ಕ್ವಾರಂಟೈನ್‌ಗೆ ಕಟ್ಟಡ ಕೊರತೆ

ಖಾಸಗಿ ಕಟ್ಟಡ ಮಾಲೀಕರ ಅಸಹಕಾರ |ತಾಲೂಕಾಡಳಿತಕ್ಕೆ ದೊಡ್ಡ ತಲೆ ನೋವು

Team Udayavani, May 21, 2020, 3:43 PM IST

21-May-17

ಸಾಂದರ್ಭಿಕ ಚಿತ್ರ

ಯಡ್ರಾಮಿ: ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಆದ ಬೆನ್ನಲ್ಲೆ ಬೇರೆ-ಬೇರೆ ಕಡೆಗಳಿಂದ ತಮ್ಮ ತವರುಗಳಿಗೆ ಮರಳಿದ ಜನರಿಗಾಗಿ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಹಲವು ಗ್ರಾಮಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಾಗಿದೆ.

ಪಟ್ಟಣ ಸೇರಿದಂತೆ ಮಳ್ಳಿ, ಕುರುಳಗೇರಾ, ಕೊಂಡಗೂಳಿ, ಯಾಳವಾರ, ಇಜೇರಿ ಗ್ರಾಮಗಳಲ್ಲಿ ಸಾವಿರಾರು ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಪಟ್ಟಣವೊಂದರಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಡಾ| ಅಂಬೇಡ್ಕರ್‌ ಭವನ, ಅಲ್ಪಸಂಖ್ಯಾತ ವಸತಿ ನಿಲಯ, ಯುಕೆಪಿ ಕ್ಯಾಂಪ್‌ ಸೇರಿದಂತೆ ಒಟ್ಟು 4 ಕೇಂದ್ರಗಳಲ್ಲಿ 250 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸ್ಥಳೀಯ ಗ್ರಾಪಂ ವತಿಯಿಂದ ಕ್ವಾರಂಟೈನ್‌ ಆದ ಜನರ ನಿತ್ಯ ಜೀವನದ ನಿರ್ವಹಣೆ ವ್ಯವಸ್ಥಿತವಾಗಿ ಸಾಗುತ್ತಿದ್ದರೂ ಕ್ವಾರಂಟೈನ್‌ನಲ್ಲಿದ್ದ ಕೆಲವರು ಪಂಚಾಯಿತಿ ಹಾಗೂ ತಾಲೂಕಾಡಳಿತ ಸಿಬ್ಬಂದಿ ಜೊತೆಗೆ ಅಸಹಕಾರ ನೀಡುತ್ತಿರುವುದು ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಇದು ಒಂದು ಸಮಸ್ಯೆಯಾದರೆ, ನಾಲ್ಕನೇ ಹಂತದ ಲಾಕ್‌ಡೌನ್‌ ಇನ್ನಷ್ಟು ಸಡಿಲಿಕೆ ಆದ ಕಾರಣ ವಲಸೆ ಹೋದ ಜನ ಮರಳಿ ಬರುತ್ತಿರುವುದರಿಂದ ಕ್ವಾರಂಟೈನ್‌ ಮಾಡಲು ಪಟ್ಟಣದ ಹೊರವಲಯದಲ್ಲಿ ಕಟ್ಟಡಗಳ ಕೊರತೆ ಕಂಡುಬರುತ್ತಿದೆ. ಪಟ್ಟಣದ ಹೊರವಲಯದ ಅಲ್ಲೊಂದು ಇಲ್ಲೊಂದು ಇರುವ ಕಟ್ಟಡ ಕೇಳಿದರೆ ಖಾಸಗಿ ವ್ಯಕ್ತಿಗಳು ಸಹಕಾರ ನೀಡದಿರುವುದು ತಾಲೂಕಾಡಳಿತಕ್ಕೆ ಇನ್ನೊಂದು ಸಮಸ್ಯೆಯಾಗಿದೆ. ಸಾಮಾಜಿಕ ಕಳಕಳಿಯ ಉದ್ದೇಶಕ್ಕಾಗಿ ನಿರ್ಮಾಣಗೊಂಡ ಬಹುತೇಕ ಕಟ್ಟಡಗಳು ಕ್ವಾರಂಟೈನ್‌ ಹೊಂದುವ ಜನತೆಗೆ ಕೆಲಕಾಲ ಆಶ್ರಯ ನೀಡಿದರೆ, ಕೋವಿಡ್ ತಂದೊಡ್ಡಿದ ಬಿಕ್ಕಟ್ಟಿಗೆ ಪರಿಹಾರವಾಗಿ ನಿಂತಂತಾಗುತ್ತದೆ. ಜೊತೆಗೆ ನಮಗೆ ಸಹಕಾರ ನೀಡುವುದು ಅಷ್ಟೇ ಅಗತ್ಯವಾಗಿದೆ ಎಂಬುದು ತಾಲೂಕಾಡಳಿತ ಸಿಬ್ಬಂದಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಒಕ್ಕೊರಲಿನ ಕೂಗಾಗಿದೆ.

