ನು ಬೆಂಬಲಿಸಬೇಕು. ನಾನು ಗೆದ್ದರೆ ವೈದ್ಯ ಬಳಗದ...

  • ಕಲಬುರಗಿ/ವಾಡಿ: ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ವಿಧಾನಸಭೆ ಪ್ರತಿನಿಧಿಸಿದ್ದ ಹಾಗೂ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರ...

  • ಕಲಬುರಗಿ: ಒಂಭತ್ತು ಸಲ ಶಾಸಕರಾಗಿ, ರಾಜ್ಯ ಹಾಗೂ ಕೇಂದ್ರದ ಮಂತ್ರಿಯಾಗಿ, ವಿಪಕ್ಷ ನಾಯಕನಾಗಿ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಸೇರಿದಂತೆ ನೀಡಲಾದ ಎಲ್ಲ ಸ್ಥಾನಗಳನ್ನು...

ಹೊಸ ಸೇರ್ಪಡೆ