ಐದು ದಶಕದ ಗ್ರಂಥಾಲಯಕ್ಕಿಲ್ಲ ಸ್ವಂತ ಸೂರು

ಪದೇ ಪದೇ ಕಟ್ಟಡ ಸ್ಥಳಾಂತರಗೊಳ್ಳುವ ಸಂಚಾರಿ ಗ್ರಂಥಾಲಯ ಓದುಗರಿಗೆ ಬೇಸರ

Team Udayavani, Nov 1, 2019, 5:52 PM IST

ಕಂಪ್ಲಿ: ಸ್ಥಳೀಯ ಪಟ್ಟಣದಲ್ಲಿ ಓದುಗರ ಮನ ತಣಿಸಲು ಸುಮಾರು 5 ದಶಕಗಳ ಹಿಂದೆ 1965ರಲ್ಲಿ ಆರಂಭಿಸಲಾದ ಸಾರ್ವಜನಿಕ ಶಾಖಾ ಗ್ರಂಥಾಲಯ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದ್ದು, ಒಂದು ರೀತಿಯಲ್ಲಿ ಸಂಚಾರಿ ಗ್ರಂಥಾಲಯವಾಗಿದೆ.

ಆರಂಭದಲ್ಲಿ ಪುರಸಭೆ ಕಟ್ಟಡದಲ್ಲಿ ಆರಂಭವಾದ ಈ ಗ್ರಂಥಾಲಯ, ಮುದ್ದಾಪುರ ರಸ್ತೆಯ ಪುರಸಭೆ ಮಾಜಿ ಅಧ್ಯಕ್ಷ ಎಂ. ಪಂಪಣ್ಣವರ ಕಟ್ಟಡಕ್ಕೆ ನಂತರ ಆರ್‌ಎಸ್‌ಎಸ್‌ಎನ್‌ ಸೊಸೈಟಿ ಕಟ್ಟಡಕ್ಕೆ, ಅಲ್ಲಿಂದ ಪಟ್ಟಣದ ಮುಖ್ಯಬೀದಿಯ ಕಲ್ಗುಡಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡಿತ್ತು.

ಇದೀಗ ವ್ಯವಸಾಯೋತ್ಪನ್ನ ಮಾರುಕಟ್ಟೆಯ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಮೇಲಿಂದ ಮೇಲೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಓದುಗರಿಗೆ ತೀವ್ರ ತೊಂದರೆಯಾಗಿದೆ.

ದೊಡ್ಡ ಪುರಸಭೆ ಎನ್ನುವ ಹೆಗ್ಗಳಿಗೆ ಗಳಿಸಿದ್ದರೂ ಸಹಿತ ಸಾರ್ವಜನಿಕ ಗ್ರಂಥಾಲಯಕ್ಕೆ ಒಂದು ನಿವೇಶನ ಒದಗಿಸಲು ಸಾಧ್ಯವಾಗಿಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಗ್ರಂಥಾಲಯದಲ್ಲಿ ಹೈದರಾಬಾದ್‌ ಕರ್ನಾಟಕದ 443 ಪುಸ್ತಕಗಳು ಸೇರಿದಂತೆ ಒಟ್ಟು 27,111 ಪುಸ್ತಕಗಳಿದ್ದು, ಎಲ್ಲ ಪುಸ್ತಕಗಳನ್ನು ಜೋಡಿಸಿಡಲು ಡಿಅಲ್ಮೇರಾಗಳಿಲ್ಲ. ಇರುವ 11 ರ್ಯಾಕ್‌ಗಳಲ್ಲಿ ಮಾತ್ರ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ಉಳಿದ ಪುಸ್ತಕಗಳನ್ನು ನೆಲದ ಮೇಲೆ, ಸೆಲ್ಪ್ಗಳ ಮೇಲೆ ಬಟ್ಟೆಗಂಟುಗಳನ್ನು ಕಟ್ಟಿ ಇಡಲಾಗಿದೆಯಲ್ಲದೆ ಎಲ್ಲೆಂದರಲ್ಲಿ ಗಂಟು ಕಟ್ಟಿ ಇಡಲಾಗಿದೆ. ಇನ್ನು ಕೆಲವನ್ನಂತೂ ಮೂಲೆ ಮೂಲೆಗೆ ಬಿಸಾಡಲಾಗಿದೆ.