ಕ್ವಾರಂಟೈನ್‌ ಆದ ಜನರಿಗೆ ಪಂಚಾಯಿತಿ ಇಂದಲೇ ಉತ್ತಮ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೂ ಅಲ್ಲಿದ್ದ ಕೆಲವರು ತಮಗಿಷ್ಟವಾದ ಆಹಾರ ತರುವಂತೆ ಸಿಬ್ಬಂದಿ ಜೊತೆ ಕಿರಿಕಿರಿ ಮಾಡುವುದು ಸರಿಯಲ್ಲ. ಕ್ವಾರಂಟೈನ್‌ ಆದ ಜನರು ಕೆಲ ದಿನಗಳ ಮಟ್ಟಿಗೆ ಸಹಕಾರ ನೀಡುವುದು ಮುಖ್ಯವಾಗಿದೆ. ಬಾಬುಗೌಡ,
ಯಡ್ರಾಮಿ ಗ್ರಾಪಂ ಪಿಡಿಒ

ವಲಸೆ ಹೋದ ಜನರ ಆಗಮನ ದಿನದಿಂದ-ದಿನಕ್ಕೆ ಹೆಚ್ಚುತ್ತಿರುವುದರಿಂದ ಲಭ್ಯವಿದ್ದ ಸರ್ಕಾರಿ ಕಟ್ಟಡಗಳು ಭರ್ತಿಯಾಗಿವೆ. ಇನ್ನು ಮುಂದೆ ಆಗಮಿಸುವ ಜನರನ್ನು ಕ್ವಾರಂಟೈನ್‌ ಮಾಡಲು ಖಾಸಗಿ ಕಟ್ಟಡಗಳ ಮಾಲೀಕರ ಸಹಕಾರ ತುಂಬಾ ಅಗತ್ಯವಾಗಿದೆ.
ಬಸಲಿಂಗಪ್ಪ ನೈಕೋಡಿ,
ತಹಶೀಲ್ದಾರ್‌ ಯಡ್ರಾಮಿ

ಟಾಪ್ ನ್ಯೂಸ್

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

22-gavanil

ಕಾಮನ್‌ವೆಲ್ತ್‌ ಗೇಮ್ಸ್‌ : 10,000 ಮೀ. ನಡಿಗೆ:  ಸಂದೀಪ್‌ಗೆ ಕಂಚು

21-meeting

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌

arrest-25

ಕಾಮೋತ್ತೇಜನ ಔಷಧಕ್ಕಾಗಿ ಅಕ್ರಮ ಸಾಗಾಟ: 295 ಆಮೆಗಳ ಸಹಿತ ಓರ್ವನ ಬಂಧನ

Covid

ರಾಜ್ಯದಲ್ಲಿಂದು 1,837 ಕೋವಿಡ್‌ ಸೋಂಕು: ನಾಲ್ವರು ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6road

ರಸ್ತೆ ಅಗಲೀಕರಣಕ್ಕೆ ಆಸ್ತಿ ಮಾಲೀಕರ ಒಪ್ಪಿಗೆ

5kalaburugi

ಆಸ್ತಿ ನಗದೀಕರಣಕ್ಕೆ ಮುಂದಾದ ಕೆಕೆಆರ್‌ಟಿಸಿ

4flag

ಐದು ದಿನ ರಾಷ್ಟ್ರಧ್ವಜ ಹಾರಿಸಲು ಮನವಿ

2card

ಆರೋಗ್ಯ ಕಾರ್ಡ್‌ ವಿತರಣೆ ಚುರುಕಿಗೆ ಜಾಧವ ಸೂಚನೆ

12-road

ಮಿರಿಯಾಣ ರಸ್ತೆಯಲ್ಲಿ ನೀರು-ಸಂಚಾರ ಅಸ್ತವ್ಯಸ್ತ

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

1-adsdsa

ಪ್ಯಾರಾ ಟಿಟಿ: ಭವಿನಾ ಪಟೇಲ್‌ಗೆ ಚಿನ್ನ; ಸೋನಾಲ್‌ ಬೆನ್‌ಗೆ ಕಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

22-gavanil

ಕಾಮನ್‌ವೆಲ್ತ್‌ ಗೇಮ್ಸ್‌ : 10,000 ಮೀ. ನಡಿಗೆ:  ಸಂದೀಪ್‌ಗೆ ಕಂಚು

1-sad-ad

ಕೊರಟಗೆರೆ: ಅನಿಲ್‌ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.