ಮಹತ್ವದ ಪಾತ್ರ ನಿರ್ವಹಿಸಲಿದೆ ನೌಕಾನೆಲೆ

2022ರ ವೇಳೆಗೆ ಕದಂಬ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಪೂರ್ಣ: ಮಹೇಶ ಸಿಂಗ್‌

Team Udayavani, Dec 5, 2019, 6:30 PM IST

ಕಾರವಾರ: ಭಾರತದ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾರವಾರದ ನೌಕಾನೆಲೆ ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಕರ್ನಾಟಕ ನೌಕಾದಳದ ಫ್ಲ್ಯಾಗ್ಆ ಫೀಸರ್‌ ಮಹೇಶ ಸಿಂಗ್‌ ಹೇಳಿದರು.

ಅವರು ಇಲ್ಲಿನ ಕದಂಬ ನೌಕಾನೆಲೆಯೊಳಗೆ ಏರ್ಪಡಿಸಿದ್ದ ನೇವಿ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು. 2022ರ ವೇಳೆಗೆ ಕದಂಬ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಮುಗಿಯಲಿದೆ. ಕದಂಬ ನೌಕಾನೆಲೆ ಭಾರತೀಯ ನೌಕಾಪಡೆಗೆ ಶಕ್ತಿ ತುಂಬಲಿದೆ. ನೌಕಾನೆಲೆ ನಿರ್ಮಾಣ ಪೂರ್ಣವಾದಾಗ ಸಮುದ್ರಯಾನ, ವ್ಯಾಪಾರ ವಹಿವಾಟಿಗೆ ಮತ್ತಷ್ಟು ಭದ್ರತೆ ಮತ್ತು ಸುರಕ್ಷತೆ ದೊರಕಲಿದೆ. ದೇಶದ ಕರಾವಳಿ ಸುರಕ್ಷತೆಗೆ ಹೆಚ್ಚಿನ ಮಹತ್ವ ಬಂದಿದ್ದು ಇದನ್ನು ಭಾರತೀಯ ನೌಕಾಪಡೆ ನಿಭಾಯಿಸುತ್ತಾ ಬಂದಿದೆ ಎಂದರು.

1971ರ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ವಿಜಯ ಸಾಧಿಸಿದ ನೆನಪಿಗಾಗಿ ಈ ನೇವಿ ಡೇ ಆಚರಿಸುತ್ತಾ ಬರಲಾಗುತ್ತಿದ್ದು, ಭಾರತೀಯ ನೌಕಾಪಡೆಗೆ ಇದು ಹೆಮ್ಮೆಯ ದಿನ ಎಂದೂ ಹೇಳಿದರು. ಭಾರತದ ನೌಕಾಪಡೆ ಏಷ್ಯಾದಲ್ಲಿ ಮಹತ್ವದ ನೆಲೆಯಾಗಿದ್ದು, ಅದರಲ್ಲಿ ಐಎನ್‌ ಎಸ್‌ ಕದಂಬಕ್ಕೆ ಮಹತ್ವ ಪಾತ್ರವಿದೆ. ನೌಕಾನೆಲೆ ಎರಡನೇ ಹಂತದ ಕಾಮಗಾರಿ ವೇಗವಾಗಿ ನಡೆದಿದೆ. ಎರಡನೇ ಹಂತದ ಕಾಮಗಾರಿ ಮುಗಿದಾಗ ನೌಕಾನೆಲೆಯಲ್ಲಿ ಅನೇಕ ಯುದ್ಧ ನೌಕೆಗಳು ನೆಲೆ ನಿಲ್ಲಲಿವೆ.

ದೇಶದ ಸಾಗರ ಮಾಲಾ ಯೋಜನೆಗೆ ನೌಕಾಪಡೆ ಸುರಕ್ಷತೆ ಒದಗಿಸಲಿದೆ. ಅಲ್ಲದೇ ಏರ್‌ಬೇಸ್‌ ನಿರ್ಮಾಣ ಸಹ ಪೂರ್ಣಗೊಂಡಾಗ ಐಎನ್‌ಎಸ್‌ ಕದಂಬ ಜೊತೆಗೆ ಇಡೀ ಕಾರವಾರ ಹಾಗೂ ಕರಾವಳಿ ಅತ್ಯಂತ ಸುರಕ್ಷಿತ ಪ್ರದೇಶವಾಗಲಿದೆ ಎಂದು ಸಿಂಗ್‌ ಅಭಿಪ್ರಾಯಪಟ್ಟರು.

ಅದ್ದೂರಿ ನೇವಿ ಬ್ಯಾಂಡ್‌ ಪ್ರದರ್ಶನ: ಸೀಬರ್ಡ್‌ ನೌಕಾನೆಲೆಯಲ್ಲಿ ನೌಕಾ ದಿನಾಚರಣೆ ಅಂಗವಾಗಿ ನೇವಿ ಬ್ಯಾಂಡ್‌ ಪ್ರದರ್ಶನ ಹಾಗೂ ನೌಕಾ ಧ್ವಜ ವಂದನೆ ಕಾರ್ಯಕ್ರಮ ನಡೆಯಿತು.

ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್‌ ರಿಯರ್‌ ಅಡ್ಮಿರಲ್‌ ಮಹೇಶ್‌ ಸಿಂಗ್‌ ಸೂರ್ಯಾಸ್ತದ ಸಮಯದಲ್ಲಿ ರಾಷ್ಟ್ರ
ಧ್ವಜ ಹಾಗೂ ನೌಕಾ ಧ್ವಜವನ್ನು ಅವರೋಹಣ ಮಾಡಿದರು. ಕಡಲಿನಲ್ಲಿ ನಿಂತಿದ್ದ ಐಎನ್‌ ಎಸ್‌ ಮಕರ, ಐಎನ್‌ಎಸ್‌ ತಿಲ್ಲಾಂಚಾಂಗ್‌ ಹಾಗೂ ಐಎನ್‌ಎಸ್‌ ಕೊಸ್ವಾರಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಫ್ಲಾಗ್‌ ಆಫೀಸರ್‌ ಪತ್ನಿ ಮನಿತಾ ಸಿಂಗ್‌, ನೌಕಾ ಅಧಿಕಾರಿಗಳಾದ ಪಿ.ಗೋಪಾಲಕೃಷ್ಣ, ಶ್ರೀಧರ ರಾಮಸ್ವಾಮಿ, ಇಫೆ¤ಕಾರ್‌ ಅಲಮ್‌, ಕಿರಣ ರೆಡ್ಡಿ, ಎಸ್‌.ಕುಮಾರ್‌, ಸಂಗೀತಾ ಕುಮಾರ್‌, ಸಂಗ್ರಾಮ್‌ ಕೆ., ಸುಜಾತಾ, ದೇವಕಿ ಮದ್ದುಲಾ, ಶ್ರೀನಿವಾಸ ಮದ್ದುಲಾ, ಆರ್‌.ಕೆ. ದಹಿಯಾ, ಜಿಲ್ಲಾ ನ್ಯಾಯಾಧೀಶೆ ವಿಪುಲಾ ಎಂ.ಬಿ. ಪೂಜಾರಿ, ಕೈಗಾ ಸ್ಥಳ ನಿರ್ದೇಶಕ ಸತ್ಯನಾರಾಯಣ, ಪ್ರಮುಖರಾದ ಎ.ಶಿಗ್ಗಾವಿ, ವೀಣಾ ಶಿಗ್ಗಾವಿ, ಶ್ರೇಯಾ ಸುರೇಂದ್ರ, ಆರ್‌. ರವಿ ಇತರರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸಿದ್ದಾಪುರ: ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯ ಶತಮಾನದಲ್ಲೊಮ್ಮೆ ಸಂಭವಿಸುವಂಥದ್ದು. ಅದರಿಂದ ಆದ ಅನಾಹುತಗಳನ್ನು ಎದುರಿಸಲು ರಾಜ್ಯ ಸರಕಾರ ಸವಾಲನ್ನೇ ಎದುರಿಸಬೇಕಾಗಿ...

  • ಹೊನ್ನಾವರ: ಮಂಗನ ಕಾಯಿಲೆ ಮತ್ತೆ ಆರಂಭವಾಗುವ ಲಕ್ಷಣ ಕಾಣಿಸಿಕೊಂಡಿದ್ದು 2020ರ ಜನೆವರಿಯಲ್ಲಿ ಸಿದ್ಧಾಪುರ ಹೊನ್ನೇಪಟಕಿ ಬಳಿ 6 ಮಂಗಗಳು ಮೃತಪಟ್ಟಿದ್ದು ಒಂದಕ್ಕೆ...

  • ಶಿರಸಿ: ತಾಲೂಕಿನ ಕೋಳಿಗಾರನಲ್ಲಿ ಭಾನುವಾರ ನಡೆದ ರಾಸು ಪ್ರದರ್ಶನ ಹಾಗೂ ಬರಡು ದನ ಚಿಕಿತ್ಸಾ ಶಿಬಿರ ಜನ ಮೆಚ್ಚುಗೆಗೆ ಪಾತ್ರವಾಯಿತು. ಕೆ.ಎಂ.ಎಫ್‌ ನಿರ್ದೇಶಕ...

  • ಕುಮಟಾ: ಪಟ್ಟಣದ ಗಿಬ್‌ ಸರ್ಕಲ್‌ ಬಳಿಯ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳ ತಂಡ, ಪ್ಲಾಸ್ಟಿಕ್‌ ಚೀಲಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು...

  • ಭಟ್ಕಳ: ಶಿರಾಲಿ ಗ್ರಾಪಂ ವ್ಯಾಪ್ತಿ ಹೈಟೆಕ್‌ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿರುವ ಮಹಿಳೆಯರು ಗ್ರಾಪಂ ಎದುರು ಮೀನು ಮಾರಾಟ ಮಾಡುವ ಮೂಲಕ ವಿಶಿಷ್ಟ...

ಹೊಸ ಸೇರ್ಪಡೆ