ಗ್ರಂಥಾಲಯಕ್ಕೆ 10 ಕನ್ನಡ ದಿನಪತ್ರಿಕೆಗಳು, 2 ಆಂಗ್ಲ ಪತ್ರಿಕೆಗಳು, 4 ವಾರಪತ್ರಿಕೆಗಳು, 7 ಮಾಸಪತ್ರಿಕೆಗಳು ಬರುತ್ತಿವೆ. ಗ್ರಂಥಾಲಯದಲ್ಲಿ 1505 ಸದಸ್ಯರಿದ್ದು, ಪ್ರತಿದಿನ 100ಕ್ಕೂ ಅಧಿಕ ಓದುಗರು ಬರುತ್ತಾರೆ. ಗ್ರಂಥಾಲಯದಲ್ಲಿ ಎರಡು ಕೊಠಡಿಗಳಿದ್ದು, ರ್ಯಾಕ್‌ಗಳ ಜತೆಗೆ 24 ಚೇರ್‌ಗಳಿದ್ದು, 5 ಟೇಬಲ್‌ಗ‌ಳು ಮಾತ್ರ ಇವೆ. 24 ಜನಗಳು ಮಾತ್ರ ಕುಳಿತು ಓದಲು ಅವಕಾಶವಿದ್ದು, ಇತರೆ ಓದುಗರು ಹೊರಗೆ ನಿಂತು ಓದಬೇಕು. ಗ್ರಂಥಾಲಯಕ್ಕೆ ಬರುವವರಿಗೆ ಪೂರಕ ವಾತಾವರಣವೇ ಇಲ್ಲದಂತಾಗಿದೆ.

ದಾನಿಗಳ ಕೊಡುಗೆ ಮೂಲೆ ಸೇರಿವೆ: ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪಟ್ಟಣದ 5-6 ಜನ ದಾನಿಗಳು ಗಣಕ ಯಂತ್ರ ಹಾಗೂ ಇತರೆ ಸಾಮಾನು ಕೊಡಿಸಿದ್ದರು. ಆದರೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಲು ಆಗದೇ ಅವುಗಳು ಸಹಿತ ಮೂಲೆ ಸೇರಿವೆ.

ಸಿಬ್ಬಂದಿ ಕೊರತೆ: ಈ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆಯೂ ಕಾಡುತ್ತಿದ್ದು, ಇದ್ದ ಗ್ರಂಥಪಾಲಕರು 2018ರಲ್ಲಿ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 11 ತಿಂಗಳಿನಿಂದ ಕಾಯಂ ಗ್ರಂಥಾಲಯ ಸಾವರ್ತಿ ಮತ್ತು ಗುತ್ತಿಗೆ ಆಧಾರದ ಗ್ರಂಥಾಲಯ ಸಹಾಯಕ ಗ್ರಂಥಾಲಯ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನಾಲ್ಕು ಸಿಬ್ಬಂದಿ ಕೊರತೆ ಕಾಡುತ್ತಿದೆ.

ಪಿಯುಸಿ, ಪದವಿ ತರಗತಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಅವರೆಲ್ಲರೂ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೇಳುತ್ತಾರೆ. ಅವರಿಗೆ ಇತ್ತೀಚಿನ ಪುಸ್ತಕಗಳು ಬೇಕು. ಬಡ ವಿದ್ಯಾರ್ಥಿಗಳು ಸಿಇಟಿ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಅವುಗಳನ್ನು ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಬೇಕು ಎನ್ನುವುದು ಅನೇಕ ಓದುಗರ ಆಗ್ರಹ. ಸ್ವಂತ ಕಟ್ಟಡ, ಸಿಬ್ಬಂದಿ, ಕಂಪ್ಯೂಟರ್‌, ಟೇಬಲ್‌, ಕುರ್ಚಿ, ರ್ಯಾಕ್‌ ಕೊರತೆ ಸೇರಿದಂತೆ ಅನೇಕ ಕೊರತೆ ಅನುಭವಿಸುತ್ತಿರುವ ಈ ಗ್ರಂಥಾಲಯಕ್ಕೆ ಅನುದಾನ ನೇರವಾಗಿ ಬರುವುದಿಲ್ಲ.

ಏನಿದ್ದರೂ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಬರುತ್ತವೆ. ಅಲ್ಲಿಂದಲೇ ಎಲ್ಲ ಕೆಲಸಗಳು ನಡೆಯಬೇಕು ಎನ್ನುತ್ತಾರೆ ಕೇಂದ್ರದ ಅಟೆಂಡರ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